ಮುಖದ ಕಾಂತಿ ಹೆಚ್ಚಾಗಲು ಅಡುಗೆ ಮನೆಯಲ್ಲಿರುವ ಈ ವಸ್ತುವಿನಿಂದ ತಯಾರಿಸಿ ಫೇಸ್ಪ್ಯಾಕ್!

ನಾವೂ ಕೂಡ ನಾಲ್ಕು ಜನರ ಮುಂದೆ ಸುಂದರವಾಗಿ, ಸ್ಮಾರ್ಟ್ ಆಗಿ ಕಾಣಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಅದರಲ್ಲಿಯೂ ವಾರ್ಧಕ್ಯ ಹತ್ತಿರವಾದಂತೆ ತಮ್ಮ ತ್ವಚೆ ಹಾಗೂ ದೇಹದಲ್ಲಿ ಆಗುವ ಬದಲಾವಣೆಯನ್ನು ಮರೆ ಮಾಚಿ, ಯವ್ವನತೆಯ ಕಾಂತಿ ಹಾಗೂ ಸೌಂದರ್ಯವನ್ನು ಕಾಪಡಿಕೊಳ್ಳಬೇಕು ಎಂಬ ಹಂಬಲ ಸರ್ವೇ ಸಾಮಾನ್ಯ. ಮಾರ್ಕೆಟ್ನಲ್ಲಿ ಸಿಗುವ ಸೌಂದರ್ಯ ವರ್ಧಕಗಳು ದುಬಾರಿ. ಅಲ್ಲದೇ ಅದ್ರಲ್ಲಿ ಬರೀ ರಾಸಾಯನಿಕಗಳನ್ನ ಬಳಸಿರುತ್ತಾರೆ. ಇದರಿಂದಾಗಿ ಮುಖ ಮತ್ತಷ್ಟು ಹಾಳಾಗಬಹುದು. ಇದಕ್ಕಾಗೇ ಮನೆಯಲ್ಲೇ ಫೇಸ್ ಪ್ಯಾಕ್ ಬಳಸಿ, ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ.
ಇದನ್ನೂ ಓದಿ: ರಸಗುಲ್ಲಕ್ಕಾಗಿ ಮದುವೆ ಮನೆ ರಣರಂಗ! – ಸ್ವೀಟ್ಗಾಗಿ ಮದುವೆಯೇ ರದ್ದು!
ನಮ್ಮ ಪ್ರಕೃತಿಯಲ್ಲೇ ನಮ್ಮ ಆರೋಗ್ಯ, ಸೌಂದರ್ಯಕ್ಕೆ ಬೇಕಾದ ಅಂಶಗಳು ಇರುತ್ತವೆ. ಅದನ್ನು ನಾವು ಸರಿಯಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ಪಡೆಯಬಹುದು. ವಿಟಮಿನ್ಗಳು, ಪ್ರೊಟೀನ್ಗಳು ಮತ್ತು ಲ್ಯಾಕ್ಟಿಕ್ ಆಮ್ಲದ ಸಮೃದ್ಧ ಮಿಶ್ರಣದೊಂದಿಗೆ ಹಸಿ ಹಾಲು ಬಳಸಿ ನಿಮ್ಮ ತ್ವಚೆಯನ್ನು ಕಾಂತಿಯುಕ್ತವಾಗಿ ಮಾಡುತ್ತದೆ. ಹೀಗಾಗಿ ನೀವು ಕೂಡ ಹೊಳೆಯುವ ಚರ್ಮವನ್ನ ಬಯಸಿದರೆ, ಹಾಲಿನ ಫೇಸ್ಪ್ಯಾಕ್ ಅನ್ನ ಮನೆಯಲ್ಲೇ ತಯಾರಿಸಿ.
ಈ ಫೇಸ್ಪ್ಯಾಕ್ ತಯಾರಿಸಲು, ನಿಮಗೆ 2 ಚಮಚ ಹಸಿ ಹಾಲು, 1/2 ಚಮಚ ಜೇನುತುಪ್ಪ ಮತ್ತು 1/4 ಚಮಚ ಅರಿಶಿನ ಪುಡಿ ಬೇಕಾಗುತ್ತದೆ. ಈ ಮೂರು ನೈಸರ್ಗಿಕ ಪದಾರ್ಥಗಳನ್ನ ಒಂದು ಬಟ್ಟಲಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಪೇಸ್ಟ್ ತಯಾರಿಸಿ.
ನಿಮ್ಮ ಸಂಪೂರ್ಣ ಮುಖ ಮತ್ತು ಕುತ್ತಿಗೆಗೆ ಹಾಲಿನ ಫೇಸ್ಪ್ಯಾಕ್ ಹಚ್ಚಬೇಕು. ಉತ್ತಮ ಫಲಿತಾಂಶಕ್ಕಾಗಿ ತೊಳೆಯುವ ಮೊದಲು 15 ರಿಂದ 20 ನಿಮಿಷಗಳ ಕಾಲ ಪ್ಯಾಕ್ ಅನ್ನ ಹಾಗೆಯೇ ಬಿಡಿ. ತೊಳೆಯುವಾಗ ನಿಮ್ಮ ಚರ್ಮವನ್ನ ನಿಧಾನವಾಗಿ ಮಸಾಜ್ ಮಾಡಲು ಮರೆಯದಿರಿ.
ಕೆಲವೇ ವಾರಗಳಲ್ಲಿ ನಿಮ್ಮ ಚರ್ಮವು ಹೊಳೆಯುತ್ತದೆ. ಈ ಫೇಸ್ಪ್ಯಾಕ್ ಅನ್ನ ಸತ್ತ ಚರ್ಮದ ಕೋಶಗಳನ್ನ ತೆಗೆದುಹಾಕಲು ಮತ್ತು ಹೊಳೆಯುವ ಚರ್ಮವನ್ನ ಪಡೆಯಲು ಬಳಸಬಹುದು. ಶುಷ್ಕತೆಯನ್ನ ಶಮನಗೊಳಿಸಲು ಮತ್ತು ಚರ್ಮವನ್ನ ಮೃದುಗೊಳಿಸಲು ಸಹ ಇದನ್ನ ಬಳಸಬಹುದು.
ಈ ಪೋಷಕಾಂಶಗಳಿಂದ ಕೂಡಿದ ಫೇಸ್ಪ್ಯಾಕ್ ಅನ್ನ ನೀವು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಬಹುದು. ಆದರೆ ನೀವು ಸೂಕ್ಷ್ಮ ಚರ್ಮವನ್ನ ಹೊಂದಿದ್ದರೆ, ಈ ಫೇಸ್ಪ್ಯಾಕ್ ಅನ್ನ ನಿಮ್ಮ ಮುಖದ ತುಂಬಾ ಹಚ್ಚುವ ಮೊದಲು ಪ್ಯಾಚ್ ಪರೀಕ್ಷೆಯನ್ನ ಮಾಡಿಕೊಳ್ಳಬೇಕು.

ನೋಡಿರಿ

