ಹಾವೇರಿಯಲ್ಲಿ ರೈತರನ್ನೇ ಬೇಟೆಯಾಡುತ್ತಿದ್ದ ಚಿರತೆ ಸೆರೆ

ಹಾವೇರಿಯಲ್ಲಿ ರೈತರನ್ನೇ ಬೇಟೆಯಾಡುತ್ತಿದ್ದ ಚಿರತೆ ಸೆರೆ

ಹಾವೇರಿ ಜಿಲ್ಲೆಯಲ್ಲಿ ರೈತರನ್ನೇ ಬೇಟೆಯಾಡುತ್ತಿದ್ದ ಚಿರತೆಯನ್ನ ಅರಣ್ಯ ಇಲಾಖೆ ಬಲೆಗೆ ಕೆಡವಿದೆ. ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿ ಸಿದ್ದಗೇರಿ ಗ್ರಾಮದಲ್ಲಿ ರೈತನನ್ನು ಚಿರತೆ ಬಲಿ ಪಡೆದಿದ್ದು, ಆ  ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಕ್ಸಸ್ ಆಗಿದ್ದಾರೆ.  ಹೊಲಕ್ಕೆ ನೀರು ಹಾಯಿಸಲು ಹೋದ ವೇಳೆ ರೈತನ ಮೇಲೆ ಚಿರತೆ ದಾಳಿ ಮಾಡಿ ಕೊಂದಿತ್ತು. ಇದರಿಂದ ಕಡೂರು ಹಾಗೂ ಕಣವಿ ಸಿದಗೇರಿ ಗ್ರಾಮದ ಜನರು ಆತಂಕದಲ್ಲಿದ್ದರು. ಇದೀಗ ಚಿರತೆ ಸೆರೆಯಾಗಿರುವುದರಿಂದ ಜನ ನಿಟ್ಟುಸಿರು ಬಿಡುವಂತಾಗಿದೆ.

ಚಿರತೆ ದಾಳಿ ನಂತ್ರ  ಎರಡು ಗ್ರಾಮಗಳ ರೈತರ ನೆಮ್ಮದಿಯಾಗಿ ನಿದ್ದೆ ಮಾಡುವುದ್ದನ್ನೇ ಬಿಟ್ಟಿದ್ರು, ಈಗ  ಚಿರತೆ  ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪೂಜಾರ್ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

ಇನ್ನು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕಸಬಾ ಹೋಬಳಿಯ ರಾಮಶೆಟ್ಟಿಹಳ್ಳಿ ಗ್ರಾಮದ ಕುರಿಗಾಹಿಯೊಬ್ಬರ ಮೇಲೆ ಇತ್ತೀಚೆಗೆ ಚಿರತೆ ದಾಳಿ ಮಾಡಿತ್ತು. ಹೊಲದಲ್ಲಿ ಕುರಿ ಮೇಯಿಸುವಾಗ ರಾಜಣ್ಣ ಎಂಬುವರ ಮೇಲೆ ಚಿರತೆ ದಾಳಿ ಮಾಡಿ ಕೈ ಮತ್ತು ದೇಹದ ವಿವಿಧ ಭಾಗಗಳ ಮೇಲೆ ಕಚ್ಚಿ ಗಾಯಗೊಳಿಸಿತ್ತು. ಕುರಿಗಾಹಿ ಕೂಗಿಕೊಂಡಾಗ ಚಿರತೆ ಅಲ್ಲಿಂದ ಓಡಿಹೋಗಿದೆ. ಇದರಿಂದ ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದರು. ಪದೇಪದೇ ನಮ್ಮ ಗ್ರಾಮ ಮತ್ತು ಜಮೀನುಗಳಲ್ಲಿ ಓಡಾಡಲು ತುಂಬಾ ಕಷ್ಟವಾಗುತ್ತಿದೆ ಹಗಲು ಮತ್ತು ರಾತ್ರಿ ವೇಳೆ ಚಿರತೆಗಳ ದಾಳಿ ಮುಂದುವರೆದಿದ್ದು, ಅರಣ್ಯ ಇಲಾಖೆಗೆ ತಿಳಿಸಿದರು,ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಗ್ರಾಮಸ್ಥರ ಆಕ್ರೋಶವಾಗಿದೆ.

 

Kishor KV