99ನೇ ವಯಸ್ಸಿನಲ್ಲಿ ದೇವರಾದ ಡಾಕ್ಟರ್ ಅಜ್ಜಿ – ಆಸ್ಪತ್ರೆಗೆ 3.4 ಕೋಟಿ ರೂಪಾಯಿ ದಾನ

99ನೇ ವಯಸ್ಸಿನಲ್ಲಿ ದೇವರಾದ ಡಾಕ್ಟರ್ ಅಜ್ಜಿ – ಆಸ್ಪತ್ರೆಗೆ 3.4 ಕೋಟಿ ರೂಪಾಯಿ ದಾನ

ಕೆಲವರು ಕೋಟಿ ಕೋಟಿ ಹಣ ಇದ್ದರು ಒಂದು ರೂಪಾಯಿ ಕೂಡ ದಾನ ಮಾಡಲ್ಲ. ಎಲ್ಲಾ ಹಣ ನಮಗೆ ಮಾತ್ರ ಇರಲಿ, ನಮ್ಮ ಮಕ್ಕಳು, ಮೊಮ್ಮಕ್ಕಳು ಅದ್ದನ್ನ ಅನುಭವಿಸಲಿ ಅಂತ ಇರ್ತಾರೆ. ಆದ್ರೆ ಒಡಿಶಾದ ಅಜ್ಜಿಯೊಬ್ಬರು ಬರೋಬ್ಬರಿ 3.4 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಅದು ಒಂದು ಆಸ್ಪತ್ರೆಗೆ.

ನಿವೃತ್ತ ಗೈನಕಾಲಜಿಸ್ಟ್ ಡಾಕ್ಟರ್ ಕೆ. ಲಕ್ಷ್ಮೀಬಾಯಿ  ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು 99  ವರ್ಷಕ್ಕೆ ಕಾಲಿಟ್ಟಿದ್ದಾರೆ. ಲಕ್ಷ್ಮೀಬಾಯಿ ಅವರು ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ಬೆರ್ಹಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವ ಗೈನಕಾಲಜಿಸ್ಟ್ ಪ್ರಾಧ್ಯಾಪಕರಾದ ಡಾಕ್ಟರ್ ಕೆ. ಲಕ್ಷ್ಮೀಬಾಯಿ ಅವರು, ತಮ್ಮ ಸುದೀರ್ಘ ವೈದ್ಯಕೀಯ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗದೆ ಹಲವರು ಸಾವನ್ನಪ್ಪಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದರು. ಇದರಿಂದ ಬಹಳ ಚಿಂತನೆಗೆ ಒಳಗಾಗಿದ್ದ ಅವರು, ತಾನು ಇಂತಹ ಬಡ ಮಹಿಳೆಯರಿಗೆ ಏನಾದರೂ ಒಂದು ಒಳ್ಳೆ ಕೆಲಸ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಇದರಂತೆ, ತಮ್ಮ 99ನೇ ವಯಸ್ಸಿಗೆ ಕಾಲಿಡುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ: ಭಾರತವು ತುಂಡುಗಳಾಗಿ ಒಡೆಯುವವರೆಗೆ ಬಾಂಗ್ಲಾದೇಶವು ಪೂರ್ಣ ಶಾಂತಿಯನ್ನು ಕಾಣುವುದಿಲ್ಲ – ಬಾಂಗ್ಲಾದೇಶ

ಲಕ್ಷ್ಮೀಬಾಯಿ ಅವರು ನೀಡಿರುವ ದೇಣಿಗೆ ಹಣವನ್ನು ಭುವನೇಶ್ವರದ ಏಮ್ಸ್ ಆಸ್ಪತ್ರೆಯ ಗೈನಕಾಲಜಿಸ್ಟ್ ಕೋರ್ಸ್ ಹಾಗೂ ಚಿಕಿತ್ಸಾ ಕಾರ್ಯಕ್ರಮವನ್ನು ಪ್ರಾರಂಭಿಸಲು ಬಳಕೆ ಮಾಡಲಾಗುತ್ತದೆ. ಅದರಲ್ಲೂ ಸಣ್ಣ ವಯಸ್ಸಿನ ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ಬಾರದಂತೆ ತಡೆಯುವ ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ನಡೆಸಲು ಬರ್ಹಂಪುರ ಆಬ್‌ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಸೊಸೈಟಿಗೆ ಬರೋಬ್ಬರಿ ಮೂರು ಕೋಟಿ ರೂಪಾಯಿ ದಾನ ನೀಡಿದ್ದಾರೆ. 1926ರಂದು ಜನಿಸಿದ್ದ ಲಕ್ಷ್ಮೀಬಾಯಿ ಅವರು, 1945ರಲ್ಲಿ ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜಿನ ಮೊದಲ ಎಂಬಿಬಿಎಸ್ ಬ್ಯಾಚ್‌ನಲ್ಲಿ ವೈದ್ಯ ಪದವಿಯನ್ನು ಪಡೆದುಕೊಂಡಿದ್ದರು. ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪೂರ್ಣಗೊಳಿಸಿದ್ದ ಲಕ್ಷ್ಮೀಬಾಯಿ ಅವರು, 1950ರಲ್ಲಿ ಸುಂದರ್‌ಗಢ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭಿಸಿದ್ದರು.

 

Kishor KV