ದೈವಕ್ಕೆ ಅಪಮಾನ ಮಾಡಿದ ರಣವೀರ್‌ ಸಿಂಗ್‌ಗೆ ಎದುರಾಯ್ತು ಕಾನೂನು ಸಂಕಷ್ಟ! – ಅರೆಸ್ಟ್‌ ಆಗ್ತಾರಾ ಬಾಲಿವುಡ್‌ ನಟ?

ದೈವಕ್ಕೆ ಅಪಮಾನ ಮಾಡಿದ ರಣವೀರ್‌ ಸಿಂಗ್‌ಗೆ ಎದುರಾಯ್ತು ಕಾನೂನು ಸಂಕಷ್ಟ! – ಅರೆಸ್ಟ್‌ ಆಗ್ತಾರಾ ಬಾಲಿವುಡ್‌ ನಟ?

ಕಾಂತಾರ ಚಿತ್ರದಲ್ಲಿ ನಟ ರಿಷಬ್‌ ಶೆಟ್ಟಿ ಆಕ್ಟಿಂಗ್‌ ಹೊಗಳುವ ಭರದಲ್ಲಿ ನಟ ರಣವೀರ್ ಸಿಂಗ್ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ದೈವವನ್ನ ದೆವ್ವ ಎಂದು ಹೇಳಿ ತುಳುನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಣವೀರ್‌ ಸಿಂಗ್‌ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ರು. ಆದ್ರೂ ಕೂಡ ರಣವೀರ್‌ ಸಿಂಗ್‌ಗೆ ಕಾನೂನು ಸಂಕಷ್ಟ ಎದುರಾಗಿದೆ. ಕರಾವಳಿಯ ದೈವಗಳ ಬಗ್ಗೆ ವೇದಿಕೆಯಲ್ಲಿ ತಪ್ಪಾಗಿ ಮಾತನಾಡಿ ದೈವಗಳನ್ನು ಅನುಕರಣೆ ಮಾಡಿದ್ದಕ್ಕೆ ನಟ ರಣವೀರ್ ವಿರುದ್ಧ ಬೆಂಗಳೂರಿನಲ್ಲಿ  ದೂರು ದಾಖಲಾಗಿದೆ.

ಇದನ್ನೂ ಓದಿ: ಸೋಲಿನ ಹೊಣೆ ಹೊತ್ತ ನಾಯಕ ಕೆ.ಎಲ್ ರಾಹುಲ್ – ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆದ್ದ ಹೃದಯವಂತ ಕನ್ನಡಿಗ

ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ರಣ್‌ವೀರ್ ಸಿಂಗ್ ದೈವಗಳನ್ನು ಅವಮಾನಿಸಿದ್ದು, ಭಕ್ತರು ಹಾಗೂ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ರಣವೀರ್ ಸಿಂಗ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಎರಡು ದಿನಗಳ ಹಿಂದೆ ಹಿಂದು ಜನಜಾಗೃತಿ ಸಮಿತಿ ರಣವೀರ್ ಸಿಂಗ್ ವಿರುದ್ಧ ಗೋವಾದ ಪಣಜಿಯಲ್ಲಿ ದೂರು ದಾಖಲಿಸಿದ್ದರು. ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು ಎಂದು ತುಳುನಾಡ ದೈವಾರಾಧಕರು ಪಟ್ಟು ಹಿಡಿದಿದ್ದರು.

ಇದೀಗ ರಣ್‌ವೀರ್ ಸಿಂಗ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ವಕೀಲ ಪ್ರಶಾಂತ್ ಮೇತಲ್ ಎಂಬುವವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ನೀಡಿ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ರಣವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ ಇದನ್ನ ಒಪ್ಪಲು ಸಾಧ್ಯವಿಲ್ಲ. ಅವರಿಗೆ ದಂಡನಾರ್ಹ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Shwetha M