ಖಾಸಗಿ ಶಾಲೆಗಳಿಗೆ ಒಂದು ವಾರ ರಜೆ – ಚಳಿಗೆ ನಡುಗುತ್ತಿರುವ ದೆಹಲಿಯ ಸ್ಥಿತಿ ಹೇಗಿದೆ ಗೊತ್ತಾ?

ಖಾಸಗಿ ಶಾಲೆಗಳಿಗೆ ಒಂದು ವಾರ ರಜೆ – ಚಳಿಗೆ ನಡುಗುತ್ತಿರುವ ದೆಹಲಿಯ ಸ್ಥಿತಿ ಹೇಗಿದೆ ಗೊತ್ತಾ?

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಮಂಜು ದಟ್ಟವಾಗಿ ಆವರಿಸಿದೆ. ಸೋಮವಾರ ದೆಹಲಿಯ ಸಫ್ದರ್‍ಜಂಗ್‍ನಲ್ಲಿ ಕನಿಷ್ಠ ತಾಪಮಾನ  1.9 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಕಳೆದ ದಶಕದಲ್ಲಿ ಎರಡನೇ ಅತಿ ಕಡಿಮೆ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಸಮುದ್ರದ ಆಳಕ್ಕೆ ನೌಕೆ ಕಳಿಸಿಕೊಡಲು ಸಿದ್ಧತೆ ಪೂರ್ಣ – ಸದ್ಯದಲ್ಲೇ ಸಾಗರಯಾನಕ್ಕೆ ಗ್ರೀನ್ ಸಿಗ್ನಲ್

ರಾಷ್ಟ್ರ ರಾಜಧಾನಿಯಲ್ಲಿ ಇಂದು ಮುಂಜಾನೆ ಗೋಚರತೆಯ ಪ್ರಮಾಣ 200 ಮೀಟರ್‌ಗೆ ಇಳಿದಿತ್ತು.ಇದರಿಂದಾಗಿ, ಮುಂದೆ ಇರುವ ವಸ್ತುಗಳು, ವಕ್ತಿಗಳು ಕಣ್ಣಿಗೆ ಕಾಣಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಸುಮಾರು 40 ವಿಮಾನಗಳ ಸಂಚಾರಕ್ಕೆ ತೊಂದರೆಯಾಗಿದೆ. ಕನಿಷ್ಠ 29 ರೈಲುಗಳು ವಿಳಂಬವಾಗಿವೆ. ಅಲ್ಲದೇ ಈ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 15ರವರೆಗೆ ದೆಹಲಿಯಲ್ಲಿ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇಂದು ಬೆಳಿಗ್ಗೆ ಪಂಜಾಬ್ ಮತ್ತು ವಾಯುವ್ಯ ರಾಜಸ್ಥಾನದಿಂದ ಉತ್ತರ ಪ್ರದೇಶಕ್ಕೆ ವಿಸ್ತರಿಸಿದ ಮಂಜಿನ ಹೊದಿಕೆಯ ಉಪಗ್ರಹ ಚಿತ್ರವನ್ನು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ. ಇದು ಹರಿಯಾಣ ಮತ್ತು ದೆಹಲಿಯನ್ನು ಒಳಗೊಂಡಿದೆ.  ಅಲ್ಲದೇ ವಾಯುವ್ಯ ಭಾರತದಲ್ಲಿ ಮುಂದಿನ ಎರಡು ದಿನಗಳ ಕಾಲ ಚಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

suddiyaana