ರಾಜ್ಯದ ಜನರಿಗೆ ಚಳಿ ಜೊತೆಗೆ ತರಕಾರಿ ಬೆಲೆ ಏರಿಕೆಯ ಬಿಸಿ! – 1 ಕೆಜಿ ನುಗ್ಗೆ ಬೆಲೆ 700 ರೂಪಾಯಿ!

ರಾಜ್ಯದ ಜನರಿಗೆ ಚಳಿ ಜೊತೆಗೆ ತರಕಾರಿ ಬೆಲೆ ಏರಿಕೆಯ ಬಿಸಿ! – 1 ಕೆಜಿ ನುಗ್ಗೆ ಬೆಲೆ 700 ರೂಪಾಯಿ!

ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೆಮ್ಮದಿ ಅನ್ನೋದೇ ಇಲ್ಲ ಎನ್ನುವಂತಾಗಿದೆ. ಯಾಕಂದ್ರೆ ಒಂದಿಲ್ಲೊಂದು ರೀತಿಯಲ್ಲಿ ಜೇಬಿಗೆ ಕತ್ತರಿ ಬೀಳುತ್ತಿದೆ. ಇತ್ತೀಚೆಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿ ಹೋಗಿದ್ದಾರೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ, ತರಕಾರಿ ಬೆಲೆ ಗಗನಕ್ಕೆ ಏರಿದ್ದು, ಗ್ರಾಹಕರು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ:ರಾಜ್ಯದ ಜನರಿಗೆ ಚಳಿ ಜೊತೆಗೆ ತರಕಾರಿ ಬೆಲೆ ಏರಿಕೆಯ ಬಿಸಿ! – 1 ಕೆಜಿ ನುಗ್ಗೆ ಬೆಲೆ 700 ರೂಪಾಯಿ!

ದಿತ್ವ್‌ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಇಂದ್ರಿಂದಾಗಿ ವಿವಿಧ ತರಕಾರಿಗಳ ಬೆಳೆಯ ಇಳುವರಿಯಲ್ಲಿ ಭಾರಿ ಇಳಿಕೆಯಾಗಿದೆ. ಇದ್ರಿಂದಾಗಿ ತರಕಾರಿ ಬೆಲೆ ಏರಿಕೆಯಾಗಿದೆ. ಇದೀಗ ಟೊಮ್ಯಾಟೋ, ನುಗ್ಗೇಕಾಯಿ ಬೆಲೆ ಕೇಳಿ ಗ್ರಾಹಕರು ಶಾಕ್‌ ಆಗಿದ್ದಾರೆ. ನುಗ್ಗೇಕಾಯಿ ಬೆಲೆ ಕೆ.ಜಿಗೆ 700 ರೂಪಾಯಿ ದಾಟಿದೆ.

ನವೆಂಬರ್‌ ತಿಂಗಳ ಆರಂಭದಲ್ಲಿ ಒಂದು ಕೆಜಿ ನುಗ್ಗೆಕಾಯಿ ಬೆಲೆ 150 ರಿಂದ 200 ರೂಪಾಯಿಗಳವರೆಗೆ ಇತ್ತು. ಆದರೆ ಒಂದೇ ತಿಂಗಳಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಅದರಲ್ಲೂ ಕೆಲವು ಮಾರಾಟಗಾರರು ಕೆಜಿಗೆ 700 ರೂ.ನಲ್ಲೂ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ನುಗ್ಗೆಕಾಯಿ ದರ ಮಟನ್‌ ಬೆಲೆಗೆ ಸರಿಸಮಾನವಾಗಿದೆ  ನುಗ್ಗೇಕಾಯಿ ಹೆಚ್ಚಾಗಿ ಬೆಳೆಯುವ ಪ್ರದೇಶವಾದ ತಮಿಳುನಾಡಿನಲ್ಲಿಯೂ ವರುಣ ಅಬ್ಬರ ಮತ್ತು ಚಂಡಮಾರುತದ ಕಾರಣ ಬೆಳೆ ನೆಲ ಕಚ್ಚಿದೆ. ನಿರೀಕ್ಷಿತ ಮಟ್ಟದ ಬೆಳೆ ಮಾರುಕಟ್ಟೆಗೆ ಬಾರದ ಕಾರಣ ಇದಕ್ಕೂ ಬೇಡಿಕೆ ಹೆಚ್ಚಿದೆ. ಹೀಗಾಗಿ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಸಿಗೋದೆ ಕಷ್ಟ ಎಂಬ ಸ್ಥಿತಿ ಉದ್ಭವಿಸಿದೆ.

ಇನ್ನು ಟೊಮ್ಯಾಟೋಗೆ ಭಾರಿ ಡಿಮ್ಯಾಂಡ್​​ ಬಂದಿದ್ದು, 15 ಕೆಜಿ ತೂಕದ ಒಂದು ಬಾಕ್ಸ್​ 600-800 ರೂಪಾಯಿಗೆ ಮಾರಾಟವಾಗುತ್ತಿದೆ. ಮೊನ್ನೆ ಮೊನ್ನೆವರೆಗೂ ಬಾಕ್ಸ್​​ ಟೊಮ್ಯಾಟೋ ದರ 150-200 ರೂ. ಇತ್ತು. ಟೊಮ್ಯಾಟೋ ಹೆಚ್ಚಾಗಿ ಬೆಳೆಯುವ ರಾಜ್ಯಗಳಾದ ಮಾಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಹೊರ ರಾಜ್ಯಗಳಲ್ಲೂ ಟೊಮ್ಯಾಟೋಗೆ ಬೇಡಿಕೆ ಹೆಚ್ಚಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಪಕ್ಕದ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯದ ಗಡಿ ಭಾಗಗಳಿಂದ ಟೊಮ್ಯಾಟೋ ಸರಬರಾಜಾಗುತ್ತಿದೆ. ಜೊತೆಗೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮಡಿಕೇರಿ, ಮಂಡ್ಯ, ಚಾಮರಾಜನಗರ, ಸೇರಿದಂತೆ ಹೊರ ಜಿಲ್ಲೆಗಳ ಟೊಮ್ಯಾಟೋಗಳೂ ಲಗ್ಗೆ ಇಟ್ಟಿವೆ.

Shwetha M