ಸೈಡಿಗೆ ಹೋಗು.. ನಾನು ಆಟ ಆಡ್ಬೇಕು! – ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಯಶಸ್ವಿನಿಯ ಹುಸಿಮುನಿಸು!

ಸೈಡಿಗೆ ಹೋಗು.. ನಾನು ಆಟ ಆಡ್ಬೇಕು! – ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಯಶಸ್ವಿನಿಯ ಹುಸಿಮುನಿಸು!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಕೊಪ್ಪರಿಗೆ ಇಳಿಯುವುದರೊಂದಿಗೆ ಮಂಗಳವಾರ ಸಂಪನ್ನಗೊಂಡಿದೆ. ವಾರ್ಷಿಕ ಜಾತ್ರಾ ಪ್ರಯುಕ್ತ ನೀರು ಬಂಡಿ ಉತ್ಸವದಲ್ಲಿ ನಡೆಸಲಾಗಿದೆ. ಈ ವೇಳೆ ದೇಗುಲದ ಆನೆ ಯಶಸ್ವಿನಿ, ಅಲ್ಲಿನ ಸಿಬ್ಬಂದಿ ಮೇಲೆ ಮುನಿಸಿಕೊಂಡಿದೆ. ಆನೆ ಮುಂದೆ ಬರ್ತಿದ್ದಂತೆ ಸೊಂಡಿಲಿನಿಂದ ತಳ್ಳಿ ಹಾಕಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಅರಶಿನ ಶಾಸ್ತ್ರಕ್ಕೆ ಡ್ರೆಸ್‌ಕೋಡ್!‌ – ಹಳದಿ ಕಲರ್‌ ಡ್ರೆಸ್‌ ಹಾಕು ಅಂದಿದ್ದಕ್ಕೆ ಬ್ಲಿಂಕಿಟ್‌ ಟೀಶರ್ಟ್‌ ಧರಿಸಿ ಬಂದ ಸ್ನೇಹಿತ!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ, ದೇವಳದಲ್ಲಿ  ನೀರಿನಲ್ಲಿ ಬಂಡಿ ಉತ್ಸವ ನೆರವೇರಿಸಲಾಗಿದೆ. ಉತ್ಸವದ ಹಿನ್ನೆಲೆಯಲ್ಲಿ ಶ್ರೀ ದೇಗುಲದ ಹೊರಾಂಗಣದ ಸುತ್ತಲೂ ನೀರು ತುಂಬಿಸಲಾಗಿತ್ತು. ನೀರು ಬಂಡಿ ಉತ್ಸವದಲ್ಲಿ ಆನೆ ಯಶಸ್ವಿನಿ ಮಕ್ಕಳ ಜೊತೆ ನೀರಾಟ ಆಡಿದೆ. ಈ ಸಂದರ್ಭದಲ್ಲಿ ಸಿಬ್ಬಂದಿ ಅಡ್ಡ ಬಂದಿದ್ದಕ್ಕೆ ಆನೆ ಸಿಟ್ಟಾಗಿದೆ. ಪೊಲೀಸ್‌ ಸಿಬ್ಬಂದಿ ಅಡ್ಡ ಬರ್ತಿದ್ದಂತೆ ಆಟ ಆಡ್ಬೇಕು. ಆಚೆ ನಡಿ ಎಂಬಂತೆ ಆತನನ್ನ ಆನೆ ತಳ್ಳಿಹಾಕಿದೆ. ಈ ವಿಡಿಯೋ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋದಲ್ಲಿ ಯಶಸ್ವಿನಿ ಆನೆ ಭಕ್ತರೊಂದಿಗೆ ನೀರಿನಲ್ಲಿ ಆಟವಾಡುತ್ತಿತ್ತು. ಈ ವೇಳೆ ದೇವಸ್ಥಾನದ ಸಿಬ್ಬಂದಿ ಅಡ್ಡಬಂದಿದ್ದಾರೆ. ಇದರಿಂದ ಕೆರಳಿದ ಆನೆ, ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಸೈಡಿಗೆ ತಳ್ಳಿದೆ. ಇದರಿಂದ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ. ಇದ್ರಿಂದಾಗಿ ಸ್ಥಳದಲ್ಲಿ ಒಂದು ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಆನೆ ಆಟವಾಡುತ್ತಿರಬೇಕಾದ್ರೆ ಸಿಬ್ಬಂದಿ ಏಕೆ ಅಡ್ಡ ಹೋಗಬೇಕಿತ್ತು ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಮಕ್ಕಳಿಗೆ ತೊಂದರೆ ಆಗ್ಬಾರ್ದು ದೂರ ಹೋಗಿ ಎಂದು ಹೇಳಲು ಬಂದ್ರು. ಆದ್ರೆ ಅವರನ್ನೇ ಆನೆ ತಳ್ಳಿ ಹಾಕಿದೆ ಎಂದು ಹೇಳಿದ್ದಾರೆ.

Shwetha M