KING ಬ್ಯಾಕ್ ಟು ಬ್ಯಾಕ್ ಸೆಂಚುರಿ – BBCIಗೆ ಗುದ್ದಿದ ಗಾಯಕ್ವಾಡ್ ಶತಕ
KL ಆರ್ಭಟ.. SA ಬೌಲರ್ಸ್ ಧೂಳೀಪಟ

ವ್ಹಾವ್.. ಟೀಂ ಇಂಡಿಯಾ ಫ್ಯಾನ್ಸ್ ಅಂತೂ ಈಗ ಫುಲ್ ಹ್ಯಾಪಿ ಮೂಡ್ನಲ್ಲಿದ್ದಾರೆ. ಯಾಕಂದ್ರೆ ಎರಡೆರಡು ಶತಕ. ಒಂದ್ಕಡೆ ಕಿಂಗ್ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಮತ್ತೊಂದ್ಕಡೆ ರುತುರಾಜ್ ಗಾಯಕ್ವಾಡ್ ಚೊಚ್ಚಲ ಒಡಿಐ ಶತಕ. ಇಬ್ಬರ ಪಾರ್ಟ್ನರ್ಶಿಪ್ ನೋಡೋದೇ ಸಖತ್ ಥ್ರಿಲ್ಲಿಂಗ್ ಆಗಿತ್ತು.
ಇದನ್ನೂ ಓದಿ : LKG, UKG ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್! – ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಹಣ್ಣು ವಿತರಣೆ
ಟಾಸ್ಗೂ ಟೀಂ ಇಂಡಿಯಾಗೂ ಯಾಕೋ ಆಗಿಬರಲ್ಲ ಅನ್ಸುತ್ತೆ. ಕ್ಯಾಪ್ಟನ್ಸ್ ಚೇಂಜ್ ಆದ್ರೂ ಲಕ್ ಬದ್ಲಾಗ್ತಿಲ್ಲ. ಐದೋ ಹತ್ತೋ ಮ್ಯಾಚ್ ಹೋಗ್ಲಿ. ಏಕದಿನ ಫಾರ್ಮೆಟ್ನಲ್ಲಿ ಕಂಟಿನ್ಯುಯಸ್ ಆಗಿ 20ನೇ ಬಾರಿಗೆ ಭಾರತ ಟಾಸ್ ಸೋತಿದ್ದಾರೆ. 2023ರ ಐಸಿಸಿ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಸೋತಾಗಿಂತ ಹಿಡ್ದು ಇವತ್ತಿನವರೆಗೂ ಸೋಲ್ತಾನೇ ಇದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಅದೇ ಕಥೆ. ಸೌತ್ ಆಫ್ರಿಕಾ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಬೌಲಿಂಗ್ ಚೂಸ್ ಮಾಡ್ಕೊಂಡ್ರು. ಹೀಗಾಗಿ ಭಾರತ ಫಸ್ಟ್ ಬ್ಯಾಟಿಂಗ್ಗೆ ಬರ್ಬೇಕಾಯ್ತು. ಆದ್ರೆ ಟಾಸ್ ಸೋತ್ರು ಅನ್ನೋ ಬೇಸರ ಏನಿತ್ತು ಅದನ್ನ ಬ್ಯಾಟಿಂಗ್ನಲ್ಲಿ ಪ್ಯಾಚ್ಅಪ್ ಮಾಡಿದ್ದು ವಿರಾಟ್ ಮತ್ತು ರುತುರಾಜ್.
ಮ್ಯಾಚ್ ಆರಂಭದಲ್ಲಿ ವೈಡ್ ಗಳ ಸುರಿಮಳೆ!
ಭಾರತದ ಪರ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ರು. ಸೌತ್ ಆಫ್ರಿಕಾ ಪರ ಆರಂಭದಲ್ಲಿ ನಾಂಡ್ರೆ ಬರ್ಗರ್ ಮತ್ತು ಲುಂಗಿ ಎನ್ ಗಿಡಿ ಬೌಲಿಂಗ್ ಮಾಡಿದ್ರು. ಬಟ್ ಪಿಚ್ ಸಿಕ್ಕಾಪಟ್ಟೆ ಸ್ವಿಂಗ್ ಆಗ್ತಿದ್ದು ಲೈನ್ ಌಂಡ್ ಲೆಂಗ್ತ್ ಮಿಸ್ ಮಾಡಿದ್ರು. ವೈಡ್ ಗಳ ಮೂಲಕ ದಾರಾಳವಾಗಿ ರನ್ಸ್ ಕೊಟ್ರು. ಸೋ ಫಸ್ಟ್ 2 ಓವರ್ನಲ್ಲೇ 10 ರನ್ಸ್ ಎಕ್ಸ್ಟ್ರಾ ಬಂದಿತ್ತು. ಜೈಸ್ವಾಲ್ ಮತ್ತು ರೋಹಿತ್ ಸ್ಲೋ ಆಗಿ ಇನ್ನಿಂಗ್ಸ್ ಬಿಲ್ಡ್ ಮಾಡ್ತಿದ್ರು. ಌಂಡ್ ಐದನೇ ಓವರ್ನಲ್ಲಿ ಬರ್ಗರ್ಗೆ ಹ್ಯಾಟ್ರಿಕ್ ಫೋರ್ ಹೊಡೆದ ರೋಹಿತ್ ಬಿಗ್ ಸ್ಕೋರ್ ಹಿಂಟ್ ಕೊಟ್ಟಿದ್ರು. ಬಟ್ ಬ್ಯಾಡ್ಲಕ್ ಅದೇ ಓವರ್ನಲ್ಲಿ 14 ರನ್ಗೆ ವಿಕೆಟ್ ಒಪ್ಪಿಸಿದ್ರು. ಇನ್ನು ಜೈಸ್ವಾಲ್ ಈ ಮ್ಯಾಚಲ್ಲೂ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. 38 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದ್ರು. ಬಟ್ ಆ ನಂತ್ರ ವಿರಾಟ್ ಕೊಹ್ಲಿ ಮತ್ತು ರುತುರಾಜ್ ಜೋಡಿ ಕ್ರೀಸ್ ಕಚ್ಚಿ ನಿಂತ್ರು ನೋಡಿ. ಅಲ್ಲಿಂದ ಶುರುವಾಯ್ತು ರನ್ ಮಳೆ.
ಜೊತೆ ಜೊತೆಗೇ ಅರ್ಧಶತಕ.. ಇಬ್ಬರಿಂದ್ಲೂ ಸೆಂಚುರಿ ಆರ್ಭಟ!
62 ರನ್ಗಳಾಗುವಷ್ಟ್ರಲ್ಲೇ ಭಾರತ 2 ವಿಕೆಟ್ ಕಳ್ಕೊಂಡಿತ್ತು. ಸೋ ಇಂಥಾ ಟೈಮಲ್ಲಿ ಪವರ್ಫುಲ್ ಜೊತೆಯಾಟ ನೀಡಿದ್ದು ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್. ಕೊಹ್ಲಿ ಜೊತೆ ಉತ್ತಮ ಸಾಥ್ ನೀಡಿದ ಗಾಯಕ್ವಾಡ್ ತುಂಬಾನೇ ಕಾನ್ಫಿಡೆಂಟಾಗಿ ಬ್ಯಾಟಿಂಗ್ ಮಾಡಿ 52 ಬಾಲಲ್ಲಿ ಅರ್ಧಶತಕ ಕಂಪ್ಲೀಟ್ ಮಾಡಿದ್ರು. ಌಂಡ್ ನೆಕ್ಸ್ಟ್ ಓವರ್ನಲ್ಲೇ 47 ಬಾಲಲ್ಲಿ ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಬಾರಿಸಿದ್ರು. 98 ಬಾಲಲ್ಲಿ 100 ರನ್ಗಳ ಜೊತೆಯಾಟ ಬಂತು. ಬ್ಯಾಟಿಂಗ್ನಲ್ಲಿ ಒಬ್ರನ್ನೊಬ್ರು ಮ್ಯಾಚ್ ಮಾಡ್ಕೊಂಡೇ 132 ಬಾಲಲ್ಲಿ 150 ರನ್ಸ್ ಕಲೆ ಹಾಕಿದ್ರು. ಮೊದಲಿಗೆ ರುತುರಾಜ್ ಗಾಯಕ್ವಾಡ್ ಜಸ್ಟ್ 77 ಬಾಲಲ್ಲೇ ಸೆಂಚುರಿ ಬಾರಿಸಿದ್ರು. 12 ಫೋರ್ 2 ಸಿಕ್ಸ್ ಸಹ ಸೇರಿದ್ವು. ಏಕದಿನ ಮಾದರಿಯಲ್ಲಿ ಮೊದಲ ಶತಕ ಬಾರಿಸಿದ ಗಾಯಕ್ವಾಡ್ ರನ್ನ ವಿರಾಟ್ ಕೊಹ್ಲಿ ಅಪ್ಪಿಕೊಂಡು ವಿಶ್ ಮಾಡಿದ್ರು. ಅಂತಿಮವಾಗಿ 83 ಎಸೆತಗಳಲ್ಲಿ 105 ರನ್ ಗಳಿಸಿ ಮಾರ್ಕೋ ಜಾನ್ಸೆನ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ರು. ಌಂಡ್ ಇಂಟ್ರೆಸ್ಟಿಂಗ್ ಅಂದ್ರೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ್ರು. ಲಾಸ್ಟ್ ಮ್ಯಾಚಲ್ಲಿ ವಾಷಿಂಗ್ಟನ್ ಸುಂದರ್ ಆದ್ಮೇಲೆ 6ನೇ ಸ್ಲಾಟಲ್ಲಿ ಕ್ರೀಸ್ಗೆ ಬಂದಿದ್ರು. ವಿಶೇಷ ಏನಂದ್ರೆ ಕಳೆದ ಪಂದ್ಯದಂತೆ ಈ ಮ್ಯಾಚಲ್ಲಿ ರಾಹುಲ್ ಪಾಟ್ನರ್ ಆಗಿದ್ದಾಗ್ಲೇ ವಿರಾಟ್ ಕೊಹ್ಲಿ ಬ್ಯಾಟಿಂದ ಸೆಂಚುರಿ ಕಂಪ್ಲೀಟ್ ಆಯ್ತು. 90 ಬಾಲಲ್ಲಿ 7 ಫೋರ್ 2 ಸಿಕ್ಸ್ಗಳೊಂದಿಗೆ 100 ರನ್ಸ್ ಕಂಪ್ಲೀಟ್ ಮಾಡಿದ್ರು ವಿರಾಟ್. ಬಟ್ ಆ ನಂತ್ರ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲೋಕೆ ಆಗ್ಲಿಲ್ಲ. ಅಂತಿಮವಾಗಿ 93 ಬಾಲಲ್ಲಿ 102 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಲುಂಗಿ ಎನ್ ಗಿಡಿ ಬೌಲಿಂಗ್ ನಲ್ಲಿ ಔಟಾದ್ರು. ಇನ್ನು ಕೊಹ್ಲಿ ಮತ್ತು ಗಾಯಕ್ವಾಡ್ ತಮ್ಮ ವೃತ್ತಿ ಜೀವನದ ಹಲವು ವಿಶೇಷತೆಗಳಿಗೆ ಸಾಕ್ಷಿಯಾದ್ರು.
ಕೊಹ್ಲಿ & ರುತುರಾಜ್ ಅಬ್ಬರ!
ಸೌತ್ ಆಫ್ರಿಕಾ ವಿರುದ್ಧ ಬ್ಯಾಕ್ ಟು ಬ್ಯಾಕ್ ಕೊಹ್ಲಿ ಶತಕ
ಏಕದಿನದಲ್ಲಿ 307 ಇನ್ನಿಂಗ್ಸ್ ಗಳಲ್ಲಿ 53ನೇ ಸೆಂಚುರಿ
ಒಂದೇ ಕ್ರಮಾಂಕದಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದ ವಿರಾಟ್
ಸಚಿನ್ ದಾಖಲೆ ಬ್ರೇಕ್ (45), ಏಕದಿನ 3ನೇ ಕ್ರಮಾಂಕದಲ್ಲಿ 46 ಶತಕ
ಚೊಚ್ಚಲ ಏಕದಿನ ಶತಕ ಬಾರಿಸಿದ ರುತುರಾಜ್ ಗಾಯಕ್ವಾಡ್ (105)
ಕೊಹ್ಲಿ ಮತ್ತು ರುತುರಾಜ್ ನಡುವೆ 195 ರನ್ ಗಳ ಜೊತೆಯಾಟ
ಹೀಗೆ ಕೊಹ್ಲಿ ಮತ್ತು ರುತುರಾಜ್ ಪಾರ್ಟ್ನರ್ಶಿಪ್ ಭಾರತಕ್ಕೆ ಭದ್ರ ಬುನಾದಿಯನ್ನೇ ಹಾಕಿಕೊಟ್ಟಿತ್ತು. ಆ ನಂತ್ರ ನಾಯಕ ಕೆಎಲ್ ರಾಹುಲ್ ಚಾರ್ಜ್ ತಗೊಂಡು ಸೌತ್ ಆಫ್ರಿಕಾ ಬೌಲರ್ಗಳನ್ನ ದಂಡಿಸೋಕೆ ಶುರು ಮಾಡಿದ್ರು. ಸ್ಲೋವಾಗಿ ಆಡ್ತಿದ್ದ ವಾಷಿಂಗ್ಟನ್ ಸುಂದರ್ ರನ್ ಔಟ್ ಆದ್ಮೇಲೆ ರವೀಂದ್ರ ಜಡೇಜಾ ಜೊತೆಯಾದ್ರು. ಒಟ್ನಲ್ಲಿ ಇವತ್ತಿನ ಪಂದ್ಯವನ್ನ ಎಂಜಾಯ್ ಮಾಡೋಕೆ ಟೀಂ ಇಂಡಿಯಾ ಫ್ಯಾನ್ಸ್ಗೆ ಸಾಕಷ್ಟು ಕಾರಣಗಳಿವೆ. ಅದ್ರಲ್ಲೂ ಕೊಹ್ಲಿ ಮತ್ತು ಗಾಯಕ್ವಾಡ್ ಶತಕ ಅಂತೂ ಮರೆಯೋಕೆ ಚಾನ್ಸೇ ಇಲ್ಲ.

ನೋಡಿರಿ

