ಅರಶಿನ ಶಾಸ್ತ್ರಕ್ಕೆ ಡ್ರೆಸ್‌ಕೋಡ್!‌ – ಹಳದಿ ಕಲರ್‌ ಡ್ರೆಸ್‌ ಹಾಕು ಅಂದಿದ್ದಕ್ಕೆ ಬ್ಲಿಂಕಿಟ್‌ ಟೀಶರ್ಟ್‌ ಧರಿಸಿ ಬಂದ ಸ್ನೇಹಿತ!

ಅರಶಿನ ಶಾಸ್ತ್ರಕ್ಕೆ ಡ್ರೆಸ್‌ಕೋಡ್!‌ – ಹಳದಿ ಕಲರ್‌ ಡ್ರೆಸ್‌ ಹಾಕು ಅಂದಿದ್ದಕ್ಕೆ ಬ್ಲಿಂಕಿಟ್‌ ಟೀಶರ್ಟ್‌ ಧರಿಸಿ ಬಂದ ಸ್ನೇಹಿತ!

ಮದುವೆ ಅಂದ್ಮೇಲೆ ಸಂಭ್ರಮ ಇದ್ದೇ ಇರುತ್ತೆ. ಈಗೀಗ ಒಂದೊಂದು ಥೀಮ್‌ ಇಟ್ಟುಕೊಂಡು ಮದುವೆ ಸಮಾರಂಭ ನಡೆಸಲಾಗುತ್ತದೆ. ಚಪ್ಪರ ಶಾಸ್ತ್ರ, ಅರಶಿನ ಶಾಸ್ತ್ರ, ಮೆಹೆಂದಿ, ಮದುವೆ, ಸಂಗೀತ ಕಾರ್ಯಕ್ರಮ ಹೀಗೆ ಒಂದೊಂದು ಇವೆಂಟ್‌ಗೆ ಒಂದೊಂದು ಡ್ರೆಸ್‌ಕೋಡ್‌ ಮಾಡಲಾಗಿರುತ್ತೆ. ಇದೀಗ ಇಲ್ಲೊಂದು ಕಡೆ ಯುವಕನೊಬ್ಬ ಸ್ನೇಹಿತನ ಅರಶಿನ ಶಾಸ್ತ್ರಕ್ಕೆ ಬ್ಲಿಂಕಿಟ್‌ ಟೀ ಶರ್ಟ್‌ ಧರಿಸಿಕೊಂಡು ಬಂದಿದ್ದಾನೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಜಾಮೀಯ ಮಸೀದಿ ಮುಂದೆ ಭಾರಿ ಹೈಡ್ರಾಮಾ! – ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು!

ಸೋಶಿಯಲ್‌ ಮೀಡಿಯಾ ಬಂದ್ಮೇಲೆ ಜನ ಮರುಳೋ, ಜಾತ್ರೆ ಮರುಳೋ ಅನ್ನುವಂತಾಗಿದೆ. ಈಗ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ಬೇಕು ಅನ್ನೋ ಕಾರಣಕ್ಕೆ ಮದುವೆ ಮನೆಯಲ್ಲೂ ಹೊಸ ಹೊಸ ಥೀಮ್‌ ಇಟ್ಟುಕೊಳ್ಳುತ್ತಾರೆ. ಅರಶಿನ ಶಾಸ್ತ್ರಕ್ಕೂ ಮನೆ ಮಂದಿಯೆಲ್ಲರೂ ಎಲ್ಲೋ ಕಲರ್‌ ಥೀಮ್‌ನಲ್ಲೇ ರೆಡಿ ಆಗ್ತಾರೆ. ಇದೀಗ ಇಲ್ಲೊಂದು ಕಡೆ ಯುವಕನೊಬ್ಬ ಅರಶಿನ ಶಾಸ್ತ್ರಕ್ಕೆ ಹಳದಿ ಬಣ್ಣದ ಉಡುಗೆ ಇಲ್ಲವೆಂದು ಬ್ಲಿಂಕಿಟ್ ಸಮವಸ್ತ್ರ ಧರಿಸಿ ಎಂಟ್ರಿ ಬಂದಿದ್ದಾನೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಧ್ರುವ್ ಜೈನ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಹಳ್ದಿಗೆ ಹಳದಿ ಬಣ್ಣವನ್ನು ಧರಿಸಿ ಎಂದು ಅವರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರೂ ಗ್ರ್ಯಾಂಡ್‌ ಡ್ರೆಸ್‌ ಧರಿಸಿದ್ರೆ, ಈ ಯುವಕ ಹಳದಿ ಬ್ಲಿಂಕಿಟ್ ಡೆಲಿವರಿ ಏಜೆಂಟ್‌ನ ಟಿ ಶರ್ಟ್ ಧರಿಸಿ ಬಂದಿದ್ದಾರೆ. ಬಳಿಕ ಆತ ವಧು ಮತ್ತು ವಧುವಿನ ಬಳಿಗೆ ನಡೆದುಕೊಂಡು ಹೋಗುತ್ತಿದ್ದಂತೆ, ಇಬ್ಬರೂ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದು, ಆ ಬಳಿಕ ಈತನ ಉಡುಗೆ ಕಂಡು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಐದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಸ್ಟ್ ಹಳದಿ ಡ್ರೆಸ್ಸಿಂಗ್ ಅವಾರ್ಡ್ ನಿಮಗೆ ಸಲ್ಲುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಬ್ಲಿಂಕಿಟ್ ಈ ಯುವಕನನ್ನು ಮಾರ್ಕೆಟಿಂಗ್‌ಗೆ ನೇಮಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ದುಡ್ಡು ಉಳಿತು, ಕಾರ್ಯಕ್ರಮಕ್ಕೆ ಮಿಸ್ ಮಾಡಿದ್ದಂಗೆ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

Shwetha M