ಗೆಲ್ಲೋಕೆ ಗಿಲ್ಲಿ ಮೋಸದಾಟ? ರಾಶಿಕಾ ಕಾಲೆಳೆದು ಬೀಳಿಸಿದ ಗಿಲ್ಲಿ!
ಕಾಲು ಎಳೆದಿದ್ದಾ? ಕಾಲು ಹಿಡಿದಿದ್ದಾ?

ಗೆಲ್ಲೋಕೆ ಗಿಲ್ಲಿ ಮೋಸದಾಟ?  ರಾಶಿಕಾ ಕಾಲೆಳೆದು ಬೀಳಿಸಿದ ಗಿಲ್ಲಿ!ಕಾಲು ಎಳೆದಿದ್ದಾ? ಕಾಲು ಹಿಡಿದಿದ್ದಾ?

ಬಿಗ್‌  ಬಾಸ್‌ ಮನೆಯಲ್ಲಿ ಗಿಲ್ಲಿ ಆಟವನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿಗೆ ತುಂಬಾ ಸಪೋರ್ಟ್ ಆಗಿ ಜನ ಕಾಮೆಂಟ್ ಹಾಕುತ್ತಿದ್ದಾರೆ. ಗಿಲ್ಲಿಯನ್ನ ಬಿಗ್ ಮನೆಯಲ್ಲಿ ಟಾರ್ಗೆಟ್ ಮಾಡ್ತಾ ಇರೋದ್ ಗೊತ್ತಾಗ್ತಿದೆ.  ಆದ್ರೆ ಗಿಲ್ಲಿ ಈ ವಾರ ಮತ್ತೊಂದು ಎಡವಟ್ಟು ಮಾಡ್ಕೊಂಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮಾಡಿರೋ ಎಡವಟ್ಟಿನ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಹೊರಗಡೆ ಚರ್ಚೆ ಆಗ್ತಿದೆ. ರಾಶಿಕಾ ಶೆಟ್ಟಿಯ ಕಾಲನ್ನ ಎಳೆದು ಗಿಲ್ಲಿ ಬೀಳಿಸಿದ್ದು, ವೀಕ್ಷಕರು ತಪ್ಪು ಅಂತ ಹೇಳ್ತಾ  ಇದ್ದಾರೆ.

ಬಿಗ್ ಬಾಸ್‌ ಮನೆಯಲ್ಲಿ ಜೋಡಿಗಳ ಫೈಟ್ ಜೋರಾಗಿ ನಡೆಯುತ್ತಿದೆ. ಈಗ ಬಿಗ್ ಬಾಸ್ ಮನೆಯವರಿಗೆ ಕ್ಯಾಪ್ಟನ್ಸಿ ಟಾಸ್ಕ್ ಕೊಟ್ಟಿದ್ದಾರೆ. ಜೋಡಿ ಜೋಡಿಯಾಗಿ ಈ ಟಾಸ್ಕ್ ಮಾಡಬೇಕು.. ಇದ್ರಲ್ಲಿ ರಾಶಿಕಾ ಸೂರಜ್ ಜೋಡಿ ಹಾಗೂ ಗಿಲ್ಲಿ ಕಾವ್ಯ ಜೋಡಿ ಮಧ್ಯೆ ದೊಡ್ಡ ರೀತಿಯಲ್ಲಿ ಕಿರಿಕ್ ಆಗ್ತಿದೆ. ಈ ಎರಡು ಜೋಡಿ ಕೂಡ ಇದ್ದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಆದ್ರೆ ಇದ್ರಲ್ಲಿ ಗಿಲ್ಲಿ ಮೋಸ ಮಾಡಿದ್ರಾ ಅನ್ನೋ ಪ್ರಶ್ನೆ ಎದ್ದಿದೆ. ಬಿಗ್ ಬಾಸ್ ಮನೆಯೊಳಗೆ ಮತ್ತು ಹೊರಗೆ ಇದೇ ಚರ್ಚೆ ಆಗ್ತಿದೆ.

ಇದನ್ನೂ ಓದಿ: ಒಟ್ಟಗೆ ಶತಕ ಸಿಡಿಸಿ ಮಿಂಚಿದ ರುತುರಾಜ್ ಗಾಯಕ್ವಾಡ್ & ವಿರಾಟ್ ಕೊಹ್ಲಿ

ಅಂದಹಾ ಜೋಡಿ ರಚನೆಯಾಗುತ್ತಿದ್ದಂತೆ ಕಾವ್ಯಾ ಮತ್ತು ಗಿಲ್ಲಿಯನ್ನು ಸೋಲಿಸಬೇಕು ಟಾಸ್ಕ್‌ನಿಂದ ಹೊರಗಿಡಬೇಕು ಅಂತ ಸೂರಜ್-ರಾಶಿಕಾ ಪ್ಲ್ಯಾನ್ ಮಾಡಿದ್ರು. ಗಿಲ್ಲಿ ಕಾವ್ಯಾ ಕೂಡ ಇದ್ರ ಬಗ್ಗೆ ಮಾತನಾಡಿಕೊಳ್ತಾರೆ.. ಯಾರೇ ವಿನ್ ಆದ್ರೂ ನಮ್ಮನ್ನ ಆಟದಿಂದ ಆಚೆ ಇಡ್ತಾರೆ.  ನಾವು ಆಟ ಗೆಲ್ಲಬೇಕು ಎಂದು ಕಾವ್ಯಾಗೆ ಗಿಲ್ಲಿ ನಟ ಹೇಳಿದ್ರು. ಈ ಟಾಸ್ಕ್‌ನಲ್ಲಿ ಗಿಲ್ಲಿ ಮತ್ತು ಕಾವ್ಯ ಜೋಡಿ ಅನ್ನೋದು ಗೊತ್ತಾಗಿದೆ. ಆದ್ರೆ ಇಲ್ಲಿ ಗಿಲ್ಲಿ ಗೆಲ್ಲೋ ಆತುರದಲ್ಲಿ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇದ್ರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮಟ್ಟದಲ್ಲೇ ಚರ್ಚೆ ಆಗ್ತಿದೆ.   

ಜೋಡಿ ಸ್ಪರ್ಧಿಗಳ ಒಂದೊಂದು ಕಾಲು ಸೇರಿಸಿ ಕಟ್ಟಲಾಗಿರುತ್ತದೆ. ಬಾಕ್ಸ್‌ನಲ್ಲಿರುವ ಚೆಂಡುಗಳನ್ನು ಸಂಗ್ರಹಿಸುವ ಟಾಸ್ಕ್ ಇದಾಗಿತ್ತು. ಕಾಲು ಕಟ್ಟಿದ್ದರಿಂದ ಕುಂಟುತ್ತಲೇ ಸ್ಪರ್ಧಿಗಳು ಬಾಲ್ ಸಂಗ್ರಹ ಮಾಡಬೇಕಿತ್ತು. ಬಾಲ್ ತೆಗೆದುಕೊಂಡು ಹೋಗುತ್ತಿರುವಾಗ ಕೆಳಗೆ ಬಿದ್ದ ಗಿಲ್ಲಿ ನಟ, ತನ್ನ ಮುಂದಿರುವ ರಾಶಿಕಾ ಅವರ ಕಾಲುಗಳನ್ನ ಹಿಡಿದು ಬೀಳಿಸುತ್ತಾರೆ. ಅದೇ ಕ್ಷಣದಲ್ಲಿ ಗಿಲ್ಲಿ ಈ ರೀತಿಯೆಲ್ಲಾ ಮಾಡಬಾರದು ಕಾವ್ಯಾ   ಹೇಳುತ್ತಾರೆ. ಆಮೇಲೆ ರಾಶಿ ಮೇಲೆ ಎದ್ದು ಮತ್ತೆ ಆಟ ಮುಂದುವರಿಸುತ್ತಾರೆ.. ಈ ಕ್ಲಿಪ್ ಈಗ ಸಖತ್ ವೈರಲ್ ಆಗ್ತಿದೆ. ಗಿಲ್ಲಿ ಮಾಡಿದ್ದು ಸರಿ ಇಲ್ಲ ಅಂತ ಹೇಳುತ್ತಿದ್ದಾರೆ.. ಗಿಲ್ಲಿ ಅವರ ಈ ಆಟವನ್ನು ಕೆಲ ನೆಟ್ಟಿಗರು ಚೀಪ್ ಗಿಮಿಕ್, ಮೋಸ ಎಂದು ಕರೆಯುತ್ತಿದ್ದಾರೆ. ಆದ್ರೆ ಇಲ್ಲಿ ಅದು ಬೇಕಂತ ಮಾಡಿಲ್ಲ ಅಂತ ಗಿಲ್ಲಿ ಫ್ಯಾನ್ಸ್ ಕೂಡ ಹೇಳುತ್ತಿದ್ದಾರೆ..

ವೈರಲ್ ಆಗಿರುವ ಮತ್ತೊಂದು ಕ್ಲಿಪ್ನಲ್ಲಿ, ಅಶ್ವಿನಿ ಗೌಡ ಮತ್ತು ರಘು ಮುಂದೆ ರಾಶಿಕಾಳನ್ನು ಗಿಲ್ಲಿ ಬೀಳಿಸಿದ. ಇದರಿಂದ ರಾಶಿಕಾ ಮೂಗಿಗೆ ಗಾಯವಾಯ್ತು ಎಂದು ಸೂರಜ್ ಹೇಳಿದ್ದಾರೆ. ಅಲ್ಲ ಇದ್ದ  ಅಶ್ವಿನಿ ಗೌಡ ಹೌದ ಗಿಲ್ಲಿ ಹಾಗೇ ಮಾಡಿದ್ನಾ,  ಯಾಕೆ ಗಿಲ್ಲಿ ಹೀಗೆ ಮಾಡ್ತಾನೋ ಅಂತ ಹೇಳಿದ್ದಾರೆ.  ಗಿಲ್ಲಿಯೇ ರಾಶಿಕಾಳ ಕಾಲೆಳೆದ ಎಂದು ರಜತ್ ಸಹ ಹೇಳುತ್ತಾರೆ.  ಆಗ ಗಿಲ್ಲಿ ನಾನು ಕಾಲೆಳೆದಿಲ್ಲ, ಕಾಲು ಹಿಡಿಯೋಕೆ ಬಂದೆ ಎಂದು ಹೇಳ್ತಾರೆ. ಆದ್ರೆ ಗಿಲ್ಲಿ ತಮ್ಮ ಆಟವನ್ನ ಆಡಬೇಕಿತ್ತು.. ಯಾಕೆ ರಾಶಿಕಾಳ ಕಾಲನ್ನ ಹಿಡಿದ ಬೀಳಿಸಿದ ಅಂತ ಚರ್ಚೆ ಆಗ್ತಿದೆ. ಈ ವಿಷ್ಯವೇ ಈ ವಾರದ ಕಿಚ್ಚನ ಪಂಚಾಯ್ತಿಯ ಹೈಲೆಟ್ ಪಾಯಿಂಟ್  ಆಗುತ್ತಾ? ಗಿಲ್ಲಿ ಕಾಲು ಬೇಕಂತ ಹಿಡಿದ್ನಾ? ರಾಶಿಕಾಗೆ ಇದು ಪ್ಲೇಸ್ ಆಗುತ್ತಾ? ಗಿಲ್ಲಿ ಮತ್ತೆ ಮನೆಯವರ ವಿರೋಧ ಕಟ್ಟಿ ಕೊಳ್ಳುತ್ತಾನಾ ಅನ್ನೋದ್ದನ್ನ ಕಾದು ನೋಡಬೇಕಿದೆ.

Kishor KV