ಸಮುದ್ರದ ಆಳಕ್ಕೆ ನೌಕೆ ಕಳಿಸಿಕೊಡಲು ಸಿದ್ಧತೆ ಪೂರ್ಣ – ಸದ್ಯದಲ್ಲೇ ಸಾಗರಯಾನಕ್ಕೆ ಗ್ರೀನ್ ಸಿಗ್ನಲ್
ಬಾಹ್ಯಾಕಾಶದಲ್ಲಿ ಚಂದ್ರನವರೆಗೆ ಹೋಗಿ ಬಂದಿರುವ ಮಾನವ ಪಾತಾಳವನ್ನು ಬಿಟ್ಟಿಲ್ಲ. ಸಾಗರವನ್ನೂ ಬಿಟ್ಟಿಲ್ಲ. ಆದರೆ, ಸಮುದ್ರದ ಆಳಕ್ಕೆ ಹೋಗಿರುವ ಉದಾಹರಣೆಗಳು ತುಂಬಾನೇ ವಿರಳ. ಇದೀಗ ಭಾರತದಲ್ಲಿ ಸಮುದ್ರದ ಆಳಕ್ಕೆ ನೌಕೆ ಕಳಿಸಿಕೊಡಲು ಸಿದ್ಧತೆ ಪೂರ್ಣಗೊಂಡಿದೆ. ನೀರಿನ ಆಳಕ್ಕೆ ಇಳಿದಂತೆ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಆ ಒತ್ತಡ ತಡೆಯುವ ಸಾಮರ್ಥ್ಯದ ವಿಶಿಷ್ಟ ನೌಕೆಯನ್ನು ಚೆನ್ನೈನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಸಿಯನ್ ಟೆಕ್ನಾಲಜಿ ಸಂಸ್ಥೆ ಸಿದ್ಧಗೊಳಿಸಿದೆ. ಇದು ಸ್ಟೀಲ್‌ನಿಂದ ನಿರ್ಮಿಸಿದ ಚೆಂಡಿನ ಆಕಾರದ ನೌಕೆ. ಈ ನೌಕೆಯಲ್ಲಿ ಮೊದಲ ಸಮುದ್ರಯಾನಕ್ಕೆ ಮೂವರು ತಜ್ಞರನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಮೇಯಲ್ ಚುನಾವಣೆ – ಸದನದಲ್ಲೇ ಬಡಿದಾಡಿಕೊಂಡ ಆಪ್, ಬಿಜೆಪಿ ಕೌನ್ಸಿಲರ್ ಗಳು
ಆಳಸಾಗರದ ಸಂಪನ್ಮೂಲ ಅಧ್ಯಯನಕ್ಕೆ ನೆರವಾಗುವ ಈ ಯೋಜನೆ ಮುಂದಿನ ಹಂತದಲ್ಲಿ ಇನ್ನಷ್ಟೂ ವಿಸ್ತಾರಗೊಳ್ಳಲಿದೆ. 6 ಸಾವಿರ ಮೀಟರ್ ಆಳಕ್ಕೆ ನೌಕೆ ಕಳುಹಿಸುವ ಗುರಿಯಿದೆ. ಈ ವರ್ಷದಲ್ಲೇ ಇದನ್ನು ಪೂರ್ಣಗೊಳಿಸಬೇಕು ಎನ್ನುವ ಚಿಂತನೆ ಕೂಡಾ ಇತ್ತು. ಆದರೆ ಅದಕ್ಕೆ ಹೊಂದಾಣಿಕೆಯಾಗುವ ನೌಕೆ ನಿರ್ಮಾಣ ಕಷ್ಟವಾಯ್ತು. ಇದಕ್ಕೆ ಟೈಟಾನಿಯಂನಿಂದ ವಿನ್ಯಾಸಗೊಳಿಸಿದ ನೌಕೆಯೇ ಆಗಬೇಕು. ಹೀಗಾಗಿ ಉಕ್ರೇನ್ ರಷ್ಯಾ ಯುದ್ಧದಿಂದ ಟೈಟಾನಿಯಂ ಪಡೆಯುವುದು ಕೂಡಾ ಕಷ್ಟವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.