ವಿಶ್ವದ ನಾಯಕರ ಮುಂದೆ ಚಹಾ ಮಾರಿದ ಮೋದಿ – ವಿಡಿಯೋ ಹರಿಬಿಟ್ಟ ಕಾಂಗ್ರೆಸ್

ವಿಶ್ವದ ನಾಯಕರ ಮುಂದೆ ಚಹಾ ಮಾರಿದ ಮೋದಿ – ವಿಡಿಯೋ ಹರಿಬಿಟ್ಟ ಕಾಂಗ್ರೆಸ್

ನರೇಂದ್ರ ಮೋದಿ ಒಂದು ಕೈಯಲ್ಲಿ ಟೀ ಗ್ಲಾಸ್, ಮತ್ತೊಂದು ಕೈಯಲ್ಲಿ ಟೀ ಫ್ಲಾಸ್ಕ್ ಹಿಡಿದು ಚಾಯ್ ಚಾಯ್ ಅಂತ ಕೂಗುವ ವಿಡಿಯೋ ವೈರಲ್ ಆಗ್ತಿದೆ. ಆದ್ರೆ ಇದು ಎಐ ರಚಿತವಾದ ವಿಡಿಯೋವಾಗಿದ್ದು, ಇದ್ದನ್ನ ಕಾಂಗ್ರೆಸ್‌ ರಚಿಸಿದೆ. ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಅವರು ಜಾಗತಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಕೆಟಲ್ ಮತ್ತು ಗ್ಲಾಸ್‌ಗಳೊಂದಿಗೆ ನಡೆಯುವುದನ್ನು ತೋರಿಸುವ AI- ರಚಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಮೋದಿ ತಮ್ಮ ರಾಜಕೀಯ ಪ್ರವೇಶಕ್ಕೂ ಮುನ್ನ ನಾನು ಚಹಾ ಮಾರುತ್ತಿದ್ದೆ ಅಂತ ಹೇಳಿಕೊಂಡಿದ್ರು. ಗುಜರಾತ್‌ನ ವಡ್ನಗರ ನಿಲ್ದಾಣದಲ್ಲಿ ತಮ್ಮ ತಂದೆ ಚಹಾ ಅಂಗಡಿ ನಡೆಸುತ್ತಿದ್ದರು ಮತ್ತು ಬಾಲ್ಯದಲ್ಲಿ ತಾನು ಅದೇ ಕೆಲಸ ಮಾಡುತ್ತಿದ್ದೆ ಎಂದು ಅವರೇ ಸ್ವತಃ ಹೇಳಿಕೊಂಡಿದ್ದರು. 2014 ರ ಲೋಕಸಭಾ ಚುನಾವಣೆಗೆ ಮುನ್ನ, ಕಾಂಗ್ರೆಸ್ ಹಿರಿಯ ಮಣಿಶಂಕರ್ ಅಯ್ಯರ್ ಅವರು ನರೇಂದ್ರ ಮೋದಿಯವರ ಈ ಹಿನ್ನೆಯನ್ನು ಚಾಯ್‌ ವಾಲಾ ಎಂದು ಅಣುಕಿಸಿದ್ದರು ಮತ್ತು ಅವರು ಎಂದಿಗೂ ಉನ್ನತ ಹುದ್ದೆಯನ್ನು ಪಡೆಯುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಸಾನ್ವಿ ಕೆನ್ನೆಗೆ ಅರಿಶಿನ ಹಚ್ಚಿದ ಕಿಚ್ಚ ಸುದೀಪ್ – ಅಪ್ಪನ ಕಣ್ಣಲ್ಲಿ ಮಗಳ ಸಂಭ್ರಮ

ಇದೀಗ ಮತ್ತೆ ಕಾಂಗ್ರೆಸ್‌ ಪ್ರಧಾನಿಯವರ ಬಗ್ಗೆ ಚಾಯ್ ಮಾರುವ ಎಐ ವಿಡಿಯೋ ಮಾಡಿ ಪೇಚೆಗೆ ಸಿಲುಕಿದೆ.  ಸದ್ಯ ವೈರಲ್‌ ಪೋಸ್ಟ್‌ಗೆ   ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕಾಂಗ್ರೆಸ್‌ ನಾಯಕತ್ವದ ಕೆಟ್ಟ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಸಿ.ಆರ್. ಕೇಶವನ್ ಹೇಳಿದ್ದಾರೆ. ಬಡ ಹಿನ್ನೆಲೆಯಿಂದ ಬಂದಿರುವ ಒಬಿಸಿ ಸಮುದಾಯದ ಕಾಮದಾರ್ ಪ್ರಧಾನಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಹೇಳಿದ್ದಾರೆ. “ಅವರು ಈ ಹಿಂದೆಯೂ ಅವರ ಚಾಯ್‌ವಾಲಾ ಹಿನ್ನೆಲೆಯನ್ನು ಅಪಹಾಸ್ಯ ಮಾಡಿದ್ದರು. ಅವರು ಅವರನ್ನು 150 ಬಾರಿ ನಿಂದಿಸಿದ್ದರು. ಬಿಹಾರದಲ್ಲಿ ಅವರ ತಾಯಿಯನ್ನು ನಿಂದಿಸಿದ್ದರು. ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ  ಎಂದು  ಎಕ್ಸ್‌ ನಲ್ಲಿ ಪೋಸ್ಟ್ ಹಾಕಿದ್ದಾರೆ.

Kishor KV