ಜೈಲಿನಲ್ಲಿರುವ ದಾಸನಿಗೆ ಶಾಕ್ ಕೊಟ್ಟ ಕೋರ್ಟ್! – ದರ್ಶನ್‌ ಮನೆಯಲ್ಲಿ ಸಿಕ್ಕಿದ್ದ 83 ಲಕ್ಷ ಆದಾಯ ತೆರಿಗೆ ಇಲಾಖೆಗೆ!

ಜೈಲಿನಲ್ಲಿರುವ ದಾಸನಿಗೆ ಶಾಕ್ ಕೊಟ್ಟ ಕೋರ್ಟ್! – ದರ್ಶನ್‌ ಮನೆಯಲ್ಲಿ ಸಿಕ್ಕಿದ್ದ 83 ಲಕ್ಷ ಆದಾಯ ತೆರಿಗೆ ಇಲಾಖೆಗೆ!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ಗೆ ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಇದೀಗ ಹಣದ ವಿಚಾರದಲ್ಲೂ ದಾಸನಿಗೆ ಹಿನ್ನಡೆಯಾಗಿದೆ. ನಟ ದರ್ಶನ್‌ ಮನೆ ಪತ್ತೆಯಾಗಿರುವ 83 ಲಕ್ಷ ರೂ. ಹಣವನ್ನು ಆದಾಯ ತೆರಿಗೆ ಇಲಾಖೆಯಲ್ಲೇ ಇರಲಿ ಎಂದು 57ನೇ ಸಿಸಿಎಚ್ ಕೋರ್ಟ್‌ ಆದೇಶಿಸಿದೆ.

ಇದನ್ನೂ ಓದಿ: ಬ್ರೇಕ್‌ಫಾಸ್ಟ್‌ ಮೀಟಿಂಗ್ ಬೆನ್ನಲ್ಲೇ ಕೈ ನಾಯಕರ ಸೀಕ್ರೆಟ್ ಮೀಟಿಂಗ್‌!‌ – ಕಾಂಗ್ರೆಸ್‌ನಲ್ಲಿ ಇನ್ನೂ ನಿಂತಿಲ್ವಾ ಶೀತಲ ಸಮರ?

ನಟ ದರ್ಶನ್‌ ಅವರ ಮನೆ ಹಾಗೂ ಪ್ರದೋಷ್‌ ಮನೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ 83 ಲಕ್ಷ ರೂ ಹಣ ಸೀಜ್‌ ಮಾಡಿ, ಪೊಲೀಸರು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿದ್ದರು. ಈ ಬೆನ್ನಲ್ಲೇ ದರ್ಶನ್ 83 ಲಕ್ಷ ರೂ. ಹಣ ವಾಪಸ್‌ ನೀಡಲು ಕೋರ್ಟ್‌ಗೆ ಮನವಿ ಮಾಡಿದ್ದರು.  ದರ್ಶನ್ ಅರ್ಜಿಗೆ ಆಕ್ಷೇಪಣೆ ಎತ್ತಿದ ಐಟಿ ದರ್ಶನ್ ಇದೂವರೆಗೂ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ತನಿಖೆ ಮುಂದುವರೆಸಬೇಕಾಗಿದೆ ಎಂದಿತ್ತು. ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ 82 ಲಕ್ಷ ಹಣ ಐಟಿ ಬಳಿಯಲ್ಲೇ ಇರಲಿ, ತನಿಖೆ ಮುಂದುವರೆಸಲಿ ಎಂದು ಆದೇಶ ನೀಡಿದೆ.

ಈ ಹಣ ದರ್ಶನ್‌ ಮನೆಗೆ ಹೇಗೆ ಬಂತು ಎನ್ನುವುದಕ್ಕೆ ದರ್ಶನ್‌ ಪರ ವಕೀಲರು ವಾದಿಸಿದ್ದರು. ದರ್ಶನ್‌ ಅವರು ಮೋಹನ್‌ ರಾಜ್‌ಗೆ ಸಾಲವಾಗಿ ಹಣ ನೀಡಿದ್ದರು. ಮೋಹನ್‌ ರಾಜ್‌ ಅವರು ದರ್ಶನ್‌ಗೆ ಮರಳಿಸಿದ್ದರು. ದರ್ಶನ್‌ ಇದನ್ನು ಮನೆಯಲ್ಲಿಟ್ಟಿದ್ದರು ಎಂದು ದರ್ಶನ್‌ ವಕೀಲರು ಹೇಳಿದ್ದರು. ಇದಕ್ಕೆ ಆದಾಯ ತೆರಿಗೆ ಇಲಾಖೆ ದರ್ಶನ್‌ ಈ ಹಣಕ್ಕೆ ಸೂಕ್ತ ದಾಖಲೆಯನ್ನು ಸಲ್ಲಿಕೆ ಮಾಡಿಲ್ಲ. ಇದು ವಂಚನೆಯ ಹಣ ಎಂದು ವಾದಿಸಿತ್ತು.

Shwetha M