ಸಾನ್ವಿ ಕೆನ್ನೆಗೆ ಅರಿಶಿನ ಹಚ್ಚಿದ ಕಿಚ್ಚ ಸುದೀಪ್ – ಅಪ್ಪನ ಕಣ್ಣಲ್ಲಿ ಮಗಳ ಸಂಭ್ರಮ

ಸಾನ್ವಿ ಕೆನ್ನೆಗೆ ಅರಿಶಿನ ಹಚ್ಚಿದ ಕಿಚ್ಚ ಸುದೀಪ್ – ಅಪ್ಪನ ಕಣ್ಣಲ್ಲಿ ಮಗಳ ಸಂಭ್ರಮ

ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ಕುಟುಂಬದಲ್ಲಿ ಮದುವೆ ಸಂಭ್ರಮ. ಸುದೀಪ್ ಅವರ ಅಕ್ಕ ಸುರೇಖಾ ಅವರ ಮಗ ತಾರಣ್ ಸುರೇಶ್ ಅವರ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಸೋದರಳಿಯನ ಅರಿಶಿನ ಶಾಸ್ತ್ರದಲ್ಲಿ ಸುದೀಪ್ ಕುಟಂಬ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಮುದ್ದಿನ ಮಗಳು ಸಾನ್ವಿಗೆ ಅರಿಶಿನ ಹಚ್ಚಿ ಕಿಚ್ಚ ಸುದೀಪ್ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ:ರಿಷಬ್ ಮುಂದೆಯೇ ಕಾಂತಾರ ದೈವಕ್ಕೆ ಅವಮಾನ – ಕನ್ನಡಿಗರ ಕ್ಷಮೆ ಕೇಳಿದ ರಣವೀರ್ ಸಿಂಗ್

ಸ್ಯಾಂಡಲ್​ವುಡ್​ನ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಅಳಿಯನ ಅರಿಶಿನ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾರೆ. ವಧು ತಾರಿಣಿಯನ್ನು ತಾರಣ್ ಸುರೇಶ್ ಮದುವೆಯಾಗುತ್ತಿದ್ದಾರೆ. ವಿವಾಹಕ್ಕೂ ಮೊದಲು ಅರಿಶಿಣ ಶಾಸ್ತ್ರ ನಡೆದಿದೆ. ಕುಟುಂಬದವರು ಮಾತ್ರ ಇದರಲ್ಲಿ ಭಾಗಿ ಆಗಿದ್ದರು. ತಾಯಿ ನಿಧನದ ನಂತರ ಕಿಚ್ಚನ ಮನೆಯಲ್ಲಿ ನಡೆದ ಮೊದಲ ಶುಭಕಾರ್ಯ ಇದು. ಹೀಗಾಗಿ ಸುದೀಪ್ ಕುಟುಂಬದವರು ಖುಷಿಯಲ್ಲಿಯೇ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಅಕ್ಕನ ಮಗನ ಮದುವೆಯಲ್ಲಿ ಪ್ರೀತಿಯ ಮಗಳಿಗೆ ಅರಿಶಿನ ಹಚ್ಚಿರೋ ಸುದೀಪ್ ಕೆನೆ ಬಣ್ಣದ ಟ್ರೆಡಿಷನಲ್ ವೇರ್​ನಲ್ಲಿ ಕ್ಯೂಟ್ ಕಾಣಿಸಿದ್ದಾರೆ. ಅರಿಶಿನ ಶಾಸ್ತ್ರದಲ್ಲಿ ಕಿಚ್ಚನ ಮಗಳು ಸಾನ್ವಿ ಅಪ್ಪ ಮತ್ತು ಅಮ್ಮನ ಕೈಯಿಂದ ಅರಿಶಿನ ಹಚ್ಚಿಸಿಕೊಂಡಿದ್ದಾರೆ. ಈಗಾಗಲೇ ಶ್ರೀಲಂಕಾದಲ್ಲಿ ತಾರಣ್ ಹಾಗೂ ತಾರಿಣಿ ಡೆಸ್ಟಿನೇಷನ್ ಮದುವೆ ಆಗಿದ್ದಾರೆ. ನವ ದಂಪತಿಗೆ ಎಲ್ಲರೂ ಶುಭ ಕೋರುತ್ತಾ ಇದ್ದಾರೆ.ಡಿಸೆಂಬರ್ 4ರಂದು ಪ್ಯಾಲೇಸ್ ಗ್ರೌಂಡ್ ಚಾಮರವಜ್ರದಲ್ಲಿ ಮದುವೆ ರಿಸೆಪ್ಶನ್ ಇದೆ. ಸಂಜೆ 7 ಗಂಟೆ ಬಳಿಕ ಕಾರ್ಯಕ್ರಮ ಆರಂಭ ಆಗುತ್ತದೆ.

Sulekha