ರಾಜಸ್ಥಾನ ಪೊಲೀಸರ ಭರ್ಜರಿ ಬೇಟೆ – 109 ಬಾಕ್ಸ್ ಸ್ಫೋ*ಟಕ ವಶ, ಇಬ್ಬರು ಅಂದರ್

ದೆಹಲಿ ಕಾರು ಸ್ಫೋಟದ ಬೆನ್ನಲ್ಲೇ ರಾಜಸ್ಥಾನ ಪೊಲೀಸರು ಭರ್ಜರಿ ಭೇಟೆ ನೆಡೆಸಿದ್ದಾರೆ. ಭಾರಿ ಪ್ರಮಾಣದಲ್ಲಿ ಸಾಗಿಸುತ್ತಿದ್ದ ಸ್ಪೋಟಕಗಳನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪೆಡದು, ಇಬ್ಬರನ್ನು ಬಂಧಿಸಿದ್ದಾರೆ. ರಾಜಸ್ಥಾನದ ರಾಜ್ಸಮಂದ್ನಲ್ಲಿ ಅಪಾರ ಪ್ರಮಾಣ ಸ್ಪೋಟಕಗಳನ್ನು ತುಂಬಿಕೊಂಡು ಪಿಕಪ್ ವಾಹನವೊಂದು ಸಾಗುತ್ತಿತ್ತು. ಇದರ ಮಾಹಿತಿ ತಿಳಿದ ಪೊಲೀಸರು ಟ್ರಕ್ ಅನ್ನು ವಶಕ್ಕೆಪಡೆದಿದೆ. ಸುಮಾರು 10 ಕಿ.ಮೀ. ವ್ಯಾಪ್ತಿಗೆ ಹಾನಿ ಉಂಟು ಮಾಡಬಹುದಾದ ಸಾಮರ್ಥ್ಯವಿರುವ 109ಕ್ಕೂ ಹೆಚ್ಚು ಪೆಟ್ಟಿಗೆಗಳ ಜೆಲಾಟಿನ್ ಸ್ಟಿಕ್ಗಳು, ಡಿಟೋನೇಟರ್ಗಳು ಇದ್ದವು. ಗಣಿಗಾರಿಕಾ ಚಟುವಟಿಕೆಗಳಿಗಾಗಿ ಇದನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಟ್ರಕ್ ನಲ್ಲಿದ್ದ ರಾಜಸ್ಥಾನದ ಭಗವತ್ ಸಿಂಗ್, ಹಿಮ್ಮತ್ ಸಿಂಗ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರಕ್ ನಲ್ಲಿ ಸ್ಫೋಟಕಗಳನ್ನು ಸಾಗಿಸಲು ಅಗತ್ಯವಾದ ದಾಖಲೆಗಳನ್ನು ಒದಗಿಸಲು ವಿಫಲರಾಗಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ನಾಥದ್ವಾರದ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿಪ್ರಾ ರಾಜಾವತ್, ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಗ್ಬಂಧನ ಹಾಕಿ ಟ್ರಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹಿಂದೂ ದೇವರುಗಳಿಗೆ ಅವಮಾನಿಸಿದ ತೆಲಂಗಾಣ ಸಿಎಂ – ರೇವಂತ್ ರೆಡ್ಡಿ ವಿರುದ್ಧ ಸಿಡಿದೆದ್ದ ವಿರೋಧ ಪಕ್ಷದ ನಾಯಕರು
ಪ್ರಕರಣಕ್ಕೆ ಸಂಬಂಧಿಸಿ ಚಾಲಕ ಮತ್ತು ಸಹಚರನ ಬಳಿ ಯಾವುದೇ ಅಗತ್ಯವಾದ ಕಡ್ಡಾಯ ದಾಖಲೆಗಳು ಇಲ್ಲದೇ ಇದ್ದುದರಿಂದ ಅವರನ್ನು ಬಂಧಿಸಲಾಗಿದೆ ಮತ್ತು ಟ್ರಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶದಲ್ಲಿ ಅನೇಕ ಅಮೃತಶಿಲೆ ಗಣಿಗಳು ಇರುವುದರಿಂದ ಗಣಿಗಾರಿಕೆಗೆ ಬಳಸಲು ಈ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಶಂಕೆ ಇದೆ. ಈ ಕುರಿತು ಬಂಧಿತರಿಂದ ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

ನೋಡಿರಿ

