ಹಿಂದೂ ದೇವರುಗಳಿಗೆ ಅವಮಾನಿಸಿದ ತೆಲಂಗಾಣ ಸಿಎಂ – ರೇವಂತ್ ರೆಡ್ಡಿ ವಿರುದ್ಧ ಸಿಡಿದೆದ್ದ ವಿರೋಧ ಪಕ್ಷದ ನಾಯಕರು

ಹಿಂದೂ ದೇವರುಗಳಿಗೆ  ಅವಮಾನಿಸಿದ ತೆಲಂಗಾಣ ಸಿಎಂ  – ರೇವಂತ್ ರೆಡ್ಡಿ ವಿರುದ್ಧ  ಸಿಡಿದೆದ್ದ ವಿರೋಧ ಪಕ್ಷದ ನಾಯಕರು

 

ತೆಲಂಗಾಣ ಮುಖ್ಯಮಂತ್ರಿ  ರೇವಂತ್ ರೆಡ್ಡಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದು ಧರ್ಮದ ದೇವರುಗಳ ಬಗ್ಗೆ ಅಪಹಾಸ್ಯ ಮಾಡಿದ್ದು, ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಹಿಂದೂ ಸಂಪ್ರದಾಯದಲ್ಲಿ ಬಹು ದೇವರುಗಳಿರುವುದನ್ನು ಪ್ರಶ್ನಿಸಿದ್ದಾರೆ. ಹಿಂದೂಗಳು ಎಷ್ಟು ದೇವರುಗಳನ್ನು ನಂಬುತ್ತಾರೆ? ಮೂರು ಕೋಟಿ ಇದೆಯೇ? ಇಷ್ಟೊಂದು ಏಕೆ ಇವೆ? ಅವಿವಾಹಿತರಿಗೆ ಒಬ್ಬ ದೇವರು – ಹನುಮಾನ್. ಎರಡು ಬಾರಿ ಮದುವೆಯಾಗುವವರಿಗೆ ಇನ್ನೊಂದು ದೇವರು. ಮತ್ತು ಮದ್ಯಪಾನ ಮಾಡುವವರಿಗೆ ಇನ್ನೊಂದು ದೇವರು. ಕೋಳಿ ಬಲಿಗೆ ಒಬ್ಬನಿದ್ದಾನೆ; ಬೇಳೆ ಮತ್ತು ಅನ್ನಕ್ಕೆ ಒಬ್ಬನಿದ್ದಾನೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರು ಇದ್ದಾನೆ ಎಂದು ಹೇಳುವ ಮೂಲಕ ವಿವಾದ ಎಬ್ಬಿಸಿದ್ದಾರೆ.

 ಇದನ್ನೂ ಓದಿ: HITಮ್ಯಾನ್ ಡಬಲ್ ಸೆಂಚುರಿ ಫಿಕ್ಸ್ – ಕೊಹ್ಲಿ ಭವಿಷ್ಯ ನಿಜವಾಗುತ್ತಾ?

ಹಿಂದೂ ನಂಬಿಕೆಗಳನ್ನು ಅವಮಾನಿಸಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಮತ್ತು ರೇವಂತ್ ರೆಡ್ಡಿಗೆ ಯಾವುದೇ ನಾಚಿಕೆ ಇಲ್ಲ. ಎಲ್ಲಾ ಸಭೆಗಳಲ್ಲಿ, ಮುಸ್ಲಿಮರಿಂದಾಗಿ ಕಾಂಗ್ರೆಸ್ ಬಂದಿದೆ ಎಂದು ಅವರು ಹೇಳುತ್ತಾರೆ. ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಮತ್ತು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿದ ಬಿಆರ್‌ಎಸ್ ನಾಯಕ ರಾಕೇಶ್ ರೆಡ್ಡಿ ಅನುಗುಲ, ಇತ್ತೀಚಿನ ದಿನಗಳಲ್ಲಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುವುದು ಎಲ್ಲರಿಗೂ ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಿದರು. ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ರೇವಂತ್ ರೆಡ್ಡಿ ಮಾತನಾಡುತ್ತಿರುವುದು ದುರದೃಷ್ಟಕರ. ಅವರು ತಕ್ಷಣ ಹಿಂದೂ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

 

Kishor KV