ತಣ್ಣಗಾಗಿದ್ದ ಈದ್ಗಾ ಮೈದಾನದಲ್ಲಿ ಮತ್ತೆ ವಿವಾದ – ಹಿಂದೂ ಸಂಘಟನೆಗಳ ಬೇಡಿಕೆಯೇನು?

ತಣ್ಣಗಾಗಿದ್ದ ಈದ್ಗಾ ಮೈದಾನದಲ್ಲಿ ಮತ್ತೆ ವಿವಾದ – ಹಿಂದೂ ಸಂಘಟನೆಗಳ ಬೇಡಿಕೆಯೇನು?

ಚಾಮರಾಜಪೇಟೆ: ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಾಗುತ್ತಿರುವ  ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ.

ಈ ಹಿಂದೆ ಗಣಪತಿ ಕೂರಿಸುವ ವಿಚಾರವಾಗಿ, ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ವಿಚಾರವಾಗಿ ವಿವಾದವೆದ್ದಿತ್ತು. ಇದೀಗ ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ.

ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೌಂಟರ್ – ಭಾನುವಾರ ಬೆಂಗಳೂರಿನಲ್ಲಿ ಜನ ಸಾಹಿತ್ಯ ಸಮ್ಮೇಳನ

ಜನವರಿ 26ರಂದು ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲು ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೇ  ಗಣರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವಂತೆ ನಗರ ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಮನವಿ ಮಾಡಲಾಗಿದೆ. ಸಂಘಟನೆಗಳ ಮನವಿ ಮೇರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಗಣಪತಿ ಕೂರಿಸುವ ವಿಚಾರವಾಗಿ ವಿವಾದ ಎದ್ದಿತ್ತು. ಕೋರ್ಟ್ ತೀರ್ಪು ಬಂದ ಬಳಿಕ ಮೈದಾನ ಶಾಂತವಾಗಿತ್ತು. ಇದರ ಜೊತೆಗೆ ಈದ್ಗಾ ಮೈದಾನ ಯಾರಿಗೆ ಸೇರಬೇಕು ಎಂಬುದರ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಈ ಸಂಬಂಧ ವಕ್ಫ್ ಬೋರ್ಡ್​ ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ವಜಾಗೊಳಿಸಿ, ಇದು ಕಂದಾಯ ಇಲಾಖೆಗೆ ಸೇರಿದ್ದು ಎಂದು ಆದೇಶ ನೀಡಿತ್ತು. ಈದ್ಗಾ ಮೈದಾನ ತನಗೆ ಸೇರಬೇಕೆಂದು ಅರ್ಜಿ ಸಲ್ಲಿಸಿದ್ದ ವಕ್ಫ್ ಬೋರ್ಡ್ ಸರಿಯಾದ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿತ್ತು.

suddiyaana