ಮಜ್ಜಿಗೆಗೆ ಈ ಸೊಪ್ಪು ಹಾಕಿ ಕುಡಿದ್ರೆ ಕಂಟ್ರೋಲ್ಗೆ ಬರುತ್ತೆ ಶುಗರ್!

ಊಟ ಆದ್ಮೇಲೆ ಒಂದು ಗ್ಲಾಸ್ ಮಜ್ಜಿಗೆ ಕುಡಿಯುವುದರಲ್ಲಿ ಸಿಗುವ ಉಲ್ಲಾಸವೇ ಬೇರೆ. ಮಜ್ಜಿಗೆ ಆರೋಗ್ಯಕ್ಕೂ ತುಂಬಾ ಒಳ್ಳೆದು. ಮಜ್ಜಿಗೆ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಣೆ, ನಿರ್ಜಲೀಕರಣ ತಡೆ, ವಿಟಮಿನ್ ಕೊರತೆ ನಿವಾರಣೆ, ದೇಹದ ವಿಷ ಹೊರಹಾಕುವುದು, ತೂಕ ಇಳಿಕೆ, ಆಮ್ಲೀಯತೆ ನಿವಾರಣೆ ಮುಂತಾದ ಪ್ರಯೋಜನಗಳಿವೆ. ಹೀಗಾಗಿ ವೈದ್ಯರು ಕೂಡ ಮಜ್ಜಿಗೆ ಕುಡಿಯೋದು ಉತ್ತಮ ಎಂದು ಹೇಳುತ್ತಾರೆ. ಆದ್ರೆ ಮಜ್ಜಿಗೆಗೆ ಈ ಸೊಪ್ಪು ಹಾಕಿ ಕುಡಿದ್ರೆ ಶುಗರ್ ಕಂಟ್ರೋಲ್ ಆಗುತ್ತೆ ಅನ್ನೋ ವಿಚಾರ ನಿಮಗೆ ಗೊತ್ತಾ?
ಇದನ್ನೂ ಓದಿ: ತಳ್ಳುವ ಗಾಡಿಯಲ್ಲಿ ATM ಯಂತ್ರ ಕದ್ದೊಯ್ದ ಖತರ್ನಾಕ್ ಗ್ಯಾಂಗ್ – ಅಬ್ಬಬ್ಬಾ.. ಸಿಸಿಟಿವಿ ದೃಶ್ಯ ಕಂಡು ಪೊಲೀಸರೇ ಶಾಕ್!
ಅಚ್ಚರಿಯಾದ್ರೂ ಸತ್ಯ. ಮಜ್ಜಿಗೆ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ರೋಗಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕ ಅಂಶಗಳು ಮಜ್ಜಿಗೆಯಲ್ಲಿ ಕಂಡುಬರುತ್ತದೆ. ಸಕ್ಕರೆ ಕಾಯಿಲೆ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಕ್ತದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾಗುವುದರಿಂದ ಇತರ ಕಾಯಿಲೆಗಳನ್ನು ಪಡೆಯುವ ಅಪಾಯವಿದೆ. ಬ್ಲಡ್ ಶುಗರ್ ಹೆಚ್ಚಳದಿಂದಾಗಿ ರೋಗಿಗಳು ತಮ್ಮ ಕೈ ಮತ್ತು ಕಾಲುಗಳಲ್ಲಿ ಬಿಗಿತವನ್ನು ಅನುಭವಿಸುತ್ತಾರೆ. ಇದರ ಜೊತೆಗೆ ಅಸಹಾಯಕ ನೋವನ್ನು ಅನುಭವಿಸುತ್ತಾರೆ. ಬ್ಲಡ್ ಶುಗರ್ ಅತಿಯಾದಾಗ ಮೊಸರಿನ ಬದಲು ಮಜ್ಜಿಗೆ ಸೇವಿಸುವುದು ದೇಹಕ್ಕೆ ಒಳ್ಳೆಯದು. ಮಜ್ಜಿಗೆಯಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಆದರೆ ಮಜ್ಜಿಗೆಗೆ ಇದನ್ನು ಬೆರೆಸಿಯೇ ಕುಡಿಯಬೇಕು.
ಒಂದು ಲೋಟ ಮಜ್ಜಿಗೆಯಲ್ಲಿ 10 ರಿಂದ 15 ಕರಿಬೇವಿನ ಎಲೆಗಳನ್ನು ಸೇರಿಸಿ ಮುಚ್ಚಿಡಿ. ಸುಮಾರು 1 ಗಂಟೆಗಳ ಕಾಲ ಬಿಡಿ. ನಂತರ ಈ ಮಜ್ಜಿಗೆ ಕುಡಿಯಿರಿ. ಕರಿಬೇವಿನ ಎಲೆಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಕರಿಬೇವು ಕಿಡ್ನಿ ಸ್ಟೋನ್ ನಿವಾರಣೆಗೂ ಉತ್ತಮ ಮನೆಮದ್ದಾಗಿದೆ.

ನೋಡಿರಿ

