ಹೈಕಮಾಂಡ್‌ ಹೇಳಿದಾಗ ಡಿಕೆಶಿ ಸಿಎಂ ಆಗುತ್ತಾರೆ ಎಂದ ಸಿದ್ಧರಾಮಯ್ಯ! – ವರ್ಕೌಟ್‌ ಆಯ್ತಾ ಬ್ರೇಕ್‌ಫಾಸ್ಟ್‌ ಮೀಟಿಂಗ್‌?

ಹೈಕಮಾಂಡ್‌ ಹೇಳಿದಾಗ ಡಿಕೆಶಿ ಸಿಎಂ ಆಗುತ್ತಾರೆ ಎಂದ ಸಿದ್ಧರಾಮಯ್ಯ! – ವರ್ಕೌಟ್‌ ಆಯ್ತಾ ಬ್ರೇಕ್‌ಫಾಸ್ಟ್‌ ಮೀಟಿಂಗ್‌?

ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿದ್ದ ಕಾದಾಟ ಕೊಂಚ ತಣ್ಣಗಾಗಿದೆ. ಸಿಎಂ ಹಾಗೂ ಡಿಸಿಎಂ ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಇದೀಗ ಸಿಎಂ ಸಿದ್ಧರಾಮಯ್ಯ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್‌ ಹೇಳಿದಾಗ ಡಿಕೆ ಶಿವಕುಮಾರ್‌ ಸಿಎಂ ಆಗುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಬೀಡಿ, ಸಿಗರೇಟ್‌ ಬ್ಯಾನ್!‌ – ಊಟ ಬಿಟ್ಟು ಪ್ರತಿಭಟನೆಗಿಳಿದ ಖೈದಿಗಳು!

ಇವತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರ ಸದಾಶಿವ ನಗರದ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆದಿತ್ತು. ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಸುದ್ದಿಗಾರರೊಂದಿಗೆ ಸಿಎಂ ಸಿದ್ಧರಾಮಯ್ಯ, ನಾವು ಹಿಂದೆಯೂ ಒಗ್ಗಟ್ಟಾಗಿದ್ದೆವು, ಈಗಲೂ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್‌ ಹೇಳಿದಾಗ ಡಿಕೆ ಶಿವಕುಮಾರ್‌ ಸಿಎಂ ಆಗುತ್ತಾರೆ. ನಮ್ಮಿಬ್ಬರದ್ದು ಒಂದೇ ಸಿದ್ಧಾಂತ. 2028ಕ್ಕೆ ಮತ್ತೆ ನಾವು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ.  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಿಮ್ಮ ಮನೆಯ ಬ್ರೇಕ್‌ಫಾಸ್ಟ್‌ಗೂ ಡಿಕೆಶಿ ಅವರ ನಿವಾಸದ ಬ್ರೇಕ್‌ಫಾಸ್ಟ್‌ಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಇವನು ವೆಜಿಟೇರಿಯನ್, ನಾನು ನಾನ್ ವೆಜಿಟೇರಿಯನ್. ಆದರೆ ಇವತ್ತು ಇವನ ಮನೆಯಲ್ಲಿ ನಾನ್‌ವೆಜ್‌ ಇತ್ತು. ನಮ್ಮ ಮನೆಯಲ್ಲಿ ವೆಜ್‌ ಇತ್ತು. ಇಲ್ಲಿ ಒರಿಜಿನಲ್ ನಾಟಿ ಕೋಳಿ ಸಿಗುವುದಿಲ್ಲ. ಹಳ್ಳಿಯಿಂದ ನಾಟಿಕೋಳಿ ತರಿಸು ಎಂದಿದ್ದೆ ಎಂದರು.

ಬಿಜೆಪಿಯವ್ರು ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸೋದಾಗಿ ಹೇಳಿದ್ದಾರೆ. ಅವರು ಏನೇ ವಿಚಾರ ಪ್ರಸ್ತಾಪ ಮಾಡಿದರೂ ನಾವು ಒಟ್ಟಾಗಿ ಎದುರಿಸುತ್ತೇವೆ ಎಂದು ಹೇಳಿದರು. ಡಿ.8 ರಂದು ಸಂಸದರ ಸಭೆ ಇರುವ ಕಾರಣ ದೆಹಲಿಗೆ ನಾವು ಹೋಗುತ್ತೇವೆ. ಸಮಯ ಸಿಕ್ಕಿದರೆ ಹೈಕಮಾಂಡ್ ಕರೆದರೆ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.

ಡಿಸೆಂಬರ್ 3 ರಂದು ಮಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಅ ಸಭೆಗೆ ವೇಣುಗೋಪಾಲ್ ಬರುತ್ತಾರೆ. ನಾನು ವೇಣುಗೋಪಾಲ್ ಅವತ್ತು ಮಾತನಾಡುತ್ತೇವೆ ಎಂದು ಹೇಳಿದರು.

Shwetha M