15 ದಿನದಲ್ಲೇ ಕೋಟಿ ಒಡೆಯನಾದ ಅಯ್ಯಪ್ಪ! – ಶಬರಿಮಲೆ ಅಯ್ಯಪ್ಪನ ಹುಂಡಿಗೆ 92 ಕೋಟಿ ರೂ!

15 ದಿನದಲ್ಲೇ ಕೋಟಿ ಒಡೆಯನಾದ ಅಯ್ಯಪ್ಪ! – ಶಬರಿಮಲೆ ಅಯ್ಯಪ್ಪನ ಹುಂಡಿಗೆ 92 ಕೋಟಿ ರೂ!

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಈಗಾಗಲೇ ಆರಂಭವಾಗಿದೆ. ನಿತ್ಯ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತಿದ್ದಾರೆ. ಇದೀಗ ಶಬರಿಮಲೆ ದೇಗುಲದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ನ ಮಾಜಿ ಶಾಸಕ ಇನ್ನಿಲ್ಲ – ಆರ್​. ವಿ. ದೇವರಾಜ್ ಹೃದಯಾಘಾತದಿಂದ ನಿಧನ

ಈ ವರ್ಷ ಯಾತ್ರೆ ಆರಂಭವಾದಾಗಿನಿಂದ ನ.30ರವರೆಗೆ 1.3 ಮಿಲಿಯನ್ ಯಾತ್ರಿಕರು ಭೇಟಿ ನೀಡಿದ್ದಾರೆ. ಅಯ್ಯಪ್ಪನ ವಾರ್ಷಿಕ ಯಾತ್ರೆಯ ಮೊದಲ 15 ದಿನದಲ್ಲೇ ಹುಂಡಿಗೆ 92 ಕೋಟಿ ರೂ. ಹರಿದುಬಂದಿದೆ.

ಈ ಕುರಿತು ಶಬರಿಮಲೆ ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ದೇಗುಲಕ್ಕೆ 69 ಕೋಟಿ ರೂ. ಆದಾಯ ಬಂದಿತ್ತು. ಈ ಸಲ ಶೇ.33ರಷ್ಟು ಹೆಚ್ಚಳದೊಂದಿಗೆ 92 ಕೋಟಿ ರೂ. ಸಂಗ್ರಹವಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಸಂಗ್ರಹವಾಗಿದ್ದ ಮೊತ್ತಕ್ಕಿಂತ ಇದು 23 ಕೋಟಿ ರೂ. ಅಧಿಕ. ಅದರಲ್ಲಿ 47 ಕೋಟಿ ರೂ. ಅರವಣ ಮಾರಾಟದಿಂದ ಸಂಗ್ರಹವಾಗಿದೆ. ಕಳೆದ ಬಾರಿ ಅರವಣ ಮಾರಾಟದಿಂದ 32 ಕೋಟಿ ರೂ. ಸಂಗ್ರಹವಾಗಿತ್ತು ಎಂದು ತಿಳಿಸಿದೆ.

ಇನ್ನು ಯಾತ್ರೆಯ ಆರಂಭದ ನಡುವೆಯೇ, ಮೆದುಳು ತಿನ್ನುವ ಅಮೀಬಾ ಸೋಂಕಿನ ಆತಂಕ ಭಕ್ತರನ್ನು ಕಾಡುತ್ತಿದೆ. ಈಗಾಗಲೇ ಕೇರಳ ಆರೋಗ್ಯ ಇಲಾಖೆ ಭಕ್ತರಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನದಿಯಲ್ಲಿ ತೀರ್ಥಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸಬೇಕು, ಬಿಸಿ ನೀರು ಕುಡಿಯಬೇಕು. ಆಗಾಗ ಕೈಗಳನ್ನು ನೀರಿನಿಂದ ತೊಳೆದುಕೊಳ್ಳುವಂತೆ ಮತ್ತು ತೊಳೆದ ಹಣ್ಣುಗಳನ್ನು ಸೇವಿಸಲು ಸೂಚಿಸಲಾಗಿದೆ. ಅಲ್ಲದೆ, ಬೆಟ್ಟ ಹತ್ತುವಾಗ ಆಗಾಗ ವಿಶ್ರಾಂತಿ ಪಡೆಯುವಂತೆ ಮತ್ತು ಶೌಚಾಲಯಗಳನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ.

Shwetha M