ಬೆಳ್ಳಂಬೆಳಗ್ಗೆ ಡಿಕೆಶಿ ಮನೆಯಲ್ಲಿ ನಾಟಿಕೋಳಿ ಸಾರು, ಇಡ್ಲಿ ಸವಿದ ಸಿಎಂ ಸಿದ್ದರಾಮಯ್ಯ

ಇಂದು ಡಿಕೆ ಶಿವಕುಮಾರ್ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಸೇವಿಸಿದ್ರು. ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟಕ್ಕೆ ಕಳೆದ ಶನಿವಾರ ಸಿದ್ದರಾಮಯ್ಯ ಮನೆಯಲ್ಲಿ ನಡೆದಿದ್ದ ಬ್ರೇಕ್‌ಫಾಸ್ಟ್ ಮೀಟಿಂಗ್ ತೆರೆ ಎಳೆದಿತ್ತು. ಈಗ ಮುಂದುವರಿದ ಭಾಗವಾಗಿ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಟಿಫನ್ ಮಾಡಿದ್ದಾರೆ. ಇಂದು ಬೆಳಗ್ಗೆ ಡಿಕೆಶಿ ಶಿವಕುಮಾರ್ ಮನೆಗೆ ಬಂದ ಸಿದ್ದರಾಮಯ್ಯ ಇಡ್ಲಿ ಹಾಗೂ ನಾಟಿ ಕೋಳಿ ಸಾರು ಸವಿದ್ರು. ಈ ವೇಳೆ ಡಿಕೆ ಸುರೇಶ್ ಕೂಡ ಇದ್ರು.

ಇದನ್ನು ಓದಿ: ಕಾಂಗ್ರೆಸ್‌ನ ಮಾಜಿ ಶಾಸಕ ಇನ್ನಿಲ್ಲ – ಆರ್. ವಿ. ದೇವರಾಜ್ ಹೃದಯಾಘಾತದಿಂದ ನಿಧನ
ಹೈಕಮಾಂಡ್ ಆದೇಶದಂತೆ ಕಳೆದ ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬ್ರೇಕ್ ಫಾಸ್ಟ್ ಮೀಟಿಂಗ್‌ಗೆ ಆಹ್ವಾನಿಸಿದ್ದರು. ಬಳಿಕ ಸುದ್ದಿಗೋಷ್ಠಿಯಲ್ಲಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕುರ್ಚಿ ಕದನಕ್ಕೆ ಫುಲ್ ಸ್ಟಾಪ್ ಹಾಕಿದ್ದರು. ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಖಾಸಗಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಗೆ ಕರೆದಿದ್ರು. ಅದರಂತೆ ಸಿಎಂ ಸಿದ್ದರಾಮಯ್ಯ ಡಿಕೆಶಿ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದ್ರು.

ಬ್ರೇಕ್ ಫಾಸ್ಟ್ ತಿಂಡಿಗಳ ಜೊತೆಗೆ ನಾಟಿ ಕೋಳಿ ಸಾರು ಕೂಡ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಸಿದ್ದವಾಗಿತ್ತು. ವಿಶೇಷ ಅಂದರೇ, ಈಗ ಡಿ.ಕೆ.ಶಿವಕುಮಾರ್ ನಾನ್ ವೆಜ್ ಊಟ ಸೇವಿಸುತ್ತಿಲ್ಲ. ತುಮಕೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳ ಸಲಹೆ ಮೇರೆಗೆ ಡಿಕೆಶಿ ನಾನ್ ವೆಜ್ ಬಿಟ್ಟಿದ್ದಾರೆ. ಆದ್ರೆ ತಮ್ಮ ಮನೆಗೆ ಅತಿಥಿಯಾಗಿ ಬಂದ ಸಿಎಂ ಸಿದ್ದರಾಮಯ್ಯ ಅವರಿಗೆ ಅವರ ಇಷ್ಟವಾದ ಕೋಳಿ ಸಾರು ಮಾಡಿಸಿದ್ರು. ಬ್ರೇಕ್ ಫಾಸ್ಟ್ ಸವಿಯುತ್ತಾ ಉಭಯ ನಾಯಕರು ರಾಜಕೀಯದ ಬಗ್ಗೆ ಮಾತುಕತೆ ನಡೆಸಿದ್ರು.

ನೋಡಿರಿ

