ಒಲಿಂಪಿಕ್ನಲ್ಲಿ ಚಿನ್ನ ಗೆದ್ದವರಿಗೆ 6 ಕೋಟಿ – ಸರ್ಕಾರಿ ಕೆಲಸ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ

ಒಲಿಂಪಿಕ್ನಲ್ಲಿ ಪದಕ ಗೆಲ್ಲಬೇಕು ಅನ್ನುವುದು ಕ್ರೀಡಾಪಟುಗಳ ಕನಸು. ಈ ಕನಸಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಒಲಿಂಪಿಕ್ನಲ್ಲಿ ಚಿನ್ನ ಗೆದ್ದರೆ 6 ಕೋಟಿ ರೂಪಾಯಿ ಮತ್ತು ಸರ್ಕಾರಿ ನೌಕರಿ ಗ್ಯಾರಂಟಿ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.
ಇದನ್ನೂ ಓದಿ:ಚಿನ್ನಸ್ವಾಮಿ ಸ್ಪೇಡಿಯಂ ವಿಷ್ಯದಲ್ಲಿ ಎಡವುತ್ತಿದ್ಯಾ ರಾಜ್ಯ ಸರ್ಕಾರ? – ಐಪಿಎಲ್ ಪಂದ್ಯ ನಡೆಸೋಕೆ ಯಾಕೆ ಈ ಆಟ?
ಸಿಎಂ ಸಿದ್ದರಾಮಯ್ಯ ಅವರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹುಮ್ಮಸ್ಸು ತುಂಬಿಸಿದ್ದಾರೆ. ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಭರ್ಜರಿ ಬಹುಮಾನ ಘೋಷಿಸಿದ್ದಾರೆ. ಒಲಂಪಿಕ್ನಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಸರ್ಕಾರದಿಂದ ₹6 ಕೋಟಿ ರೂ ನಗದು ಜೊತೆಗೆ ಕ್ಲಾಸ್ 1 ಸರ್ಕಾರಿ ಹುದ್ದೆ ನೀಡುವುದಾಗಿ ಸಿಎಂ ಹೇಳಿದ್ದಾರೆ. ಜೊತೆಗೆ ಬೆಳ್ಳಿ ಪದಕ ಗೆದ್ದರೆ 4 ಕೋಟಿ ರೂಪಾಯಿ, ಕಂಚಿನ ಪದಕ ಗೆದ್ದರೆ 3 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
2022, 2023 ಎರಡು ಸಾಲಿಗೂ ಸೇರಿ 30 ಮಂದಿಗೆ ಏಕಲವ್ಯ ಪ್ರಶಸ್ತಿ ಬೆಂಗಳೂರಿನ ಯವನಿಕ ಸಭಾಂಗಣದಲ್ಲಿ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾ ರತ್ನ, ಕ್ರೀಡಾ ಪೋಷಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದೆ. 2022, 2023 ಎರಡು ಸಾಲಿಗೂ ಸೇರಿ ಒಟ್ಟು ಮೂವತ್ತು ಮಂದಿಗೆ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಏಕಲವ್ಯ ವಿಗ್ರಹ ಜೊತೆಗೆ ನಾಲ್ಕು ಲಕ್ಷ ನಗದು ನೀಡಲಾಗಿದೆ. ರಾಜ್ಯಕ್ಕೆ ಕೀರ್ತಿ ತಂದ ಕ್ರೀಡಾಪಟುಗಳನ್ನ ರೂಪಿಸಿದ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ನೆನಪಿನ ಕಾಣಿಕೆ ಜೊತೆಗೆ ಮೂರು ನಗದು ಒಳಗೊಂಡಿದೆ. ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2028ರ ಒಲಂಪಿಕ್ಗೆ 60 ಮಂದಿ ಆಯ್ಕೆ ಮಾಡಿದ್ದಾರೆ, ಪ್ರತಿ ವರ್ಷ ತರಬೇತಿಗಾಗಿ 10 ಲಕ್ಷ ಹಣ ಕೊಡುತ್ತೇವೆ, ಉತ್ತಮ ತರಬೇತುದಾರರಿದ್ದರೆ ಚಿನ್ನ ಗೆಲ್ಲುವುದು ಕಷ್ಟವಲ್ಲ ಎಂದು ಹೇಳಿದರು. ಒಲಿಂಪಿಕ್ ಕ್ರೀಡಾಕೂಟ 2028ಕ್ಕೆ ನಡೆಯಲಿದೆ. ಈ ಬಾರಿ ಅಮೆರಿಕಾ ಲಾಸ್ ಏಂಜಲೀಸ್ನಲ್ಲಿ ಒಲಿಂಪಿಕ್ ನಡೆಯಲಿದೆ.

ನೋಡಿರಿ

