ಬುದ್ದ ವಿಗ್ರಹ – ಪ್ರತಿಮೆಗಳನ್ನು ಮನೆಗೆ ತರುವಾಗ ಈ ವಾಸ್ತು ನಿಯಮಗಳನ್ನು ಪಾಲಿಸಿ

ಬುದ್ದ ವಿಗ್ರಹ – ಪ್ರತಿಮೆಗಳನ್ನು ಮನೆಗೆ ತರುವಾಗ ಈ ವಾಸ್ತು ನಿಯಮಗಳನ್ನು ಪಾಲಿಸಿ

ಈಗ್ ಈಗ ಸಾಕಷ್ಟು ಜನ  ವಾಸ್ತು ಶಾಸ್ತ್ರ ಪಾಲನೆ ಮಾಡುತ್ತಾರೆ.  ಕೆಲವರು ಒಂದು ಪುಟ್ಟ ಗಿಡ ತರುವುದಾದರೂ ವಾಸ್ತು ಪರಿಗಣಿಸುತ್ತಾರೆ. ಇದಕ್ಕೆ ಗಿಡ ಮಾತ್ರವಲ್ಲ, ಮನೆಯ ಅಂದವನ್ನು ಹೆಚ್ಚಿಸಲು ತರುವ ಹೂಕುಂಡಗಳು, ಆಟಿಕೆಗಳು, ವಿಭಿನ್ನ ವಸ್ತುಗಳು ಹೊರತಾಗಿಲ್ಲ. ಅದರಲ್ಲೂ ವಿಶೇಷವಾಗಿ ಬುದ್ದ ವಿಗ್ರಹ – ಪ್ರತಿಮೆಗಳನ್ನು ಮನೆಗೆ ತರುವಾಗ ವಾಸ್ತು ನಿಯಮಗಳನ್ನು ಪಾಲನೆ ಮಾಡುವುದು  ಅಗತ್ಯ.

ಶಾಂತ ಸ್ವರೂಪಿಯಾದ ಈ ಬುದ್ಧನ ಪ್ರತಿಮೆಯನ್ನು ಇಡುವುದರಿಂದ ಸಮಸ್ಯೆಗಳ ಸರಮಾಲೆಯೇ ಎದುರಾಗಲಿದ್ದು, ತಪ್ಪಾದ ಜಾಗದಲ್ಲಿ ಬುದ್ಧನ ಪ್ರತಿಮೆಯನ್ನು ಇರಿಸುವುದರಿಂದ ಋಣಾತ್ಮಕ ಶಕ್ತಿಗಳು ಮನೆಯೊಳಗೆ ಬರುತ್ತವೆ ಎನ್ನುತ್ತಾರೆ. ಹಾಗಾಗಿ ಮನೆಯಲ್ಲಿ ಸಕಾರಾತ್ಮಕತೆ, ಸಂಪತ್ತು, ಅದೃಷ್ಟವನ್ನು ಆಕರ್ಷಿಸುವ ಬುದ್ಧನನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಅಭಿವೃದ್ಧಿ ಹೊಂದಬಹುದಾಗಿದ್ದು, ಇದರಿಂದ ಉಂಟಾಗುವ ಪ್ರಯೋಜನಗಳೇನು…? ಈ ಬಗ್ಗೆ ವಾಸ್ತು ಶಾಸ್ತ್ರ ಏನೇಳುತ್ತದೆ…? ಎನ್ನುವುದರ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ! – 4 ದಿನ ನಿಷೇಧ ಯಾಕೆ?  

ಬುದ್ಧನ ಪ್ರತಿಮೆಯನ್ನು ಪ್ರಶಾಂತವಾದ ವಾತಾವರಣದಲ್ಲಿ ಇರಿಸುವುದು ಅತ್ಯಗತ್ಯ. ನಿಮ್ಮ ಮನೆಯಲ್ಲಿ ಧನಾತ್ಮಕ ಗುಣವನ್ನು ಹೊಂದಿರುವ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ. ನಿಮ್ಮ ವಾಸದ ಕೊಠಡಿ, ಉತ್ತಮ ರೀತಿಯಲ್ಲಿ ಬೆಳಕು ಬಿರುವ ಪ್ರದೇಶ ಸೇರಿದಂತೆ ಉತ್ತಮವಾದ ಪ್ರದೇಶವನ್ನು ಆರಿಸಿಕೊಳ್ಳಿ. ಯಾಕೆಂದರೆ ಬುದ್ಧನ ಪ್ರತಿಮೆಗೆ ಶಾಂತಿಯನ್ನು ಹೊರಸೋಸುವ ಪ್ರಬಲ ಕೇಂದ್ರಬಿಂದುವಾಗಿರುತ್ತದೆ.

ಇನ್ನು, ಬುದ್ಧನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಇರಿಸಿದಲ್ಲಿ ಅಲ್ಲಿ ಜ್ಞಾನದ ಉದಯ ಮತ್ತು ಹೊಸತನದ ಆರಂಭದ ಸೂಚಕವಾಗಿರುತ್ತದೆ. ಇನ್ನು ಸೂರ್ಯನಿಗೆ ಅಭಿಮುಖವಾಗಿ ಬುದ್ಧನ ಪ್ರತಿಮೆಯನ್ನು ಇರಿಸುವುದರಿಂದ ನಿಮ್ಮ ಬದುಕಿನಲ್ಲಿ ಹೊಸ ಭರವಸೆ, ಸಕಾರಾತ್ಮಕತೆ ಮತ್ತು ಹೊಸತನದ ಪ್ರವೇಶವಾಗುತ್ತದೆ.  ಬುದ್ಧನ ಪ್ರತಿಮೆಯನ್ನು ಇರಿಸಲು ಸಾಧ್ಯವಾಗದಿದ್ದರೆ, ಉತ್ತರಾಭಿಮುಖವಾಗಿಯೂ ಪ್ರತಿಮೆಯನ್ನು ಇರಿಸಬಹುದು.

ಮನೆ ಬಾಗಿಲು ಅಥವಾ ಕಿಟಕಿಗೆ ಅಭಿಮುಖವಾಗಿ ಬುದ್ಧನ ಪ್ರತಿಮೆಯನ್ನು ಇರಿಸಬೇಡಿ, ಇದರಿಂದ ಧನಾತ್ಮಕ ಶಕ್ತಿ ನಷ್ಟಗೊಳ್ಳುವ ಸಾಧ್ಯತೆಗಳಿರುತ್ತವೆ. ಇದಲ್ಲದೇ, ಬುದ್ಧನ ಪ್ರತಿಮೆಯನ್ನು ನೀವು ಮಲಗುವ ಕೋಣೆಯಲ್ಲಿ ಇರಿಸುವ ತಪ್ಪನ್ನು ಎಂದಿಗೂ ಮಾಡದಿರಿ. ಪ್ರತಿಮೆಯನ್ನು ಎತ್ತರದ ಸ್ಥಳದಲ್ಲಿ ಇರಿಸಿ. ಮತ್ತು ಆ ಮೂಲಕ ಅದರ ಗೌರವವನ್ನು ಕಾಪಾಡಿಕೊಳ್ಳಿ. ಬಾತ್ ರೂಂ ಅಥವಾ ಅಡುಗೆ ಮನೆಯಲ್ಲಿ ಬುದ್ಧನ ಪ್ರತಿಮೆ ಇರಿಸುವುದರಿಂದ ಮನೆಯಲ್ಲಿ ಸಂಘರ್ಷಮಯ ವಾತಾವರಣ ಕಾಣಿಸಿಕೊಳ್ಳುತ್ತದೆ.

Kishor KV