ಸಮಂತಾ ಬಾಳಲ್ಲಿ ಮತ್ತೆ ಮದುವೆ ಭಾಗ್ಯ – ನಿರ್ದೇಶಕ ರಾಜ್ ನಿಡಿಮೋರು ಜೊತೆ ಎರಡನೇ ಮದುವೆ

ತೆಲುಗು ನಟಿ ಸಮಂತಾ ಎರಡನೇ ಮದುವೆಯಾಗಿದ್ದಾರೆ. ನಿರ್ದೇಶಕ ರಾಜ್ ನಿಧಿಮೋರು ಅವರ ಜೊತೆ ಸರಳವಾಗಿ ಮದುವೆಯಾಗಿದ್ದಾರೆ ನಟಿ ಸಮಂತಾ. ಇಬ್ಬರಿಗೂ ಇದು ಎರಡನೇ ಮದುವೆ. ಕೊಯಮತ್ತೂರಿನ ಇಶಾ ಫೌಂಡೇಶನ್ನಲ್ಲಿ ಈ ಮದುವೆ ನಡೆದಿದೆ.
ಇದನ್ನೂ ಓದಿ:ಬಿಗ್ಬಾಸ್ನಿಂದ ಜಾನ್ವಿ ಹೊರ ಬಂದಿದ್ದು ಬೇಗ ಆಯ್ತಾ? – ಕಾವ್ಯ ಮತ್ತು ಸ್ಪಂದನಾ ಟೆನ್ಷನ್ ಮಾಡಿಕೊಂಡಿದ್ಯಾಕೆ?
ದಿ ಫ್ಯಾಮಿಲಿ ಮ್ಯಾನ್ 2 ಸರಣಿಯಲ್ಲಿ ನಿರ್ದೇಶಕ ರಾಜ್ ನಿಧಿಮೋರು ಮತ್ತು ನಟಿ ಸಮಂತಾ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಇಬ್ಬರಿಗೂ ಸ್ನೇಹವಾಗಿ ನಂತರ ಸ್ನೇಹ ಪ್ರೀತಿಯಾಗಿದೆ. ಈಗ ಪ್ರೀತಿಸುವ ಮನಸುಗಳು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕ ರಾಜ್ ನಿಡಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಈ ಸುದ್ದಿ ಸದ್ದು ಮಾಡುತ್ತಿರುವಾಗಲೇ ರಾಜ್ ಜೊತೆ ಸಮಂತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 1 ಸೋಮವಾರ ಈ ಮದುವೆ ನಡೆದಿದೆ.
ನಟಿ ಸಮಂತಾ ಅವರು ಮೊದಲು ನಾಗ ಚೈತನ್ಯ ಅವರನ್ನು ವಿವಾಹ ಆಗಿದ್ದರು. ನಾಲ್ಕೇ ವರ್ಷಗಳಲ್ಲಿ ಇವರ ದಾಂಪತ್ಯ ಮುರಿದು ಬಿದ್ದಿತ್ತು. ಆ ಬಳಿಕ ಸಮಂತಾ ಪ್ರತ್ಯೇಕವಾಗಿ ಜೀವನ ನಡೆಸಲು ಆರಂಭಿಸಿದರು. ಕಳೆದ ವರ್ಷ ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹ ನಡೆದಿತ್ತು. ಈ ವರ್ಷ ಸಮಂತಾ ಮದುವೆ ಆಗಿದ್ದಾರೆ. ಸಮಂತಾ ಅವರು ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಕ್ಯಾಪ್ಶನ್ನಲ್ಲಿ ವಿವಾಹದ ಡೇಟ್ ಹಾಕಿದ್ದಾರೆ. ಪೂಜಾ ವಿಧಿ-ವಿಧಾನದ ಫೋಟೋ ಜೊತೆಗೆ ರಾಜ್ ಜೊತೆ ಇರುವ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೊಯಮತ್ತೂರಿನ ಇಶಾ ಫೌಂಡೇಶನ್ನಲ್ಲಿ ಈ ಮದುವೆ ನಡೆದಿದೆ. ಸಮಂತಾ ಅವರು ಜಗ್ಗಿ ವಾಸುದೇವ್ ಅವರ ಅನುಯಾಯಿ. ಹೀಗಾಗಿ, ಇಶಾದಲ್ಲಿಯೇ ಈ ಮದುವೆ ನಡೆದಿದೆ.
‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯನ್ನು ರಾಜ್ ನಿರ್ದೇಶನ ಮಾಡಿದ್ದದರು. ಇದರಲ್ಲಿ ಸಮಂತಾ ನಟಿಸಿದ್ದರು.‘ಸಿಟಾಡೆಲ್’ ಸರಣಿಯಲ್ಲೂ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಇಬ್ಬರ ನಡುವೆ ಪರಿಚಯ ಆಗುವಾಗ ರಾಜ್ಗೆ ಆಗಲೇ ವಿವಾಹ ಆಗಿತ್ತು. ಅವರು ಶ್ಯಾಮಲಿ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದರು. ಈಗ ಸಮಂತಾ ಅವರು ರಾಜ್ ಜೊತೆಯೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ನೋಡಿರಿ

