ಹಾಕಿ ವಿಶ್ವಕಪ್‌ಗೆ ದಿನಗಣನೆ – ತವರಿನಲ್ಲಿ ಭಾರತದಿಂದ ಉತ್ತಮ ಪ್ರದರ್ಶನದ ನಿರೀಕ್ಷೆ

ಹಾಕಿ ವಿಶ್ವಕಪ್‌ಗೆ ದಿನಗಣನೆ – ತವರಿನಲ್ಲಿ ಭಾರತದಿಂದ ಉತ್ತಮ ಪ್ರದರ್ಶನದ ನಿರೀಕ್ಷೆ

ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಹಾಕಿ ವಿಶ್ವಕಪ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಭಾರತದಲ್ಲಿ 2023ರ ಹಾಕಿ ವಿಶ್ವಕಪ್‌ ಆಯೋಜಿಸಿರುವುದು ದೇಶದ ಜನತೆಗೂ ಹೆಮ್ಮೆಯ ವಿಚಾರವೇ.  2018 ರಲ್ಲಿಯೂ ಹಾಕಿ ವಿಶ್ವಕಪ್ ಭಾರತದಲ್ಲಿಯೇ ನಡೆದಿತ್ತು. ಈಗ ಜನವರಿ 13 ರಿಂದ 29 ರ ನಡುವೆ ಒಡಿಶಾದ ಭುವನೇಶ್ವರ್ ಮತ್ತು ರೂರ್ಕೆಲಾದಲ್ಲಿ (Bhubaneswar and Rourkela) ಹಾಕಿ ವಿಶ್ವಕಪ್ ನಡೆಯಲಿದೆ. ಈ ಬಾರಿಯ ಹಾಕಿ ವಿಶ್ವಕಪ್​ನಲ್ಲಿ ಒಟ್ಟು 288 ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ವಿಶ್ವಕಪ್‌ನ 51 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನ ಪಂದ್ಯಗಳು 2 ನಗರಗಳಲ್ಲಿ ನಡೆಯಲಿವೆ. 15ನೇ ಹಾಕಿ ವಿಶ್ವಕಪ್‌ನ 44 ಪಂದ್ಯಗಳು ಭುವನೇಶ್ವರದ ಕಳಿಂಗ ಸ್ಟೇಡಿಯಂ ಮತ್ತು ರೂರ್ಕೆಲಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇದನ್ನೂ ಓದಿ:  ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಶಿಫ್ಟ್ ಆಗ್ತಾರಾ ರಿಷಬ್ ಪಂತ್ ?

ಈಗಾಗಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್​ ಅವರು ಭಾರತೀಯ ಪುರುಷ ತಂಡದ ಆಟಗಾರರಿಗೆ ಗುಡ್ ನ್ಯೂಸ್ ನೀಡಿದ್ದರು. ಈ ಬಾರಿ ಹಾಕಿ ವಿಶ್ವಕಪ್​ನಲ್ಲಿ ನಮ್ಮ ಭಾರತೀಯ ತಂಡ ಗೆದ್ದರೆ, ತಂಡದ ಪ್ರತಿಯೊಬ್ಬ ಆಟಗಾರನಿಗೂ 1 ಕೋಟಿ ರೂಪಾಯಿಯ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.  ಬಹುದಿನದ ಭಾರತದ ಕನಸಾಗಿದ್ದ ಹಾಕಿ ವಿಶ್ವಕಪ್​ ಈ ಬಾರಿ ತನ್ನ ತವರಿನಲ್ಲೇ ನಡೆಯುವುದರಿಂದ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷಯೂ ಇದೆ.

suddiyaana