ಬಿಗ್‌ಬಾಸ್‌ನಿಂದ ಜಾನ್ವಿ ಹೊರ ಬಂದಿದ್ದು ಬೇಗ ಆಯ್ತಾ? – ಕಾವ್ಯ ಮತ್ತು ಸ್ಪಂದನಾ ಟೆನ್ಷನ್ ಮಾಡಿಕೊಂಡಿದ್ಯಾಕೆ?

ಬಿಗ್‌ಬಾಸ್‌ನಿಂದ ಜಾನ್ವಿ ಹೊರ ಬಂದಿದ್ದು ಬೇಗ ಆಯ್ತಾ? – ಕಾವ್ಯ ಮತ್ತು ಸ್ಪಂದನಾ ಟೆನ್ಷನ್ ಮಾಡಿಕೊಂಡಿದ್ಯಾಕೆ?

ಬಿಗ್‌ಬಾಸ್ ಮನೆಯಿಂದ ಈ ವಾರ ಎಲಿಮಿನೇಷನ್ ನಿಜವಾಗಲೂ ಅಚ್ಚರಿ ಹುಟ್ಟಿಸಿದೆ. ಚೆನ್ನಾಗಿಯೇ ಆಡುತ್ತಿದ್ದ ಜಾನ್ವಿ ಮನೆಯಿಂದ ಔಟ್ ಆಗಿದ್ದಾರೆ. ಬಹುಶಃ ಈ ಬೆಳವಣಿಗೆಯನ್ನು ಯಾರೂ ಕೂಡಾ ನಿರೀಕ್ಷಿಸಿರಲಿಲ್ಲ. ಯಾವುದೇ ಬೇಜಾರಿಲ್ಲದೆ ಎಲ್ಲರಿಗೂ ಅಡುಗೆ ಮಾಡುತ್ತಿದ್ದ, ಚೆನ್ನಾಗಿಯೇ ಆಡುತ್ತಿದ್ದ ಜಾನ್ವಿ ಹೊರಬಂದಿದ್ದು ಮಾತ್ರ ಅವರ ಸ್ವಯಂ ತಪ್ಪಿನಿಂದ ಅನ್ನೋದು ಕಿಚ್ಚನ ಪಂಚಾಯ್ತಿಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ:ಮತ್ತೊಮ್ಮೆ ಕ್ಯಾಪ್ಟನ್ ಪಟ್ಟಕ್ಕೇರಿದ ಧನುಷ್ – ರಘು, ಸೂರಜ್‌ಗೆ ರೇಸ್‌ನಲ್ಲಿ ಸೋಲು..!

ಬಿಗ್‌ಬಾಸ್ ಮನೆಯಲ್ಲಿ ಅವರ ಆಟ ಅವರೇ ಆಡಿದರೆ ಚೆಂದ. ಇನ್ನೊಬ್ಬರ ನೆರಳಲ್ಲಿ ನಾನಿಲ್ಲ ಅಂತಾ ಸಾರಿ ಸಾರಿ ಹೇಳಿದರೂ ನೋಡುವವರ ಕಣ್ಣಿಗೆ ಅದು ನೆರಳಾಗಿ ಕಾಣುತ್ತದೆ ಅನ್ನೋದಕ್ಕೆ ಜಾನ್ವಿ ಉದಾಹರಣೆಯಾಗಿದ್ದಾರೆ. ಜೊತೆಗೆ ಜಾನ್ವಿ ಯಾರ ಜೊತೆಗೂ ಬೆರೆಯುತ್ತಲೇ ಇರಲಿಲ್ಲ. ಅಡುಗೆ ಮನೆಯಲ್ಲಿ ನಿಂತರೆ ಎಲ್ಲರಿಗೂ ಅಡುಗೆ ಮಾಡುತ್ತಾರೆ. ಅದು ಬಿಟ್ಟರೆ ಅಶ್ವಿನಿ ಗೌಡ ಜೊತೆಯೇ ಅವರ ಪ್ರಪಂಚ. ಇದೇ ಜಾನ್ವಿಯವರು ಮನೆಯಿಂದ ಹೊರ ಬರಲು ಕಾರಣ ಅನ್ನೋದು ಕಿಚ್ಚ ಸುದೀಪ್ ಅವರ ವಾರದ ಪಂಚಾಯ್ತಿಯಲ್ಲಿ ವೀಕ್ಷಕರಿಗೆ ಗೊತ್ತಾಗಿದೆ.

ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ನಾಮಿನೇಟ್ಆಗಿದ್ದರು. ಇವರಲ್ಲಿ ಜಾಹ್ನವಿ ಮನೆಯಿಂದ ಹೊರ ಬಂದಿದ್ದಾರೆ. ಅಮ್ಮ ಹೊರಬಂದಾಗ ಮಗ ಗ್ರಂಥ್ ಕಣ್ಣಲ್ಲಿ ನೀರು ಹಾಕಿದ್ದಾನೆ. ಇದು ಅನೇಕ ವೀಕ್ಷಕರಲ್ಲೂ ಬೇಸರ ತಂದಿದೆ. ಮಗನಿಗಾಗಿ ಅಮ್ಮ ಇನ್ನು ಚೆನ್ನಾಗಿ ಆಡಬೇಕಿತ್ತು ಎಂದಿದ್ದಾರೆ ವೀಕ್ಷಕರು. ಮತ್ತೊಂದೆಡೆ ಜಾನ್ವಿ ಹೊರ ಹೋಗುತ್ತಿದ್ದಂತೆ ಸ್ಪಂದನಾ ಮತ್ತು ಕಾವ್ಯ ಚಿಂತೆಗೀಡಾಗಿದ್ದಾರೆ. ಇಲ್ಲಿ ಯಾರು ಯಾವಾಗ ಹೊರಹೋಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಜಾನ್ವಿಯವರು ಚೆನ್ನಾಗಿಯೇ ಆಡುತ್ತಿದ್ದರು. ಅವರು ಯಾಕೆ ಹೊರಹೋಗಿರಬಹುದು ಎಂಬ ಬಗ್ಗೆ ಸ್ಪಂದನಾ ಮತ್ತು ಕಾವ್ಯ ತಲೆಕೆಡಿಸಿಕೊಂಡಿದ್ದಾರೆ.

Sulekha