ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಇನ್ಮುಂದೆ ಈ ಮಾರ್ಗದಲ್ಲಿ ಮುಂಜಾನೆಯಿಂದಲೇ ಮೆಟ್ರೋ ಸೇವೆ!

ನಮ್ಮ ಮೆಟ್ರೋ ಬೆಂಗಳೂರಿಗರ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ವರ್ಷದಿಂದ ವರ್ಷಕ್ಕೆ ನಮ್ಮ ಮೆಟ್ರೋ ವಿಸ್ತರಣೆಯಾಗುತ್ತಿದೆ. ಇತ್ತೀಚೆಗೆ ಹಳದಿ ಮಾರ್ಗ ಉದ್ಘಾಟನೆಯಾಗಿದ್ದು, ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಿದ್ದಾರೆ. ಇದೀಗ ಬಿಎಂಆರ್‌ಸಿಎಲ್ ಯೆಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಸೋಮವಾರ ಬೆಳಗ್ಗೆ 5.5 ಮತ್ತು 5.35ಕ್ಕೆ ಎರಡು ರೈಲು ಸೇವೆ ಒದಗಿಸಲು ಮುಂದಾಗಿದೆ
ಇದನ್ನೂ ಓದಿ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಮೇಕೆ ಕದಿಯಲು ಹೋಗಿ ಬೋನಿನಲ್ಲಿ ಬಂಧಿಯಾದ ವ್ಯಕ್ತಿ!
ಆರ್.ವಿ. ರಸ್ತೆ – ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಈವರೆಗೆ ಬೆಳಿಗ್ಗೆ 6 ಗಂಟೆಗೆ ರೈಲು ಸೇವೆ ಆರಂಭವಾಗುತ್ತಿತ್ತು. ಹಸಿರು ಮಾರ್ಗದ ಮೂಲಕ ಬರುವ ಪ್ರಯಾಣಿಕರು ಆರ್.ವಿ. ರಸ್ತೆ ಇಂಟರ್‌ಚೇಂಜ್ ನಿಲ್ದಾಣಕ್ಕೆ ಬೇಗ ತಲುಪುತ್ತಾರೆ. ಆದರೆ ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ಬರುವ ಹಳದಿ ಮಾರ್ಗದ ರೈಲಿಗಾಗಿ ಅರ್ಧ ಗಂಟೆ ಕಾಯಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಪ್ರಯಾಣಿಕರು ಹಳದಿ ಮಾರ್ಗದಲ್ಲೂ ಬೇಗ ರೈಲು ಆರಂಭಿಸುವಂತೆ ಒತ್ತಾಯಿಸಿದ್ದರು. ಕಳೆದ ವಾರ ರೈಲು ಸಂಚಾರ ವಿಳಂಬ ಪ್ರಶ್ನಿಸಿ ಪ್ರಯಾಣಿಕರು ಪ್ರತಿಭಟಿಸಿದ್ದರು. ಇದೀಗ ಪ್ರಯಾಣಿಕರ ಆಗ್ರಹಕ್ಕೆ ಮಣಿದಿರುವ ನಮ್ಮ ಮೆಟ್ರೋ ನಗರದ ಆರ್.ವಿ. ರಸ್ತೆ – ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಪ್ರತಿ ಸೋಮವಾರ ರೈಲು ಸಂಚಾರವನ್ನು ಬೆಳಗಿನ ಜಾವದಲ್ಲಿ ಆರಂಭಿಸಲು ನಿರ್ಧರಿಸಿದೆ. ಸೋಮವಾರ ಬೆಳಗ್ಗೆ 5.5 ಮತ್ತು 5.35ಕ್ಕೆ ಎರಡು ರೈಲು ಸೇವೆ ಒದಗಿಸಲು ಮುಂದಾಗಿದೆ. ಸೋಮವಾರ ಬಿಟ್ಟು ಉಳಿದ ದಿನ ಬೆಳಗ್ಗೆ 6 ಗಂಟೆಗೆ ಹಾಗೂ ಭಾನುವಾರ ಬೆಳಗ್ಗೆ 7 ಗಂಟೆಗೆ ರೈಲುಸೇವೆ ಆರಂಭವಾಗಲಿದೆ. ಸಮಯ ಬದಲಾವಣೆ ಬಗ್ಗೆ ನಿಲ್ದಾಣಗಳ ಫಲಕದಲ್ಲಿ ಮಾಹಿತಿ ನೀಡಲಾಗುತ್ತಿದೆ. ಹಸಿರು, ನೇರಳೆ ಮೆಟ್ರೋ ಮಾರ್ಗದಲ್ಲಿ ಪ್ರತಿದಿನ 5.5 ಗಂಟೆಗೆ ಮೆಟ್ರೋ ಸೇವೆ ಪ್ರಾರಂಭವಾಗುತ್ತದೆ.

ನೋಡಿರಿ

