DKDಯಲ್ಲಿ ವೈರಲ್ ಪೂಜಾ ಹವಾ.. ಸುಂಟರಗಾಳಿಯಾಗಿ ಬಂದ ಸರ್ಕಾರಿ ಶಾಲೆ ಹುಡುಗಿ

ಜೀ ಕನ್ನಡದಲ್ಲಿ ಮನರಂಜನೆಗೆ ಕೊರತೆ ಇಲ್ಲ. ಇದೀಗ ವೀಕೆಂಡ್‌ನಲ್ಲಿ ಮನರಂಜನೆ ಡಬಲ್ ಮಾಡಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೂಡ ಶುರುವಾಗಿದೆ. ಕಳೆದ ವಾರದಿಂದ ಡಿಕೆಡಿ ಎಪಿಸೋಡ್ಸ್ ಪ್ರಸಾರ ಆಗ್ತಿದೆ. ಆದ್ರೆ ಆಡಿಷನ್ಸ್ ರೌಂಡ್ ಟೆಲಿಕಾಸ್ಟ್ ಆದ್ಮೇಲೆ ಈ ಸ್ಪರ್ಧಿ ಮಾತ್ರ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಈಕೆಯದ್ದೇ ಹವಾ.. ಎಸ್ ಆಕೆ ಬೇರೆ ಯಾರು ಅಲ್ಲ. ವೈರಲ್ ಹುಡುಗಿ ಪೂಜಾ. ಮೆಗಾ ಆಡಿಷನ್‌ನಲ್ಲೇ ಸುಂಟರಗಾಳಿಯಂತೆ ಭರ್ಜರಿ ಪರ್ಫಾಮೆನ್ಸ್ ನೀಡಿರೋ ಪೂಜಾ ಫುಲ್ ಟ್ರೆಂಡಿಂಗ್‌ನಲ್ಲಿದ್ದಾಳೆ.
ಇದನ್ನೂ ಓದಿ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಮೇಕೆ ಕದಿಯಲು ಹೋಗಿ ಬೋನಿನಲ್ಲಿ ಬಂಧಿಯಾದ ವ್ಯಕ್ತಿ!
ಜೀಕನ್ನಡದಲ್ಲಿ ಡಿಕೆಡಿ ಹವಾ ಶುರುವಾಯ್ತು. ಈಗಾಗಲೇ ಸ್ಪರ್ಧಿಗಳ ಆಯ್ಕೆ ಕೂಡ ನಡೆದಿದೆ. ಕಿರುತೆರೆ ಕಲಾವಿದರ ಜೊತೆಗೆ ಸ್ಪರ್ಧಿಗಳು ಹೆಜ್ಜೆ ಹಾಕಲಿದ್ದಾರೆ. ಆದ್ರೀಗ ವೈರಲ್ ಪೂಜಾ ಹವಾ ಜೋರಾಗಿದೆ. ಮೆಘಾ ಆಡಿಷನ್‌ನಲ್ಲಿ ಸುಂಟರಗಾಳಿ ಹಾಡಿಗೆ ಹೆಜ್ಜೆ ಹಾಕೋ ಮೂಲಕ ಸ್ಟೇಜ್‌ನಲ್ಲಿ ಧೂಳೆಬ್ಬಿಸಿದ್ದಾಳೆ. ಇದೀಗ ಆಕೆ ಹಿನ್ನೆಲೆ ಏನು ಅಂತ ಅನೇಕರು ಹುಡುಕ್ತಿದ್ದಾರೆ. ಅಂದ್ಹಾಗೆ ಪೂಜಾ ಗ್ರಾಮೀಣ ಪ್ರತಿಭೆ. ಮನೆಯಲ್ಲಿ ಬಡತನ ಇದ್ರೂ ಡ್ಯಾನ್ಸ್ ವಿಚಾರದಲ್ಲಿ ಈಕೆ ಸಿರಿವಂತೆ. ಎಷ್ಟೇ ಕಷ್ಟದ ಸ್ಟೆಪ್ಸ್ ಇದ್ರೂ ಈಕೆ ನೀರು ಕುಡಿದಷ್ಡೇ ಈಜಿಯಾಗಿ ಹೆಜ್ಜೆ ಹಾಕ್ತಾಳೆ.
ಪೂಜಾ ಬಳ್ಳಾರಿ ಜಿಲ್ಲೆಯ ಕುರುಗೋಡಿನ ನಿವಾಸಿ. ಬಡತನದ ಕುಟುಂಬದಲ್ಲಿ ಬೆಳೆದ ಈಕೆ, ಬಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ತಂದೆ ಕಲ್ಲು ಹೊಡೆಯುವ ಕೆಲಸ ಮಾಡಿದ್ರೆ, ತಾಯಿ ಮನೆ ಕೆಲಸ ಮಾಡಿಕೊಂಡು ಮೂವರು ಮಕ್ಕಳನ್ನ ಓದಿಸುತ್ತಿದ್ದಾರೆ. ಪೂಜಾ ತಂದೆಗೆ ಡ್ಯಾನ್ಸ್‌ನಲ್ಲಿ ಆಸಕ್ತಿ ಇತ್ತು. ಹೀಗಾಗೇ ಮಗಳ ಡ್ಯಾನ್ಸ್‌ಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇದ್ರಿಂದಾಗೇ ಪೂಜಾಳನ್ನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೂ ಬರುವಂತೆ ಆಗಿದೆ. ಮೆಘಾ ಆಡಿಷನ್‌ನಲ್ಲಿ ದರ್ಶನ್ ಮತ್ತು ರಕ್ಷಿತಾ ಅಭಿನಯದ ಕಳಾಸಿಪಾಳ್ಯ ಸಿನಿಮಾದ ಸುಂಟರಗಾಳಿ ಹಾಡಿಗೆ ಪೂಜಾ ಭರ್ಜರಿ ಸ್ಟೆಪ್ಸ್ ಹಾಕಿದ್ಲು. ಈಕೆ ಡ್ಯಾನ್ಸ್‌ಗೆ ಜಡ್ಜಸ್ ಫಿದಾ ಆಗಿದ್ರು. ಈಕೆ ಎನರ್ಜಿ, ಆಟಿಟ್ಯೂಡ್, ಎಕ್ಸ್‌ಪ್ರೆಷನ್‌ಗೆ ಜಡ್ಜಸ್ ಕಳೆದು ಹೋದ್ರು.
ಇನ್ನು ಪೂಜಾಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇನ್ಸ್ಪಿರೇಷನ್ ಎಂದು ಆಕೆ ಸ್ಟೇಜ್ ಮೇಲೆ ಹೇಳಿಕೊಂಡಿದ್ದಾಳೆ. ಮನೆಯಲ್ಲಿ ತುಂಬಾ ಬಡತನ ಇರೋದ್ರಿಂದ ಆಕೆ, ಸ್ಕೂಲ್ ಯೂನಿಫಾರ್ಮ್‌ನಲ್ಲೇ ಬಂದು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ್ಲು. ಯೂನಿಫಾರ್ಮ್ ನಲ್ಲಿ ಯಾಕೆ ಡ್ಯಾನ್ಸ್ ಮಾಡಿದೆ ಎಂದು ಅನುಶ್ರೀ ಕೇಳಿದಾಗ, ನಾವು ಬಡವರು. ಕಾಸ್ಟ್ಯೂಮ್ ತೆಗೆದುಕೊಳ್ಳಲು ದುಡ್ಡಿಲ್ಲ ಎಂದು ಹೇಳಿದ್ಲು. ಇದು ಎಲ್ಲರನ್ನ ಭಾವುಕರನ್ನಾಗಿ ಮಾಡಿತು.
ಈ ವಾರ ಕೂಡ ಪೂಜಾ ಭರ್ಜರಿ ಪರ್ಫಾಮೆನ್ಸ್ ನೀಡಿದ್ದಾಳೆ. ಹಳೆ ಪಾತ್ರೆ ಹಳೆ ಕಬ್ಣ, ಹಳೆ ಪೇಪರ್ ಕಣೋ ಹೋಯಿ ಸಾಂಗ್ ಗೆ ಮಸ್ತ್ ಸ್ಟೆಪ್ಸ್ ಹಾಕಿದ್ದಾಳೆ. ಈಕೆ ಡ್ಯಾನ್ಸ್ ನೋಡಿ ಜಡ್ಜಸ್ ಫಿದಾ ಆಗಿದ್ದಾರೆ. ಆಕೆಯನ್ನ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ. ಅರ್ಜುನ್ ಜನ್ಯ ಪೂಜಾಗೆ ವೇದಿಕೆಯಲ್ಲಿ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ. ಬಟ್ಟೆ ಇಲ್ಲ ಅಂತ ಹೇಳಿದ್ದ ಪೂಜಾಗೆ ಹೊಸ ಬಟ್ಟೆ ಕೊಡಿಸಿದ್ದಾರೆ. ಇದನ್ನ ನೋಡಿದ ಪೂಜಾ ಹಾಗೂ ಆಕೆ ಕುಟುಂಬಸ್ಥರು ಆನಂದಭಾಷ್ಪ ಸುರಿಸಿದ್ದಾರೆ. ಈ ವೇಳೆ ಹೇಳೋಕೆ ಮಾತೇ ಬರ್ತಿಲ್ಲ. ಖುಷಿ ಕೊಡ್ತಿದೆ ಎಂದು ಪೂಜಾ ಹೇಳಿದ್ದಾಳೆ.
ಇನ್ನು ಪೂಜಾ ಡಿಕೆಡಿ ಬರೋದಿಕ್ಕೂ ಮುನ್ನವೇ ಫೇಮಸ್. ತನ್ನ ಪ್ರತಿಭೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾಳೆ. ಶಾಸಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಾಯಕ ನಟರಾಗಿ ನಟಿಸಿರುವ, ಜೂನಿಯರ್ ಸಿನಿಮಾದ ವೈರಲ್ ವೈಯಾರಿ ಸಾಂಗ್ ಡ್ಯಾನ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡಿದ್ಲು. ಕಿರೀಟಿ ಈ ಸಿನಿಮಾದಲ್ಲಿ ಹೆಚ್ಚು ಸದ್ದು ಮಾಡಿದ್ದೇ ಈ ಹಾಡಿಗೆ ತುಂಬಾ ಕಷ್ಟ ಇರೋ ಸ್ಟೆಪ್ಸ್ ಹಾಕಿದ್ರಿಂದ. ಅದಕ್ಕಾಗಿ ಅವ್ರು ಹಲವು ದಿನಗಳಿಂದ ಪ್ರ್ಯಾಕ್ಟಿಸ್ ಮಾಡಿ ಆ ಡ್ಯಾನ್ಸ್ ಮಾಡಿದ್ರು.. ಆದ್ರೆ ಪೂಜಾ ಕಷ್ಟದ ಸ್ಟೆಪ್ಸ್‌ಗಳನ್ನ ಒಂದೇ ರಾತ್ರಿ ಕಲಿತು, ಸಾಂಗ್‌ಗೆ ಹೆಜ್ಜೆ ಹಾಕಿದ್ದಾಳೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಕಿರೀಟಿ ಅವರು ಪೂಜಾ ಅವರ ಕುಟುಂಬವನ್ನು ಮನೆಗೆ ಕರೆಯಿಸಿ, ಗೌರವಿಸಿ ಕಳುಹಿಸಿದ್ದಾರೆ. ಆಕೆಯ ಟ್ಯಾಲೆಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಲ್ಲಿಂದಲೇ ಪೂಜಾಳನ್ನ ವೈರಲ್ ಗರ್ಲ್ ಅಂತ ಕರೆಯಲಾಗ್ತಿದೆ.
ಸಣ್ಣ ಹಳ್ಳಿಯಲ್ಲಿ ಬೆಳದ ಪೂಜಾ ಈಗ ತನ್ನ ಟ್ಯಾಲೆಂಟ್ ಮೂಲಕವೇ ಬಹುದೊಡ್ಡ ವೇದಿಕೆಯಲ್ಲಿ ಚಾನ್ಸ್ ಪಡೆದುಕೊಂಡಿದ್ದಾಳೆ. ಮನೆಯಲ್ಲಿ ಬಡತನ ಇದ್ರೂ ಡ್ಯಾನ್ಸ್ ಎಂಬ ಸಿರಿತನದ ಮೂಲಕ ಹೆಸರು ಮಾಡ್ತಿದ್ಧಾಳೆ. ಈಕೆ ಡ್ಯಾನ್ಸ್ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡ್ಲಿ, ಸಾಕಷ್ಟು ಅವಕಾಶ ಹುಡುಕಿಕೊಂಡು ಬರ್ಲಿ. ಪೂಜಾ ಬದುಕು ಬಂಗಾರ ಆಗ್ಲಿ ಅನ್ನೋದೇ ಎಲ್ಲರ ಆಶಯ.

ನೋಡಿರಿ

