ಸ್ಕೈ-ಡೈನಿಂಗ್ ರೆಸ್ಟೋರೆಂಟ್ ಊಟ ಮಾಡಲು ಹೋಗಿ 120 ಅಡಿ ಎತ್ತರದಲ್ಲಿ ಸಿಲುಕಿದ ಪ್ರವಾಸಿಗರು!

ಕಾಲಕ್ಕೆ ತಕ್ಕಂತೆ ಕೋಲ ಅನ್ನೋ ಮಾತಿನಂತೆ ಜನ ಎಲ್ಲರದಲ್ಲೂ ಹೊಸತನವನ್ನ ಬಯಸುತ್ತಾರೆ. ಹೀಗಾಗೇ ಹೋಟೆಲ್, ಬಾರ್, ಅಂಗಡಿಗಳಲ್ಲಿ ವಿಭಿನ್ನ ಕಾನ್ಸೆಪ್ಟ್‌ಗಳ ಮೂಲಕ ಕಟ್ಟಡಗಳನ್ನ ಕಟ್ಟಿರುತ್ತಾರೆ. ಇತ್ತೀಚೆಗಂತೂ ಸ್ಕೈ-ಡೈನಿಂಗ್ ರೆಸ್ಟೋರೆಂಟ್ ಫುಲ್ ಟ್ರೆಂಡಿಂಗ್‌ನಲ್ಲಿದೆ. ಇದೀಗ ಇಲ್ಲೊಂದು ಕಡೆ ಸ್ಕೈ-ಡೈನಿಂಗ್ ರೆಸ್ಟೋರೆಂಟ್ನಲ್ಲಿ ಊಟಕ್ಕೆ ಕುಳಿತವರು ಅಲ್ಲೇ ಸಿಲುಕಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಮೇಕೆ ಕದಿಯಲು ಹೋಗಿ ಬೋನಿನಲ್ಲಿ ಬಂಧಿಯಾದ ವ್ಯಕ್ತಿ!
ಈ ಘಟನೆ ಕೇರಳದ ಇಡುಕ್ಕಿ ಎಂಬಲ್ಲಿ ನಡೆದಿದೆ. ಮಂಗಳೂರು ಮೂಲಕ ಐದು ಮಂದಿ ಪ್ರವಾಸಿಗರು ಸ್ಕೈ-ಡೈನಿಂಗ್ ರೆಸ್ಟೋರೆಂಟ್ನಲ್ಲಿ ಊಟ ಮಾಡಲು ಹೋಗಿದ್ದರು. 120 ಅಡಿ ಎತ್ತರದಲ್ಲಿ ಕುಳಿತು ಊಟ ಮಾಡಲು ಪ್ಲ್ಯಾನ್ ಮಾಡಿದ್ರು. ಆದ್ರೆ ಕೇನ್ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಿದ್ದರಿಂದ ಪ್ರವಾಸಿಗರು ಅಲ್ಲೇ ಸಿಲುಕಿದ್ದಾರೆ. ಪ್ರವಾಸಿಗರು 2 ಗಂಟೆಗಳ ಕಾಲ ಮೇಲೆ ನೇತಾಡುತ್ತಿದ್ದರು. ಬಳಿಕ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿ ಪ್ರವಾಸಿಗರನ್ನ ರಕ್ಷಣೆ ಮಾಡಿದ್ದಾರೆ.
ಮಧ್ಯಾಹ್ನ 1.30 ರ ಸುಮಾರಿಗೆ ಪ್ರವಾಸಿಗರು ಮೇಲೆ ಸಿಲುಕಿಕೊಂಡಿದ್ದರು. ಇವರ ರಕ್ಷಣೆ ಮಾಡುವಾಗ ಸಂಜೆಯೇ ಆಗಿತ್ತು. ರೆಸ್ಟೋರೆಂಟ್ ಆಡಳಿತಾಧಿಕಾರಿಳ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ. ಪ್ರವಾಸಿಗರನ್ನ ರಕ್ಷಿಸಲು ಮುನ್ನಾರ್ ಮತ್ತು ಅಡಿಮಾಲಿಯ ಘಟಕಗಳನ್ನು ಕಳುಹಿಸಲಾಯಿತು ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಡಿರಿ

