ಡಿಕೆಶಿ ಇನ್ನಷ್ಟು ಕಾಯಬೇಕು – ಹೈಕಮಾಂಡ್ ತಿರ್ಮಾನಿಸುವುದು ಯಾವಾಗ?
ಕ್ರಾಂತಿಗೆ ಬ್ರೇಕ್ ಹಾಕಿದ್ರಾ ಸಿದ್ದು?

ಕಾಂಗ್ರೆಸ್ನಲ್ಲಿ ನಡೆಯುತ್ತಿದ್ದ ಕುರ್ಚಿ ಕಾದಾಟಕ್ಕೆ ಎರಡೇ ಎರಡು ಇಡ್ಲಿ ತೆರೆ ಎಳೆದಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡೆಸಿದ ಬ್ರೇಕ್ ಫಾಸ್ಟ್ ಮೀಟಿಂಗ್ ಸಿಎಂ ಕುರ್ಚಿ ಕಾದಾಟಕ್ಕೆ ಬ್ರೇಕ್ ಹಾಕಿದೆ.. ನಾವು ಒಗ್ಗಟಾಗಿ ಇದ್ದೇವೆ. ನಮ್ಮಲ್ಲಿ ಬಣ ರಾಜಕೀಯ ಇಲ್ಲ. ಹೈಕಮಾಂಡ್ ಹಾಕಿದ ಗೆರೆಯನ್ನ ನಾವು ದಾಟಲ್ಲ ಅನ್ನೋ ಸಂದೇಶವನ್ನ ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಹಾಗಿದ್ರೆ ಸಿಎಂ ಆಗುವ ಆತರದಲ್ಲಿರೋ ಡಿಕೆಶಿ ಇನ್ನೆಷ್ಟು ಸಮಯ ಕಾಯಬೇಕು? ಡಿಕೆಶಿಗೆ ಸಿದ್ದರಾಮಯ್ಯ ಕುರ್ಚಿ ಬಿಡಬೇಕು ಅನ್ನೋದ್ದನ್ನ ಹೈಕಮಾಂಡ್ ತಿರ್ಮಾನಿಸುವುದು ಯಾವಾಗ? ಕಾಂಗ್ರೆಸ್ನಲ್ಲಿ ನಡೆಯುತ್ತಿದ್ದ ಕ್ರಾಂತಿಗೆ ಸಿದ್ದರಾಮಯ್ಯ ಬ್ರೇಕ್ ಹಾಕಿದ್ರಾ ಅನ್ನೋದ್ದನ್ನ ನೋಡೋಣ..
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಾದಾಟ ಬಹುತೇಕ ಅಂತಿಮ ಘಟ್ವವನ್ನ ತಲುಪಿದೆ. ಇಡ್ಲಿಯಲ್ಲೇ ಹೈಕಮಾಂಡ್ ಡೀಲ್ ಮುಗಿಸಿದಂತೆ ಕಾಣ್ತಿದೆ. ನವೆಂಬರ್ ಕ್ರಾಂತಿ ಆಗುತ್ತೆ, ಡಿಕೆಶಿನೇ ಸಿಎಂ ಆಗ್ತಾರೆ ಅನ್ನೋ ಚರ್ಚೆ ಸಾಕಷ್ಟು ದಿನಗಳಿಂದ ನಡೆಯುತ್ತಿತ್ತು. ಆದ್ರೆ ಯಾವ ಕ್ರಾಂತಿ ಕೂಡ ಇಲ್ಲ, ಸದ್ಯಕ್ಕೆ ಹೇಗ್ ಇದೇ ಹಾಗೇ ಕಂಟಿನ್ಯೂ ಆಗುತ್ತೆ ಅನ್ನೋದ್ದನ್ನ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಹೇಳಿದ್ದಾರೆ. ಇಟ್ರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಸಿಎಂ ಬದಲಾವಣೆ ಚರ್ಚೆಯನ್ನ ಹೈಕಮಾಂಡ್ ಡಿಲ್ಲಿ ತನಕ ತೆಗೆದುಕೊಂಡು ಬರದೇ ಬೆಂಗಳೂರಿನಲ್ಲೇ ಮುಗಿಸಿದೆ. ಶುಕ್ರವಾರನೇ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಫೋನ್ ಮಾಡಿ ಇಬ್ಬರು ಮಾತನಾಡಿಕೊಳ್ಳಿ ಅಂತ ಸೂಚನೆ ನೀಡಿದ್ರು. ಹೀಗಾಗಿ ಸಿದ್ದರಾಮಯ್ಯ ಡಿಕೆಶಿ ಇಡ್ಲಿ ತಿನ್ನುತ್ತಾ ಈ ಬಗ್ಗೆ ಚರ್ಚೆ ನಡೆಸಿ, ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾವು ಒಗ್ಗಟಾಗಿದ್ದೇವೆ ಅನ್ನೋದ್ದನ್ನ ಬಹಿರಂಗ ಪಡೆಸಿದ್ದಾರೆ.
ಕಳೆದ ಒಂದು ತಿಂಗಳಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದ ಸಿಎಂ, ಆ ತರ ಏನೋ ಇಲ್ಲ. ಹೈಕಮಾಂಡ್ ಏನ್ ಹೇಳುತ್ತೆ ಅದ್ದಕ್ಕೆ ನಾವು ಬದ್ಧ ಅಂತ ಹೇಳಿದ್ದಾರೆ. 2023ರ ಚುನಾವಣೆಯಲ್ಲಿ ಹೇಗೆ ಒಗ್ಗೂಡಿ ಕೆಲಸ ಮಾಡಿದೆವೋ, ಮುಂದೆಯೂ ಹಾಗೆಯೇ ಮುಂದುವರಿಯಲಿದ್ದೇವೆ. ಈ ಭೇಟಿ ಪ್ರಮುಖ ಉದ್ದೇಶ ಮುಂಬರುವ ಚುನಾವಣೆಗಳು ಮತ್ತು ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಎಂದು ನಾಯಕರು ತಿಳಿಸಿದರು. ಸ್ಥಳೀಯ ಸಂಸ್ಥೆಗಳು ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಅಂತ ಹೇಳುವ ಮೂಲಕ ಸದ್ಯಕ್ಕೆ ಸಿಎಂ ಬದಲಾವಣೆ ಆಗಲ್ಲ ಅನ್ನೋ ಮ್ಯಾಸೇಜ್ನನ್ನ ಇಬ್ಬರು ಕೊಟ್ಟಿದ್ದಾರೆ.
ಇದನ್ನ ಓದಿ: ಆಯುಷ್ ಮ್ಹಾತ್ರೆ ಆರ್ಭಟಕ್ಕೆ ರೋಹಿತ್ ಶರ್ಮಾ ದಾಖಲೆ ಪುಡಿಪಡಿ
ಸಿದ್ದರಾಮಯ್ಯ ಮತ್ತು ಡಿಕೆಶಿ ಹೀಗೆ ಹೇಳಿದ ಮೇಲೆ ಇನ್ನೂ ಎರಡೂವರೆ ವರ್ಷ ಸಿಎಂ ಬದಲಾವಣೆ ಗೊಂದಲ್ಲ ಇರಲ್ಲ ಅಂತ ಹೇಳುವುದ್ದಕ್ಕೆ ಆಗಲ್ಲ. ಈ ಗೊಂದಲ ಮುಂದಿನ ಎರಡೂವರೆ ವರ್ಷ ಕೂಡ ಇದ್ದೇ ಇರುತ್ತೆ. ಇಲ್ಲಿ ಸಿದ್ದರಾಮಯ್ಯ ಹೇಗಾದ್ರೂ ಮಾಡಿ ಮುಂದಿನ ಎರಡೂವರೆ ವರ್ಷ ಇವತ್ತು ಕಳೆದ್ರೆ ಸಾಕು ಇವತ್ತು ಕಳೆದ್ರೆ ಸಾಕು ಸಿಎಂ ಪಟ್ಟದಲ್ಲೇ ಮುಂದುವರಿದ್ರೆ, ಡಿಕೆಶಿ ನನಗೆ ಸಿಎಂ ಕುರ್ಚಿ ನಾಳೆ ಸಿಗುತ್ತೆ ನಾಳೆ ಸಿಗುತ್ತೆ ಅನ್ನೋ ಆಸೆಯಲ್ಲೇ ದಿನ ದೂಡುತ್ತಿದ್ದಾರೆ. ಇಲ್ಲಿ ಇಬ್ಬರ ಮಧ್ಯೆ ನಾ ಕೊಡೇ ನೀ ಬಿಡೇ ಅನ್ನೋ ರೀತಿಯಲ್ಲಿ ನಡೆಯುತ್ತಿದೆ. ಇಲ್ಲಿ ಡಿಕೆ ಶಿವಕುಮಾರ್ಗೂ ಗೊತ್ತು.. ಸಿದ್ದರಾಮಯ್ಯನ್ನ ಅಷ್ಟು ಸುಲಭವಾಗಿ ಕುರ್ಚಿಯಿಂದ ಇಳಿಸಿಕೋಕೆ ಆಗಲ್ಲ ಅನ್ನೋದು. ಸಿದ್ದರಾಮಯ್ಯ ಮಾಸ್ ಲೀಡರ್, ಅಹಿಂದ ವರ್ಗದ ಬಲ ಇದೆ. ಜನಪ್ರಿಯತೆ ಇದೆ, ಶಾಸಕರು ಅವರ ಹಿಂದೆ ಇದ್ದಾರೆ. ಇವರನ್ನ ಅಷ್ಟು ಸುಲಭವಾಗಿ ಪಕ್ಕಕ್ಕೆ ಸರಿಸೋಕೆ ಆಗಲ್ಲ ಅನ್ನೋದು ಗೊತ್ತಿದ್ದೇ ಡಿಕೆಶಿ ಸೈಲೆಂಟ್ ಆಗಿರುವುದು ಹೈಕಮಾಂಡ್ ಮೂಲಕ ಕರ್ಚಿ ಪಡೆಯೋ ಪ್ಲ್ಯಾನ್ ಮಾಡ್ತಾ ಇರುವುದು. ಹೈಕಮಾಂಡ್ ಕೂಡ ಅಹಿಂದ ವರ್ಗವನ್ನ ಪರಿಗಣೆಗೆ ತೆಗೆದುಕೊಂಡೇ ನಿರ್ಧಾರ ತೆಗೆದುಕೊಳ್ಳುವುದು. ಹೈಕಮಾಂಡ್ 2028 ರ ಎಲೆಕ್ಷನ್ ದೃಷ್ಟಿಯಿಂದ ಸಿದ್ದರಾಮಯ್ಯನೇ ಎರಡೂವರೆ ವರ್ಷ ಕಂಟಿನ್ಯೂ ಆಗಲಿ ಅಂದ್ರೆ ಡಿಕೆಶಿ ಏನೂ ಮಾಡೋಕೆ ಆಗಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರಬೇಕು.. ಯಾವಾಗ ಇದ್ದಕ್ಕೆಲ್ಲಾ ಕ್ಲಾರಿಟಿ ಸಿಗುತ್ತೆ ಅಂದ್ರೆ ಸಂಪುಟ ಪುನರ್ರಚನೆ ಆಗುತ್ತಾ ವಿಸ್ತರಣೆ ಆಗುತ್ತಾ ಅನ್ನುವಾಗ. ಪುನರ್ ರಚನೆ ಅಂತ ಬಂದ್ರೆ ಮತ್ತೆ ಸಿಎಂ ಬದಲಾವಣೆ ಮುನ್ನಲೆಗೆ ಬರುತ್ತೆ. ಮತ್ತೆ ಡಿಕೆಶಿ ಸಿಎಂ ಆಗಬೇಕು ಅನ್ನೋ ಕುಗೂ ಕೇಳಿ ಬರುತ್ತೆ. ಸಂಪುಟ ವಿಸ್ತಾರಣೆ ಅಂತ ಬಂದ್ರೆ ಸಿಎಂ ಬದಲಾವಣೆ ಆಗಲ್ಲ, ಸಿದ್ದರಾಮಯ್ಯ ಕುರ್ಚಿ ಸೇಫ್ ಅಂತ. ಸದ್ಯಕ್ಕೆ ಇಬ್ಬರು ಸೇರಿ ಹೈ ಕಮಾಂಡ್ ಕೇಳಿದ್ದಕ್ಕೆ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಇದು ಪುಲಿಸ್ಟಾಪ್ ಅಲ್ಲ ಕಾಮ ಅಷ್ಟೇ. ಇಬ್ಬರು ಕೂಡ ನಾಯಕತ್ವದ ಮೆಚೂರಿಟಿ ತೋರಿಸಿದ್ದಾರೆ. ಸಿದ್ದರಾಮಯ್ಯಗೆ ನಾಯಕತ್ವದ ವಿಚಾರದಲ್ಲಿ, ಡಿಕೆಶಿ ಪಕ್ಷ ನಿಷ್ಟೆಯ ವಿಚಾರದಲ್ಲಿ ಮೆಚೂರಿಟಿ ತೋರಿಸಿದ್ದಾರೆ. ಈ ಮೂಲಕ ನಾವು ನಾವಿಬ್ರೂ ಒಬ್ಬರ ಮುಖ ಒಬ್ಬರು ನೋಡದ ರೀತಿಯಲ್ಲಿ ಇಲ್ಲ. ಒಟ್ಟಿಗೆ ಇದ್ದೇವೆ ಅನ್ನೋದ್ದನ್ನ ತೋರಿಸಿದ್ದಾರೆ. ನಾವು ಎಷ್ಟು ಕೋಸ್ಲ್ ಅಂದ್ರೆ ತಿಂಡಿ ತಿನ್ನುತ್ತಲೇ ಸಮಸ್ಯೆ ಬಗೆ ಹರಿಸಿಕೊಳ್ಳುವಷ್ಟು ಕ್ಲೋಸ್ ಅನ್ನೋದ್ದನ್ನ ಡಿಕೆಶಿ ಮತ್ತು ಸಿದ್ದರಾಮ್ಯಯ ತೋರಿಸಿದ್ದಾರೆ. ಈ ಹಿಂದೆ ಸದನಂದಗೌಡ್ರಿಗೆ ಬಿಎಸ್ವೈ ಕುರ್ಚಿ ಬಿಡಬೇಕಾದ್ರೆ ಒಬ್ಬರ ಮುಖ ಒಬ್ಬರು ನೋಡದ ಸ್ಥಿತಿಯಲ್ಲಿ ಇರಲಿಲ್ಲ. ಆದ್ರೆ ನಾವು ಆ ತರ ಇಲ್ಲ ನಾವು ಚೆನ್ನಾಗಿ ಇದ್ದೇವೆ,ನಮ್ಮ ಜೊತೆ ವಿಶ್ವಾಸವಿದೆ. ಬದಲಾವಣೆ ಆಗಬೇಕಾದ್ರೆ ಒಪ್ಪಿಕೊಳ್ಳುತ್ತೇವೆ ಅಂದಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಹೇಳಿ ಸಿಎಂ ಕುರ್ಚಿ ಕಾದಟಕ್ಕೆ ತೆರೆ ಎಳೆದಿದ್ದಾರೆ.

ನೋಡಿರಿ

