ಫಸ್ಟ್ ಮ್ಯಾಚಲ್ಲೇ RCB Vs MI – 8 ಪಂದ್ಯ.. ಎಷ್ಟು ಗೆದ್ರೆ ಪ್ಲೇಆಫ್?
2026ಕ್ಕೆ 2ನೇ ಟ್ರೋಫಿ ಗೆಲ್ತಾರಾ?

ಒಂದ್ಕಡೆ ಸೌತ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮ್ಯಾಚ್ಗಳು.. ಮತ್ತೊಂದ್ಕಡೆ ಐಪಿಎಲ್ಗೆ ಭರ್ಜರಿ ಸಿದ್ಧತೆಗಳು.. ಇತ್ತೀಚೆಗಷ್ಟೇ ವುಮೆನ್ಸ್ ಪ್ರೀಮಿಯರ್ ಲೀಗ್ 2026ಕ್ಕಾಗಿ ಮೆಗಾ ಆಕ್ಷನ್ ನಡೆದಿತ್ತು. ಐದೂ ತಂಡಗಳು ಆಟಗಾರ್ತಿಯರನ್ನ ಖರೀದಿಸಿ ನೆಕ್ಸ್ಟ್ ಸೀಸನ್ಗೆ ಭರ್ಜರಿಯಾಗೇ ರೆಡಿಯಾಗಿದ್ದಾರೆ. ಇದೀಗ ನಾಲ್ಕನೇ ಆವೃತ್ತಿಯ ಡಬ್ಲ್ಯೂಪಿಎಲ್ಗೆ ಶೆಡ್ಯೂಲ್ ಅನೌನ್ಸ್ ಆಗಿದೆ. ಫಸ್ಟ್ ಮ್ಯಾಚಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಖಾಡಕ್ಕಿಳಿಯಲಿದೆ.
ಇದನ್ನೂ ಓದಿ : WPL ಹರಾಜಿನ ನಂತ್ರ ಯಾವ ಆಟಗಾರರು ಯಾವೆಲ್ಲಾ ತಂಡದಲ್ಲಿದ್ದಾರೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ
ಮೂರು ಆವೃತ್ತಿಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿರೋ ವುಮೆನ್ಸ್ ಪ್ರೀಮಿಯರ್ ಲೀಗ್ ವರ್ಷದಿಂದ ವರ್ಷಕ್ಕೆ ಕ್ರೇಜ್ ಹೆಚ್ಚಿಸಿಕೊಳ್ತಿದೆ. 2023ರಿಂದ ಆರಂಭವಾದ ಈ ಲೀಗ್ನಲ್ಲಿ ಒಟ್ಟಾರೆಯಾಗಿ 5 ತಂಡಗಳು ಕಣಕ್ಕಿಳಿಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್, ಗುಜರಾತ್ ಜೇಂಟ್ಸ್ ಹಾಗೇ ದೆಹಲಿ ಕ್ಯಾಪಿಟಲ್ಸ್ ತಂಡಗಳು ಭಾಗಿಯಾಗ್ತಿವೆ. 2023 ಹಾಗೇ 2025ರಲ್ಲಿ ಮುಂಬೈ ತಂಡ ಚಾಂಪಿಯನ್ ಆಗಿದ್ರೆ 2024ರ ಬೆಂಗಳೂರು ಟೀಂ ಟ್ರೋಫಿಗೆ ಮುತ್ತಿಕ್ಕಿತ್ತು. ಌಂಡ್ ಮೂರೂ ಆವೃತ್ತಿಗಳಲ್ಲೂ ಡೆಲ್ಲಿ ತಂಡವೇ ರನ್ನರ್ಅಪ್ ಆಗಿದೆ. ಇದೀಗ ನಾಲ್ಕನೇ ಸೀಸನ್ಗೆ ಎಲ್ಲಾ ತಂಡಗಳು ಫಾರ್ಮ್ ಆಗಿದ್ದು 2026ರ ಜನವರಿ 29ರಂದು ಟೂರ್ನಿಗೆ ಚಾಲನೆ ಸಿಗಲಿದೆ.
ಉದ್ಘಾಟನಾ ಪಂದ್ಯದಲ್ಲೇ ಮುಂಬೈ ವಿರುದ್ಧ ಆರ್ ಸಿಬಿ ಫೈಟ್!
ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಟ್ಟು 16 ಆಟಗಾರ್ತಿಯರಿದ್ದಾರೆ. ಲೀಗ್ ಆರಂಭವಾದ ಎರಡನೇ ವರ್ಷದಲ್ಲೇ ಚಾಂಪಿಯನ್ ಪಟ್ಟಕ್ಕೇರಿದ್ದು ಇದೀಗ ಎರಡನೇ ಬಾರಿ ಟ್ರೋಫಿಗೆ ಮುತ್ತಿಡೋಕೆ ರೆಡಿಯಾಗ್ತಿದ್ದಾರೆ. 2026ರ ಜನವರಿ 9 ರಿಂದ ಪ್ರಾರಂಭವಾಗುವ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉದ್ಘಾಟನಾ ಪಂದ್ಯದಲ್ಲೇ ಅಖಾಡಕ್ಕಿಳೀತಾರೆ. ಇನ್ನು ಟೂರ್ನಿಯನ್ನ ಎರಡು ಭಾಗಗಳಾಗಿ ಡಿವೈಡ್ ಮಾಡಿದ್ದಾರೆ. ಅಂದ್ರೆ ಟೂರ್ನಿಯ ಮೊದಲಾರ್ಧದ ಪಂದ್ಯಗಳನ್ನ ನವಿ ಮುಂಬೈನಲ್ಲಿ ಆಯೋಜಿಸಲಿದ್ದು, ಎರಡನೇ ಭಾಗವನ್ನು ವಡೋದರಾದಲ್ಲಿ ಆಡಿಸಲಾಗುತ್ತೆ. ಮೊದಲ ಪಂದ್ಯ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಶನಿವಾರ ಹಾಗೇ ಭಾನುವಾರ ಡಬಲ್ ಡೆಕ್ಕರ್ ಪಂದ್ಯಗಳು ಅಂದ್ರೆ ಎರಡೆರಡು ಪಂದ್ಯಗಳು ನಡೆಯುತ್ವೆ.
ಆರ್ ಸಿಬಿ ಪಂದ್ಯಗಳು!
ಎದುರಾಳಿ ದಿನಾಂಕ ಸ್ಥಳ
ಮುಂಬೈ ಇಂಡಿಯನ್ಸ್ ಜ.9 ನವಿ ಮುಂಬೈ
ಯುಪಿ ವಾರಿಯರ್ಸ್ ಜ.12 ನವಿ ಮುಂಬೈ
ಗುಜರಾತ್ ಜೈಂಟ್ಸ್ ಜ.16 ನವಿ ಮುಂಬೈ
ದೆಹಲಿ ಕ್ಯಾಪಿಟಲ್ಸ್ ಜ.17 ನವಿ ಮುಂಬೈ
ಗುಜರಾತ್ ಜೈಂಟ್ಸ್ ಜ.19 ವಡೋದರಾ
ದೆಹಲಿ ಕ್ಯಾಪಿಟಲ್ಸ್ ಜ.24 ವಡೋದರಾ
ಮುಂಬೈ ಇಂಡಿಯನ್ಸ್ ಜ.26 ವಡೋದರಾ
ಯುಪಿ ವಾರಿಯರ್ಸ್ ಜ.29 ವಡೋದರಾ
ಲೀಗ್ ಹಂತದಲ್ಲಿ 5 ತಂಡಗಳು ಕೂಡ ತಲಾ ಎಂಟು ಪಂದ್ಯಗಳನ್ನ ಆಡುತ್ವೆ. 6 ಪಂದ್ಯಗಳನ್ನ ಗೆದ್ದವ್ರು ಪ್ಲೇಆಫ್ಗೆ ಸೆಲೆಕ್ಟ್ ಆಗ್ತಾರೆ. 5 ಕ್ಕಿಂತ ಕಡಿಮೆ ಗೆದ್ದ ತಂಡಗಳು ನೆಟ್ರನ್ರೇಟ್ ಹಾಗೇ ಬೇರೆ ಪಂದ್ಯಗಳ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಇನ್ನು ಈ ಬಾರಿಯ ಟೂರ್ನಿಯನ್ನ ಕೇವಲ 2 ಮೈದಾನದಲ್ಲಿ ನಡೆಸಲಾಗುತ್ತೆ. 28 ದಿನಗಳ ಪಂದ್ಯಾವಳಿಯು ನವಿ ಮುಂಬೈ ಮತ್ತು ವಡೋದರಾದಲ್ಲಿ ಮಾತ್ರ ನಡೆಯಲಿದೆ. ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಮಣಿಸಿ ಭಾರತ ಏಕದಿನ ವಿಶ್ವಕಪ್ ಗೆದ್ದ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವು ಆರಂಭಿಕ 11 ಪಂದ್ಯಗಳನ್ನು ಆಯೋಜಿಸಲಿದೆ, ಇದರಲ್ಲಿ ಎರಡೂ ಡಬಲ್-ಹೆಡರ್ ಪಂದ್ಯಗಳು ಸೇರಿವೆ. ನಂತರ ಪಂದ್ಯವು ಕೊನೆಯ 11 ಪಂದ್ಯಗಳಿಗಾಗಿ ವಡೋದರಾದ ಕೋಟಂಬಿ ಕ್ರೀಡಾಂಗಣಕ್ಕೆ ಶಿಫ್ಟ್ ಆಗುತ್ತೆ. ಫೆಬ್ರವರಿ 3 ರಂದು ಎಲಿಮಿನೇಟರ್ ಮತ್ತು ಫೆಬ್ರವರಿ 5ರಂದು ಫೈನಲ್ ಮೂಲಕ ಟೂರ್ನಿಗೆ ಕೊನೆ ಬೀಳುತ್ತೆ.

ನೋಡಿರಿ

