ರೋಹಿತ್ ಜತೆ ಓಪನರ್ ಯಾರು – ನ.4ನಲ್ಲಿ KL.. ಬೌಲಿಂಗ್ ವೀಕ್?
IND Vs SA.. ಹೇಗಿದೆ ಪ್ಲೇಯಿಂಗ್ 11?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮತ್ತೊಂದು ಹೈವೋಲ್ಟೇಜ್ ಸರಣಿಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ನಾಳೆ ರಾಂಚಿಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಪಂದ್ಯವನ್ನ ಭಾರತ ಮಸ್ಟ್ & ಶುಡ್ ಗೆಲ್ಲಲೇಬೇಕಾದ ಪ್ರೆಶರ್ನಲ್ಲಿದೆ. ಹಾಗೇ ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗೋದು ಗ್ಯಾರಂಟಿ. ಅದೆಲ್ಲಕ್ಕಿಂತ ಹೆಚ್ಚಾಗಿ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋದೇ ಈಗಿರೋ ಪ್ರಶ್ನೆ.
ಇದನ್ನೂ ಓದಿ :
ನವೆಂಬರ್ 30 ಅಂದ್ರೆ ನಾಳೆ ರಾಂಚಿಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. 2025ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಿದ್ದೇ ತವರಿನಲ್ಲಿ ಕೊನೆಯ ಏಕದಿನ ಸರಣಿ ಆಗಿತ್ತು. ಇಂಗ್ಲೆಂಡ್ ಅನ್ನು ಭಾರತ ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಸೋಲಿಸಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಡಿಸಪಾಯಿಂಟ್ಸ್ ಇದ್ರೂ ವೈಟ್ ಬಾಲ್ ಸಿರೀಸ್ನಲ್ಲಿ ಭಾರತದ ಗ್ರಾಫ್ ಚೆನ್ನಾಗೇ ಇದೆ. ಬಟ್ ಲಾಸ್ಟ್ ಸಿರೀಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತ್ರೂ ಕೊನೇ ಮ್ಯಾಚಲ್ಲಿ ರೋಹಿತ್ ಶರ್ಮಾ ಹಾಗೇ ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಕೊಂಚ ಮಟ್ಟಿಗಿನ ಸಮಾಧಾನ ನೀಡಿದೆ. ಇದೀಗ ಸೌತ್ ಆಫ್ರಿಕಾ ವಿರುದ್ಧ ವೈಟ್ ವಾಶ್ ಟಾರ್ಗೆಟ್ನಲ್ಲೇ ಕಣಕ್ಕಿಳೀಬೇಕಾಗುತ್ತೆ. ಅಲ್ದೇ ಈ ಸರಣಿ ತುಂಬಾನೇ ವಿಶೇಷವಾಗಿದೆ.
ಫೆಬ್ರವರಿ ಬಳಿಕ ಭಾರತದ ಪರ ತವರಿನಲ್ಲಿ ರೋ-ಕೊ ಆಟ!
ಟಿ-20ಐ ಹಾಗೇ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿರೋ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರಸ್ತುತ ಭಾರತದ ಪರ ಏಕದಿನ ಪಂದ್ಯಗಳನ್ನ ಮಾತ್ರ ಆಡ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಕಳೆದ ಫೆಬ್ರವರಿ ಬಳಿಕ ತವರಿನಲ್ಲಿ ಇದೇ ಮೊದಲ ಬಾರಿಗೆ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ಅಲ್ದೇ ರೋಹಿತ್ ಆಸೀಸ್ ಸಿರೀಸ್ನಲ್ಲಿ 3 ಪಂದ್ಯಗಳಿಂದ 202 ರನ್ ಗಳಿಸಿ ಭಾರತದ ಪರ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ರು. ಇದೇ ಪರ್ಫಾಮೆನ್ಸ್ ಮೂಲಕ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ತಲುಪಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನೇನು ಕರಿಯರ್ ಎಂಡ್ ಅಂತಿದ್ದವ್ರಿಗೆ ನಂಬರ್ 1 ಸ್ಥಾನದ ಮೂಲಕ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ರು. ಇನ್ನು ವಿರಾಟ್ ಕೊಹ್ಲಿ ಆಸೀಸ್ ವಿರುದ್ಧ ಮೊದಲ 2 ಪಂದ್ಯಗಳಲ್ಲಿ ಡಕ್ ಔಟ್ ಆದ್ರೂ ಕೊನೇ ಪಂದ್ಯದಲ್ಲಿ ಅಜೇಯ 74 ರನ್ ಗಳಿಸಿ ಮಿಂಚಿದ್ರು. ಇಬ್ಬರ ಪಾರ್ಟ್ನರ್ಶಿಪ್ನಲ್ಲಿ 150+ ರನ್ಸ್ ಬಂದಿತ್ತು. ಅದೇ ಫಾರ್ಮ್ನಲ್ಲಿ ಮೈದಾನಕ್ಕಿಳಿಯೋಕೆ ರೆಡಿಯಾಗಿದ್ದಾರೆ.
ರೋಹಿತ್ ಜೊತೆ ಓಪನರ್ ಯಾರು?
ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಜೊತೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸ್ತಿದ್ರು. ಬಟ್ ಇಂಜುರಿ ಕಾರಣದಿಂದ ತಂಡದಿಂದ ಹೊರ ಬಿದ್ದಿರೋದ್ರಿಂದ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸೋರು ಯಾರು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಸದ್ಯಕ್ಕೆ ಈ ಗೊಂದಲಕ್ಕೆ ಕೇಳಿ ಬರ್ತಿರೋ ಹೆಸರು ಯಶಸ್ವಿ ಜೈಸ್ವಾಲ್. ಟಿ-20ಐ ಪಂದ್ಯಗಳಲ್ಲಿ ಆಡಿ ಟೆಸ್ಟ್ ಕ್ರಿಕೆಟ್ನಲ್ಲಿ ಕಂಟಿನ್ಯುಯಸ್ ಆಗಿ ಸೆಲೆಕ್ಟ್ ಆಗ್ತಿದ್ರೂ ಏಕದಿನ ಮಾದರಿಯಲ್ಲಿ ಮಾತ್ರ ಅವಕಾಶ ಸಿಗ್ತಿಲ್ಲ. ಹಾಗಂತ ಫಾರ್ಮ್ ಸಮಸ್ಯೆ ಇಲ್ಲ ಆಪ್ಶನ್ಸ್ ಜಾಸ್ತಿ ಇರೋದ್ರಿಂದ. ಇದುವೆರೆಗ 52 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ರೂ ಕೂಡ ಕೇವಲ ಒಂದು ಏಕದಿನ ಪಂದ್ಯ ಮಾತ್ರ ಆಡಿದ್ದಾರೆ. ಬಟ್ ಲಿಸ್ಟ್-ಎ ದಾಖಲೆ ತೆಗೆದ್ರೆ ಜೈಸ್ವಾಲ್ ಅದ್ಭುತ ಆಟಗಾರನೇ. 33 ಪಂದ್ಯಗಳಲ್ಲಿ 52.62 ಸರಾಸರಿಯಲ್ಲಿ 1,526 ರನ್ ಗಳಿಸಿದ್ದಾರೆ. ರೋಹಿತ್ ಜೊತೆ ಲೆಫ್ಟ್-ರೈಟ್ ಕಾಂಬಿನೇಷನ್ ನೋಡಿದ್ರೆ ಜೈಸ್ವಾಲ್ ಆಡೋದು ಪಕ್ಕಾ ಇದೆ.
ರುತುರಾಜ್ ಗಾಯಕ್ವಾಡ್ ಗೆ ಸಿಗುತ್ತಾ ಆಡುವ ಅವಕಾಶ?
ಇನ್ನು ಏಕದಿನ ತಂಡಕ್ಕೆ ಸೆಲೆಕ್ಟ್ ಆಗಿರೋ ರುತುರಾಜ್ ಗಾಯಕ್ವಾಡ್ ಕೂಡ ಒಳ್ಳೇ ಫಾರ್ಮ್ನಲ್ಲಿದ್ದಾರೆ. ಇದುವರೆಗೆ 89 ಲಿಸ್ಟ್-ಎ ಪಂದ್ಯಗಳಲ್ಲಿ 57.39 ಸರಾಸರಿಯಲ್ಲಿ 4,534 ರನ್ ಗಳಿಸಿರುವುದರಿಂದ ಅವ್ರನ್ನ ಹೊರಗಿಡೋದು ಕಷ್ಟನೇ. ಇತ್ತೀಚೆಗೆ ದಕ್ಷಿಣ ಆಫ್ರಿಕಾ-ಎ ವಿರುದ್ಧ ಭಾರತ-ಎ ಪರ ಮೂರು ಪಂದ್ಯಗಳಲ್ಲಿ 210 ರನ್ ಗಳಿಸಿದ್ದರಿಂದಲೇ ಅವ್ರನ್ನ ಅಧಿಕೃತ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಹಾಗೇ 2023ರ ಬಳಿಕ ಭಾರತದ ಪರ ಏಕದಿನ ತಂಡಕ್ಕೆ ಆಯ್ಕೆ ಆಗಿರೋದನ್ನ ಹೇಳಲೇಬೇಕು.
ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಆಡ್ತಾರಾ ರಾಹುಲ್?
ಇನ್ನು ಶ್ರೇಯಸ್ ಅಯ್ಯರ್ ಕೂಡ ಇಂಜುರಿಯಿಂದಾಗಿ ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ನಂಬರ್ 4ನಲ್ಲಿ ಯಾರು ಆಡ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ. ಬಹುಶಃ ಈ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಆಡ್ಬೋದು. ಯಾಕಂದ್ರೆ ಕೆಎಲ್ ಕ್ಯಾಪ್ಟನ್ ಆಗಿರೋದ್ರಿಂದ ಫಿಲ್ ಇನ್ ದಿ ಬ್ಲಾಂಕ್ಸ್ ಥರ ಬಳಸಿಕೊಳ್ಳೋಕೆ ಆಗಲ್ಲ. ಸೋ 2 ಡೌನ್ ಬ್ಯಾಟರ್ ಆಗಿ ಕಣಕ್ಕಿಳಿಯಬಹುದು. ಅಂದ್ರೆ ರೋಹಿತ್ & ಜೈಸ್ವಾಲ್ ಓಪನರ್ಸ್ ಆಗಿ ಕೊಹ್ಲಿ ನಂಬರ್ 3 ಹಾಗೇ ನಂಬರ್ 4ನಲ್ಲಿ ರಾಹುಲ್ ಬರ್ಬೋದು. ಸೋ ಆ ಬಳಿಕ ಐದನೇ ಸ್ಲಾಟ್ಗೆ ಯಾರನ್ನ ಆಡಿಸ್ತಾರೆ ಅನ್ನೋ ಗೊಂದಲ ಶುರುವಾಗುತ್ತೆ.
ರಿಷಭ್ Vs ಗಾಯಕ್ವಾಡ್ Vs ತಿಲಕ್ ವರ್ಮಾ ರೇಸ್!
ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಹಾಗೇ ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ನಡುವೆ ರೇಸ್ ಇದೆ. ಬಹುಶಃ ಕ್ಯಾಪ್ಟನ್ ಗಿಲ್ರನ್ನ ಕಂಪ್ಲೀಟ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಸಿ ವಿಕೆಟ್ ಕೀಪಿಂಗ್ನ ರಿಷಭ್ ಪಂತ್ ಬಳಿ ಮಾಡಿಸೋ ಆಪ್ಶನ್ ಕೂಡ ಇದೆ. ಉಳಿದಂತೆ ರುತುರಾಜ್ ಪ್ಲೇಯಿಂಗ್ 11 ಆಡೋಕೆ ಬೆಸ್ಟ್ ಅನ್ಸುತ್ತೆ. ಆಲ್ರೆಡಿ ಎ ತಂಡವ ವಿರುದ್ಧ ಆಡಿರೋದ್ರಿಂದ ಒಳ್ಳೆ ಫಾರ್ಮ್ನಲ್ಲಿ ಇದ್ದಾರೆ. ಇನ್ನು ಆಲ್ರೌಂಡರ್ಸ್ಗೆ ಬಿಸಿಸಿಐ ಹೆಚ್ಚಿನ ಒತ್ತು ಕೊಡೋದ್ರಿಂದ ವಾಷಿಂಗ್ಟನ್ ಸುಂದರ್ ಸೆಲೆಕ್ಟ್ ಆಗ್ಬೋದು. ನಿತೀಶ್ ಕುಮಾರ್ ರೆಡ್ಡಿ ಕೂಡ ರೇಸ್ನಲ್ಲಿದ್ದಾರೆ. ಜಡ್ಡು ಕೂಡ ಏಕದಿನ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದು ಮೈದಾನಕ್ಕಿಳಿಯೋ ನಿರೀಕ್ಷೆಯಲ್ಲಿದ್ದಾರೆ. ಇನ್ನು ವೇಗದ ಬೌಲರ್ ಗಳಾಗಿ ಅರ್ಶ್‌ದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣ ಸೆಲೆಕ್ಟ್ ಆಗಿದ್ದಾರೆ. ಅರ್ಶದೀಪ್ ಇದುವೆ 11 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ರಾಣಾಗೂ ಎಕ್ಸ್ಪೀರಿಯನ್ಸ್ ಕಡಿಮೆ. ಹೀಗಾಗಿ ಯಾರು ಸೆಲೆಕ್ಟ್ ಆಗ್ತಾರೆ ಅನ್ನೋ ಕುತೂಹಲವೂ ಇದೆ.
ಸಂಭಾವ್ಯ ಪ್ಲೇಯಿಂಗ್ 11
ರೋಹಿತ್ ಶರ್ಮಾ
ಯಶಸ್ವಿ ಜೈಸ್ವಾಲ್
ವಿರಾಟ್ ಕೊಹ್ಲಿ
ಕೆಎಲ್ ರಾಹುಲ್
ತಿಲಕ್ ವರ್ಮಾ / ರುತುರಾಜ್ ಗಾಯಕ್ವಾಡ್
ವಾಷಿಂಗ್ಟನ್ ಸುಂದರ್
ರವೀಂದ್ರ ಜಡೇಜಾ
ನಿತೀಶ್ ಕುಮಾರ್ ರೆಡ್ಡಿ
ಕುಲದೀಪ್ ಯಾದವ್
ಹರ್ಷಿತ್ ರಾಣಾ
ಅರ್ಶ್ದೀಪ್ ಸಿಂಗ್
ಇನ್ನು ಈ ಸರಣಿ ಹೆಡ್ ಕೋಚ್ ಗೌತಮ್ ಗಂಭೀರ್ ಗೂ ಅಗ್ನಿಪರೀಕ್ಷೆಯಾಗಿದೆ. ಅವ್ರ ಕೋಚಿಂಗ್ ಬಗ್ಗೆ ಟೀಕೆಗಳು ವ್ಯಕ್ತವಾಗ್ತಿರೋದ್ರಿಂದ ಈ ಸರಣಿಯಲ್ಲಿ ಭಾರತ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕಾಗಿದೆ.

ನೋಡಿರಿ

