ನನ್ನ – ಡಿಕೆ ನಡುವೆ ಭಿನ್ನ ಇಲ್ಲ.. ನಾವು ಒಟ್ಟಾಗಿದ್ದೇವೆ! – ಪವರ್ ಶೇರಿಂಗ್ ಫೈಟ್‌ಗೆ ತೆರೆ ಎಳೆದ ಸಿಎಂ, ಡಿಸಿಎಂ

ರಾಜ್ಯ ರಾಜಕೀಯದಲ್ಲಿ ಪವರ್ ಶೇರಿಂಗ್ ವಿಚಾರ ಭಾರಿ ಸದ್ದು ಮಾಡಿತ್ತು. ಇದೀಗ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈಗ ಎಲ್ಲಾ ಸುದ್ದಿಗಳಿಗೂ ಬ್ರೇಕ್ ಹಾಕಿದ್ದಾರೆ. ನಾವಿಬ್ಬರು ಒಂದಾಗಿದ್ದೇವೆ. ಹೈಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದ ಸಿಎಂ ಹಾಗೂ ಡಿಸಿಎಂ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ್ದಾರೆ. ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣ ಆಗಿವೆ. ನಾವಿಬ್ಬರೇ ಕೂತು ಮಾತನಾಡಿದ್ವಿ. 2028ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಮಗೆ ಬಹಳ ಮುಖ್ಯ. ಅದರ ಬಗ್ಗೆಯೂ ಚರ್ಚೆ ಮಾಡಿದ್ವಿ. 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಅನ್ನೋದ್ರೆ ಬಗ್ಗೆ ಚರ್ಚೆ ಮಾಡಿದ್ವಿ. 2023ರಲ್ಲಿ ಹೇಗೆ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ವೋ ಅದೇ ರೀತಿ ಮುಂದೆನೂ ಒಟ್ಟಿಗೆ ಕೆಲಸ ಮಾಡ್ತೀವಿ. ನನ್ನ – ಡಿಕೆ ನಡುವೆ ಭಿನ್ನ ಇಲ್ಲ. ನಾವು ಒಟ್ಟಾಗಿದ್ದೇವೆ ಎಂದು ಸಿಎಂ ಸಿದ್ಧರಾಮಯ್ಯ ಒಗ್ಗಟ್ಟಿನ ಸಂದೇಶ ಸಾರಿದರು.
ಇನ್ನು ಇದೇ ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಶುರುವಾಗಲಿದೆ. ಸುಳ್ಳು ಅಪವಾದ ಮಾಡೋದು ಬಿಜೆಪಿ-ಜೆಡಿಎಸ್ ಚಾಳಿ. ಇದನ್ನ ಬಹಳ ಸಮರ್ಥವಾಗಿ ನಾವು ಮತ್ತು ನಮ್ಮ ಸರ್ಕಾರ ಸಮರ್ಥವಾಗಿ ಎದುರಿಸುತ್ತೇವೆ. ಅದಕ್ಕೆ ಬೇಕಾದ ತಂತ್ರಗಳನ್ನೂ ರೂಪಿಸಿದ್ದೇವೆ ಎಂದು ತಿಳಿಸಿದರು.
ನಾವು 142 ಜನ ಇದ್ದೇವೆ. ಅವರು 64 ಜನ ಮಾತ್ರ ಇದ್ದಾರೆ. ಜೆಡಿಎಸ್ ಇರೋದು 18 ಜನ ಮಾತ್ರ. ಅವರಿಬ್ಬರು ಸೇರಿ ಏನೇ ಆರೋಪ ಮಾಡಿದ್ರೂ ಅದೆಲ್ಲವನ್ನ ಸಮರ್ಥವಾಗಿ ಎದುರಿಸುವ ಕೆಲಸ ಮಾಡ್ತೇವೆ. ಬಹಳ ಮುಖ್ಯಮಾಗಿ ಹೈಕಮಾಂಡ್ ಏನ್ ಹೇಳ್ತಾರೆ ಅದನ್ನ ಕೇಳೋಕೆ ತೀರ್ಮಾನ ಮಾಡಿದ್ದೇವೆ ಎಂದರಲ್ಲದೇ, ಕೇಂದ್ರದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರೋದ್ರಿಂದ ಹೈಕಮಾಂಡ್ ಇಲ್ಲಿನ ಗೊಂದಲಗಳನ್ನ ನಮಗೇ ಬಗೆಹರಿಸಲು ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರಲ್ಲ ಎಂದು ಕುರ್ಚಿ ಕದನಕ್ಕೆ ತೆರೆ ಎಳೆದರು.
ದೆಹಲಿಗೆ ಹೋಗಿದ್ದ ಕೆಲ ಶಾಸಕರು ನನ್ನ ಹತ್ರ ಬಂದು ಮಾತಾಡಿದ್ರು, ಯಾಕಾಗಿ ದೆಹಲಿಗೆ ಹೋಗಿದ್ವಿ ಅನ್ನೋದನ್ನ ಹೇಳಿದ್ರು ಎಂದು ಶಾಸಕರು, ಸಚಿವರ ದೆಹಲಿ ಪರೇಡ್‌ಗೆ ಸಮರ್ಥನೆ ನೀಡಿದರು.

ನೋಡಿರಿ

