SA ಸರಣಿ RO-KOಗೆ ಪ್ರತಿಷ್ಠೆ – 6 ಟಾಸ್ಕ್.. 2027ರ ವಿಶ್ವಕಪ್ ಫಿಕ್ಸ್?
ತವರಿನಲ್ಲೇ BCCIಗೆ ಪಾಠ ಕಲಿಸ್ತಾರಾ?

SA ಸರಣಿ RO-KOಗೆ ಪ್ರತಿಷ್ಠೆ – 6 ಟಾಸ್ಕ್.. 2027ರ ವಿಶ್ವಕಪ್ ಫಿಕ್ಸ್?ತವರಿನಲ್ಲೇ BCCIಗೆ ಪಾಠ ಕಲಿಸ್ತಾರಾ?

ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನವೆಂಬರ್ 30 ಅಂದ್ರೆ ಇದೇ ಭಾನುವಾರದಿಂದ ಏಕದಿನ ಸರಣಿ ಸ್ಟಾರ್ಟ್ ಆಗುತ್ತೆ. ಆಲ್ರೆಡಿ ಟೆಸ್ಟ್ ಸಿರೀಸ್ ಕ್ಲೀನ್ ಸ್ವೀಪ್ ಆಗಿರೋದ್ರಿಂದ ಒಡಿಐನಲ್ಲಿ ಮಸ್ಟ್ ಌಂಡ್ ಶುಡ್​ ಗೆಲ್ಲಲೇಬೇಕು. ಇಂಟ್ರೆಸ್ಟಿಂಗ್ ಅಂದ್ರೆ ಈ ಸರಣಿಯ ವಿಶೇಷವೇ ರೋಹಿತ್ ಶರ್ಮಾ ಹಾಗೇ ವಿರಾಟ್ ಕೊಹ್ಲಿ ಆಡೋದು. ಕೋಟ್ಯಂತರ ಅಭಿಮಾನಿಗಳ ರಿಯಲ್ ಇನ್ಸ್​ಪಿರೇಷನ್ ಆಗಿರೋ ರೋಕೋ ಜೋಡಿ ತವರಿನಲ್ಲಿ ಮತ್ತೆ ಮೆನ್ ಇನ್ ಬ್ಲ್ಯೂ ಜೆರ್ಸಿ ತೊಟ್ಟು ಅಖಾಡಕ್ಕೆ ಇಳೀತಾರೆ. ಹಾಗೇ ಈ ಇಬ್ಬರಿಗೂ ಈ ಸರಣಿ ಪ್ರತಿಷ್ಠೆಯಾಗಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ.

ಇದನ್ನೂ ಓದಿ : 2026ಕ್ಕೆ RCB 4+12 ಸೂತ್ರ – ಚೀಪ್ ಆದ್ರೂ ಬೆಸ್ಟ್ ಸೆಲೆಕ್ಷನ್  

ಭಾರತ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಬಳಿಕ ಮೂರು ಪಂದ್ಯಗಳ ODI ಸರಣಿ ಆಡ್ಬೇಕಿದೆ. ಸರಣಿಯ ಮೊದಲ ಪಂದ್ಯ ನವೆಂಬರ್ 30 ರಂದು ರಾಂಚಿಯ JSCA ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ಮಾಜಿ ಕ್ಯಾಪ್ಟನ್​ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡೋದೇ ವಿಶೇಷವಾಗಿದೆ.  ಆಲ್ರೆಡಿ ಇಬ್ಬರು ಆಟಗಾರರೂ ಮೈದಾನದಲ್ಲಿ ಟೀಂ ಜೊತೆ ಪ್ರಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ಉಭಯ ಆಟಗಾರರು ನೆಟ್‌ನಲ್ಲಿ ಬ್ಯಾಟಿಂಗ್‌ ನಡೆಸಿದ ದೃಶ್ಯಗಳನ್ನು ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ​​ಪೋಸ್ಟ್ ಮಾಡಿದೆ. ಇನ್ನು ಈ ಪಂದ್ಯದ ಮೂಲಕ ಇಬ್ಬರೂ ಕೂಡ ಹೊಸದೊಂದು ದಾಖಲೆ ನಿರ್ಮಿಸಲಿದ್ದಾರೆ.

ಸಚಿನ್ & ದ್ರಾವಿಡ್ ಜೊತೆಯಾಟ ಮೀರಿಸ್ತಾರೆ ರೋ-ಕೊ!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್​ಗಳಾಗಿದ್ದು ಒಂದೂವರೆ ದಶಕದಿಂದಲೂ ಒಟ್ಟೊಟ್ಟಿಗೆ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದೀಗ ಜೊತೆಯಾಟದಲ್ಲೂ ಹೊಸ ಮೈಲುಗಲ್ಲು ನೆಡೋಕೆ ರೆಡಿಯಾಗಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟಿಗೆ ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಜೋಡಿಯಾಗಲಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್  ಜೋಡಿ ಒಟ್ಟಿಗೆ 391 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಇದು ಇಲ್ಲಿಯವರೆಗಿನ ದಾಖಲೆಯಾಗಿದೆ. ಪ್ರಸ್ತುತ ರೋಹಿತ್-ಕೊಹ್ಲಿ ಜೋಡಿ ಕೂಡ 391 ಪಂದ್ಯಗಳನ್ನು ಆಡಿದೆ. ರಾಂಚಿ ಪಂದ್ಯದೊಂದಿಗೆ ಈ ದಾಖಲೆಯನ್ನ ಬ್ರೇಕ್ ಮಾಡಿ ನಂಬರ್ 1 ಸ್ಥಾನಕ್ಕೆ ತಲುಪುತ್ತಾರೆ. ರೋಕೋ ಮೈದಾನಕ್ಕೆ ಇಳೀತಾರೆ ಅಂದ್ರೆ ಯಾವ್ದೋ ಒಂದು ದಾಖಲೆ ಬ್ರೇಕ್ ಅಂತಾನೇ ಲೆಕ್ಕ ಬಿಡಿ. ಅದು ಬೇರೆ ಪ್ರಶ್ನೆ. ಆದ್ರೆ ಈ ಸರಣಿ ಓ ಜೋಡೆತ್ತುಗಳ ಪಾಲಿಗೆ ತುಂಬಾನೇ ಮುಖ್ಯವಾಗಿದೆ. ಬರೀ ತಂಡವನ್ನ ಗೆಲ್ಲಿಸೋದಷ್ಟೇ ಅಲ್ಲದೆ ತಮ್ಮ ಸಾಮರ್ಥ್ಯವನ್ನೂ ತೋರಿಸಬೇಕಿದೆ. ಅದು ಹೇಗೆ ಅನ್ನೋದನ್ನ ನೋಡ್ತಾ ಹೋಗೋಣ. ಮೊದಲನೇದಾಗಿ

ಸರಣಿ ಗೆಲ್ಲಿಸಲೇಬೇಕು ರೋ-ಕೊ!

  1. ಟೆಸ್ಟ್ ನಿವೃತ್ತಿ ಬಳಿಕ ತವರಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ
  2. ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಕ್ಲೀನ್ ಸ್ವೀಪ್ ಆದ್ಮೇಲೆ ಇಬ್ಬರ ಗುಣಗಾನ
  3. ಏಕದಿನ ಸರಣಿಯನ್ನ ಶತಾಯ ಗತಾಯ ಗೆಲ್ಲಲೇಬೇಕಾದ ಒತ್ತಡ
  4. ಕೆಎಲ್ ರಾಹುಲ್ ಕ್ಯಾಪ್ಟನ್ ಆದ್ರೂ ರೋಹಿತ್-ಕೊಹ್ಲಿ ಹೈಲೆಟ್
  5. ದಶಕಗಳ ಅನುಭವ & ಮೈದಾನದಲ್ಲಿನ ತಂತ್ರಗಾರಿಕೆ ಅಡ್ವಾಂಟೇಜ್
  6. 2027ರ ವಿಶ್ವಕಪ್ ವರೆಗೂ ಮುಂದುವರಿಯಲು ಬಿಸಿಸಿಐಗೆ ಸಂದೇಶ

ಸೋ ಈ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ನೋಡಿದ್ರೆ ಸೌತ್ ಆಫ್ರಿಕಾ ತಂಡವನ್ನ ಬಗ್ಗು ಬಡಿಯೋದು ಟೀಂ ಇಂಡಿಯಾಗೆ ಎಷ್ಟು ಮುಖ್ಯನೋ ರೋಹಿತ್ ಮತ್ತು ಕೊಹ್ಲಿ ಮೇಲೂ ಅಷ್ಟೇ ಪ್ರೆಶರ್ ಇದೆ. ಯಾಕಂದ್ರೆ ದಶಕದವರೆಗೆ ಬ್ಯಾಟರ್ಸ್ ಆಗಿ ವರ್ಷಗಟ್ಟಲೆ ಕ್ಯಾಪ್ಟನ್​ಗಳಾಗಿ ಬಿಗ್ ಈವೆಂಟ್​ಗಳಲ್ಲಿ ತಂಡವನ್ನ ಗೆಲ್ಲಿಸಿಕೊಟ್ಟಿರೋ ಈ ಜೋಡಿಗೆ ಯಾವುದೂ ಅಸಾಧ್ಯವಲ್ಲ. ಇವ್ರಿಬ್ಬರು ಜೊತೆಯಾಗಿ ನಿಂತ್ರೆ ಅದೆಂಥದ್ದೇ ತಂಡವಿದ್ರೂ ಮಣ್ಣು ಮುಕ್ಕೋದು ಪಕ್ಕಾ.

Shantha Kumari