ದೆಹಲಿಯೇ ನಮ್ಮ ದೇವಸ್ಥಾನ – ಹೈಕಮಾಂಡ್‌ ಅಂಗಳಕ್ಕೆ ಹೊರಟ ಡಿಸಿಎಂ ಡಿಕೆಶಿ

ದೆಹಲಿಯೇ ನಮ್ಮ ದೇವಸ್ಥಾನ – ಹೈಕಮಾಂಡ್‌ ಅಂಗಳಕ್ಕೆ ಹೊರಟ ಡಿಸಿಎಂ ಡಿಕೆಶಿ

ರಾಜ್ಯ ಕಾಂಗ್ರೆಸ್ ನಲ್ಲಿನ ಸಿಎಂ ಗದ್ದುಗೆ ಗುದ್ದಾಟ ಮತ್ತೊಂದು ತಿರುವು ಪಡೆದುಕೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್‌ ಸಿಎಂ ಪಟ್ಟ ಸಿಗುವವರೆಗೂ ಸುಮ್ಮನೆ ಕೂರುವಂತೆ ಕಾಣುತ್ತಿಲ್ಲ. ಇಂದು ಅಣ್ಣನ ಪರವಾಗಿ ಲಾಬಿ ನಡೆಸಲು ಡಿಕೆ ಸುರೇಶ್‌ ದೆಹಲಿಗೆ ತೆರಳಿದ್ರು. ಈ ಬೆನ್ನಲ್ಲೇ ಡಿಕೆ ಶಿವಕುಮಾರ್‌ ಕೂಡ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ಕುಸಿದು ಬಿದ್ದ ವೇದಿಕೆ – ಬಿಜೆಪಿ ಮಾಜಿ ಎಂಪಿ ಸೇರಿ ಹಲವರಿಗೆ ಗಾಯ

ಪವರ್‌ ಶೇರಿಂಗ್‌ ವಿಚಾರ ಈಗ ಹೈಕಮಾಂಡ್‌ ಅಂಗಳದಲ್ಲಿದ್ದು, ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರಯಾಣ ಬೆಳೆಸುವುದು ಸ್ಪಷ್ಟವಾಗಿದೆ. ಇಂದು ಸಂಜೆ 7 ಗಂಟೆಗೆ ಡಿಕೆಶಿ ದೆಹಲಿ ವಿಮಾನ ಹತ್ತಲಿದ್ದಾರೆ. ಇದಕ್ಕೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಪ್ತ ಶಾಸಕರ ಜೊತೆಗೆ ಮೀಟಿಂಗ್ ನಡೆಸಿದ್ದಾರೆ. ಕದಲೂರು ಉದಯ್, MLC ರವಿ, ಶಿವಗಂಗಾ ಬಸವರಾಜ್, ಶಾಂತನಗೌಡ, ಶಾಸಕ ದೇವೇಂದ್ರಪ್ಪ, ನೆಲಮಂಗಲ MLA ಶ್ರೀನಿವಾಸ್ ಜೊತೆ ಡಿಕೆಶಿ ಮೀಟಿಂಗ್‌ ಮಾಡಿದ್ದಾರೆ.

ಇನ್ನು ದೆಹಲಿಗೆ ತೆರಳುತ್ತಿರುವ ವಿಚಾರವಾಗಿ ಡಿಕೆ ಶಿವಕುಮಾರ್‌ ಮಾತನಾಡಿದ್ದಾರೆ. ಖಂಡಿತ ನಾನು ದೆಹಲಿಗೆ ಹೋಗುತ್ತೇನೆ. ದೆಹಲಿ ನಮ್ಮ ದೇವಸ್ಥಾನ. ದೆಹಲಿ ಇಲ್ಲದೆ ಇದ್ರೆ ಯಾರು ಏನು ಮಾಡೋಕೆ ಸಾಧ್ಯವಿಲ್ಲ. ಕಾಂಗ್ರೆಸ್ ಪಾರ್ಟಿಗೆ ತನ್ನದೇ ಇತಿಹಾಸವಿದೆ. ದೆಹಲಿ ಯಾವಾಗಲೂ ನಮಗೆ ಗೈಡ್ ಮಾಡುತ್ತೆ. ನಾವು ಇಲ್ಲಿ ಅಧಿಕಾರ ನಡೆಸುತ್ತಿದ್ದೇವೆ. ಕಾಂಗ್ರೆಸ್ ಪಾರ್ಟಿಯ ನಿಯಮ ಸಂವಿಧಾನದ ಪ್ರಕಾರ ನಾವು ಕೆಲಸ ಮಾಡಬೇಕು. ಪಾರ್ಟಿ ಲೀಡರ್ಸ್ ಯಾವಾಗ ದೆಹಲಿಗೆ ಕರೆಯುತ್ತಾರೆ ಆಗ ಖಂಡಿತ ದೆಹಲಿಗೆ ಹೋಗುತ್ತೇವೆ. ನಾನು ಮತ್ತು ಸಿಎಂ ದೆಹಲಿಗೆ ಹೋಗುತ್ತೇವೆ ಎಂದು ಒತ್ತಿ ಹೇಳಿದರು.

Shwetha M