ಮದುವೆ ಮನೆಯಲ್ಲಿ ಕುಸಿದು ಬಿದ್ದ ವೇದಿಕೆ – ಬಿಜೆಪಿ ಮಾಜಿ ಎಂಪಿ ಸೇರಿ ಹಲವರಿಗೆ ಗಾಯ

ಮದುವೆ ಮನೆಯಲ್ಲಿ ಕುಸಿದು ಬಿದ್ದ ವೇದಿಕೆ – ಬಿಜೆಪಿ ಮಾಜಿ ಎಂಪಿ ಸೇರಿ ಹಲವರಿಗೆ ಗಾಯ

ಮದುವೆ ಕಾರ್ಯಕ್ರಮದಲ್ಲಿ ಕೆಲವೊಮ್ಮೆ ಸಣ್ಣ ಪುಟ್ಟ ಅವಘಡ ಆಗುತ್ತವೆ. ಸಣ್ಣ ತಪ್ಪಾದ್ರೂ ಕಾರ್ಯಕ್ರಮ ಆಯೋಜನೆ ಮಾಡಿದವರಿಗೂ ಮುಜುಗರ ಉಂಟುಮಾಡುತ್ತೆ. ಇದೀಗ ಇಲ್ಲೊಂದು ಕಡೆ ಮದುವೆ ಮಂಟಪವೇ ಕುಸಿದು ಬಿದ್ದಿದೆ. ಇದ್ರಿಂದಾಗಿ ಬಿಜೆಪಿ ನಾಯಕರು ಕೂಡ ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಸಿಕ್ಕ ಸಿಕ್ಕಲ್ಲಿ ಕಸ ಹಾಕಿದ್ರೆ ಹುಷಾರ್!‌ – ನಿಮ್ಮ ಮೇಲೆ ಬೀಳುತ್ತೆ ಕ್ರಿಮಿನಲ್‌ ಕೇಸ್!‌

ಈ ಘಟನೆ ಉತ್ತರ ಪ್ರದೇಶದ ಬಿಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ನಾಯಕನ ಸಹೋದರನ ಮದುವೆಯಲ್ಲಿ ಈ ಅವಘಡ ಸಂಭವಿಸಿದೆ. ಬಿಜೆಪಿ ಮುಖಂಡ ಅಭಿಷೇಕ್ ಸಿಂಗ್ ಅವರ ಮದುವೆ ಸಮಾರಂಭ ಇತ್ತೀಚೆಗೆ ನಡೆದಿತ್ತು. ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಸ್ನೇಹಿತರು, ಬಿಜೆಪಿ ನಾಯಕರು ಕೂಡ ಆಗಮಿಸಿದ್ದರು. ಬಿಜೆಪಿ ಮಾಜಿ ಸಂಸದ ಭಾರತ್ ಸಿಂಗ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಸಿಂಗ್, ಖುದ್ದು ಅಭಿಷೇಕ್ ಸಿಂಗ್ ಎಂನೀಯರ್ ಸೇರಿದಂತೆ ಪ್ರಮುಖ ನಾಯಕರು ವೇದಿಕೆಗೆ ಆಗಮಿಸಿ ಶುಭಕೋರಿದ್ದಾರೆ. ಬಳಿಕ ಫೋಟೋ ತೆಗೆಸಿಕೊಳ್ಳಲು ವೇದಿಕೆ ಮೇಲೆ ನಿಂತಿದ್ದಾರೆ. ಈ ವೇಳೆ ಸ್ಟೇಜ್‌ ಕುಸಿದಿದೆ. ಇದ್ರ ಪರಿಣಾಮ ಹಿರಿಯ ಬಿಜೆಪಿ ನಾಯಕ ತೀವ್ರವಾಗಿ ಗಾಯಗೊಂಡಿದ್ದಾರೆ. ಇತರಿಗೆ ಸಣ್ಮ ಪುಟ್ಟ ಗಾಯಗಳಾಗಿದೆ. ತಕ್ಷಣವೇ ಕುಟುಂಬಸ್ಥರು ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ವೇದಿಕೆ ಕುಸಿದು ಬಿದ್ದ ಬಳಿಕ ಕುಟುಂಬಸ್ಥರು ಈವೆಂಟ್ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೇದಿಕೆ ಸರಿಯಾಗಿ ಮಾಡಿಲ್ಲ. ಕಾಟಾಚಾರಕ್ಕೆ ವೇದಿಕೆ ಮಾಡಲಾಗಿದೆ. ಅಪಾಯದ ಸಂದರ್ಭದ ಕುರಿತು ಆಲೋಚನೆ ಮಾಡಿಲ್ಲ. ಅನಾಹುತ ಸಂಭವಿಸಿದ್ದರೆ ಹೊಣೆ ಯಾರು? ನಷ್ಟವಾಗಿದ್ದರೆ ನಮ್ಮ ಗತಿ ಏನು ಎಂದು ಕುಟುಂಬಸ್ಥರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಾಲಾಗಿದೆ.

Shwetha M