ಕೃಷ್ಣನೂರಲ್ಲಿ ಮೋದಿ ಹವಾ! – ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ

ಕೃಷ್ಣನೂರಲ್ಲಿ ಮೋದಿ ಹವಾ! – ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಸುಮಾರು 17 ವರ್ಷಗಳ ಬಳಿಕ ಕೃಷ್ಣನೂರಿಗೆ ಆಗಮಿಸಿದ ಪ್ರಧಾನಿ ಮೋದಿ, ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: ಮೆಟ್ರೋ ಮಿಸ್‌ ಆಗುತ್ತೆ ಅಂತ ಓಡ್ತೀರಾ? – ಎಚ್ಚರ.. ನಿಮಗೆ ಕಾದಿದೆ ದೊಡ್ಡ ಅಪಾಯ!

ಇಂದು ಪ್ರಧಾನಿ ಮೋದಿ  ಉಡುಪಿ ಶ್ರೀಕೃಷ್ಣನ ಮಠಕ್ಕೆ ಆಗಮಿಸಿ, ವಿವಿಧ ಪೂಜಾ, ಕೈಂಕರ್ಯಗಳಲ್ಲಿ ಭಾಗಿಯಾಗಿ ಶ್ರೀಕೃಷ್ಣನ ಆಶೀರ್ವಾದ ಪಡೆದುಕೊಂಡರು. ಮಧ್ಯಾಹ್ನ 12 ಸುಮಾರಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆಯನ್ನು ಅನಾವರಣ ಮಾಡಿದರು ಅದಾದ ನಂತರ ಧ್ಯಾನ ಮಂದಿರ ವೀಕ್ಷಣೆಯನ್ನು ಮೋದಿ ಅವರು ಮಾಡಿದರು. ಬಳಿಕ ತೀರ್ಥಮಂಟಪ ಅನಾವರಣದಲ್ಲಿ ಪಿಎಂ ಮೋದಿ ಭಾಗಿಯಾದರು. ಬಳಿಕ ಲಕ್ಷಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ವೇಳೆ ಮಾಧ್ವ ಸಂಪ್ರದಾಯದ ತಿಲಕವನ್ನು ಇಡಲಾಯಿತು. ಪುತ್ತಿಗೆ ಶ್ರೀಗಳು ಅಂಗಾರಕ ಅಕ್ಷತೆಯನ್ನು ಇರಿಸಿದರು. ಹೋಮದ ಮಸಿಯಲ್ಲಿ ತಯಾರಿಸಿರುವ ವಿಶೇಷ ತಿಲಕವನ್ನು ಮೋದಿಗೆ ಇಟ್ಟರು.  ಬಳಿಕ ಪ್ರಧಾನಿ ಭೋಜನ ಶಾಲೆಯ ಮುಖ್ಯ ಪ್ರಾಣ ದೇವರ ದರ್ಶನ ಮಾಡಿದರು. ಮಠದೊಳಗಿನ ವಿವಿಧ ಗುಡಿಗಳ ದರ್ಶನ ಮಾಡಿದರು. ನಂತರ ಮಠದಿಂದ ಗೀತಾ ಮಂದಿರ ಮೋದಿ ತೆರಳಿದರು. ಈ ವೇಳೆ ವಿವಿಧ ವಾದ್ಯಗಳನ್ನು ಕಲಾವಿದರು ಪ್ರದರ್ಶನ ಮಾಡಿದರು. ಈ ವೇಳೆ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿ ಇದ್ದರು.

ಕನಕದಾಸರ ವಿಗ್ರಹಕ್ಕೆ ಹೂಮಾಲೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಕಿದರು. ಕನಕನ ಕಿಂಡಿಯ ಮೇಲಿರುವ ಶ್ರೀ ಕೃಷ್ಣನ ಮೂರ್ತಿಗೆ ಮೋದಿ ನಮಸ್ಕಾರ ಮಾಡಿದರು. ಬಳಿಕ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಣೆಗೆ ತಿಲಕವಿಟ್ಟು ಪ್ರಸಾದ ನೀಡಿದರು. ತೀರ್ಥದ ಜೊತೆ ತುಳಸಿ ಮಣಿಯನ್ನು ಮೋದಿ ಅವರಿಗೆ ನೀಡಲಾಯಿತು.

Shwetha M