ಮೆಟ್ರೋ ಮಿಸ್ ಆಗುತ್ತೆ ಅಂತ ಓಡ್ತೀರಾ? – ಎಚ್ಚರ.. ನಿಮಗೆ ಕಾದಿದೆ ದೊಡ್ಡ ಅಪಾಯ!

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿಯೊಂದಿದೆ. ಮೆಟ್ರೋ ಮಿಸ್ ಆಗುತ್ತೆ ಅಂತಾ ಓಡೋ ಮುನ್ನ ಎಚ್ಚರ. ನಿಮಗೆ ಕಾದಿದೆ ದೊಡ್ಡ ಅಪಾಯ ಎಂಬ ವಿಚಾರ ರಿವೀಲ್ ಆಗಿದೆ.
ಇದನ್ನೂ ಓದಿ: ಕಟ್ಟಡಲ್ಲಿ ಬೆಂಕಿ ಅವಘಡ – ಸಾವಿನ ಸಂಖ್ಯೆ 94ಕ್ಕೆ ಏರಿಕೆ.. 200ಕ್ಕೂ ಅಧಿಕ ಮಂದಿ ನಾಪತ್ತೆ!
ಅನೇಕರು ಆಫೀಸ್ಗೆ ಹೋಗುವವರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಆದ್ರೆ ಬೆಳಗ್ಗೆ ಮೆಟ್ರೋ ಮೆಸ್ ಆಗುತ್ತೆ ಅಂತ ಕೆಲವರು ತಿಂಡಿ ಬಿಡುತ್ತಿದ್ದಾರೆ. ಮೆಟ್ರೋ ಸ್ಟೇಷನ್ಗೆ ಓಡೋಡಿ ಬರುತ್ತಾರೆ. ಅಷ್ಟೇ ಅಲ್ಲ ರಶ್ ಇರೋ ಮೆಟ್ರೋದಲ್ಲೇ ನೇತಾಡ್ಕೊಂಡು ನಿದ್ದೆ ಜಾರುತ್ತಿದ್ದಾರೆ. ಇದೀಗ ಮೆಟ್ರೋ ಅಧಿಕಾರಿಗಳು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗೆ ಮಾಡಿದ್ರೆ ಅಪಾಯ ಫಿಕ್ಸ್ ಎಂದು ಹೇಳಿದ್ದಾರೆ.
ಅಚ್ಚರಿಯಾದ್ರೂ ಸತ್ಯ.. ಖಾಲಿ ಹೊಟ್ಟೆಯಲ್ಲಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ತಲೆ ತಿರುಗಿ ಬೀಳೋರ ಸಂಖ್ಯೆ 130ಕ್ಕೆ ಏರಿಕೆ ಆಗುತ್ತಿದೆ. ಅಚ್ಚರಿ ಅಂದ್ರೆ ಯುವಜನರೇ ಈ ಹೊಸ ಕಾಯಿಲೆಗೆ ತುತ್ತಾಗ್ತಿದ್ದಾರಂತೆ. ಆಗಸ್ಟ್ನಿಂದ ಅಕ್ಟೋಬರ್ 3 ತಿಂಗಳಲ್ಲಿ 130 ಜನ ತಲೆಸುತ್ತಿ ಬಿದ್ದಿದ್ದಾರೆ. 60% ಕ್ಕಿಂತ ಹೆಚ್ಚು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರೇ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ತಲೆಸುತ್ತು ತಡೆಯುವುದು ಹೇಗೆ?
ನಿದ್ರೆ ಕಡಿಮೆ ಮಾಡಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡ್ಬೇಡಿ
ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಿದ್ರೆ ದೇಹದಲ್ಲಿ ರಕ್ತದೊತ್ತಡ ಸಮಸ್ಯೆ ಎದುರಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಪ್ರಯಾಣದ ಮಾಡಿದ್ರೆ, ತಲೆ ತಿರುಗುವಿಕೆ, ಮಂದ ದೃಷ್ಟಿ, ವಾಂತಿ ಬರೋದು, ಬೆವರಲು ಆರಂಭವಾಗುತ್ತದೆ.
ಮೆಟ್ರೋದಲ್ಲಿ ಪ್ರಯಾಣಿಸುವಾಗ ಬ್ರೇಕ್ಫಾಸ್ಟ್ ಮಾಡಿ ಪ್ರಯಾಣಿಸಿ
ಬೆಳಗ್ಗೆ ಮನೆಯಿಂದ ಹೊರಡ್ತಾ, ಬಾಳೆಹಣ್ಣು, ಡ್ರೈಫೂಟ್ಸ್, ಕಾಳು ತಿನ್ನಿ
ನೀರಿನ ಬಾಟಲಿ ತರೋದು.. ಮೆಟ್ರೋ ಡೋರ್ ಬಳಿ ನಿಲ್ಲದೇ ಇರೋದು
ಉಸಿರುಗಟ್ಟಿಸುವಂತಹ ಉಡುಪಗಳನ್ನು ಆದಷ್ಟು ಧರಿಸದೇ ಇರೋದು
ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸೋ ಪ್ರಯಾಣಿಕರೇ ಆದಷ್ಟು ಆರೋಗ್ಯದ ಕಡೆ ಗಮನ ವಹಿಸಿ, ಇಂತಹ ಸಮಸ್ಯೆಯಿಂದ ದೂರ ಇರಿ.. ಆಫೀಸ್ಗೆ ಲೇಟ್ ಆಗ್ತಿದೆ, ಕಾಲೇಜಿಗೆ ಬೇಗ ಹೋಗ್ಬೇಕು ಅಂತ ರಾತ್ರಿ ಚೆನ್ನಾಗಿ ನಿದ್ದೆ ಮಾಡದೇ ಮಾರ್ನಿಂಗ್ ತಿಂಡಿ ಸ್ಕಿಪ್ ಮಾಡಿ, ಓಡೋಗಿ ಮೆಟ್ರೋ ಏರ್ತೀರಾ? ಹಾಗಿದ್ರೆ ಅಪಾಯ ನಿಮ್ಮ ಬೆನ್ನ ಹಿಂದೆನೇ ಇದೆ.

ನೋಡಿರಿ

