ಮತ್ತೊಮ್ಮೆ ಕ್ಯಾಪ್ಟನ್ ಪಟ್ಟಕ್ಕೇರಿದ ಧನುಷ್ – ರಘು, ಸೂರಜ್‌ಗೆ ರೇಸ್‌ನಲ್ಲಿ ಸೋಲು..!

ಬಿಗ್ ಬಾಸ್ ಮನೆಯಲ್ಲಿ ಧನುಷ್ ಮತ್ತೊಮ್ಮೆ ಕ್ಯಾಪ್ಟನ್ ಪಟ್ಟಕ್ಕೇರಿದ್ದಾರೆ. ಲಾಸ್ಟ್ ಟೈಮ್ ಧನುಷ್ ಕ್ಯಾಪ್ಟನ್ ಆಗಿದ್ದಾಗ ಜಾಸ್ತಿ ಹೈಲೆಟ್ ಆಗಿರಲಿಲ್ಲ. ಈ ವಾರ ಧನುಷ್ ಮನೆಮಂದಿಗೆ ಯಾವ ರೀತಿ ಕ್ಯಾಪ್ಟನ್ ಖದರ್ ತೋರುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ:ಗೆಸ್ಟ್ ಹುಚ್ಚಾಟಕ್ಕೆ ಗಿಲ್ಲಿ ಗಪ್ ಚುಪ್ – ಮಂಜು & ರಜತ್ ಬಂದಿದ್ದು ಇದಕ್ಕೇನಾ?
ಅತಿಥಿಗಳಿಂದ ಹೆಚ್ಚು ಟಿಪ್ ಪಡೆದು ಸೂರಜ್, ಧನುಷ್, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್ ಕ್ಯಾಪ್ಟನ್ಸಿ ರೇಸ್‌ಗೆ ಇಳಿದಿದ್ದರು. ಅಂತಿಮವಾಗಿ ಟಾಸ್ಕ್ ಗೆದ್ದು ಧನುಷ್ ಎರಡನೇ ಬಾರಿಗೆ ಕ್ಯಾಪ್ಟನ್ ಪಟ್ಟವನ್ನ ಅಲಂಕರಿಸಿದ್ದಾರೆ. ಈ ಗೆಲುವಿನ ಹಿಂದೆ ಕಳೆದ ಸೀಸನ್‌ನ ಟಾಸ್ಕ್ ಮಾಸ್ಟರ್ ತ್ರಿವಿಕ್ರಮ್‌ರ ಬೆಂಬಲ ಕೂಡ ಪ್ರಮುಖ ಕಾರಣವಾಗಿದೆ.
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮವಾಗಿ ಸೂರಜ್, ಧನುಷ್, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್ ಭಾಗವಹಿಸಿದ್ದರು. ಈ ಐವರು ತಮ್ಮ ಪರ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಐದು ಜನ ಗೆಸ್ಟ್‌ಗಳಿಗೆ ಮನವೊಲಿಸಬೇಕು ಎಂದು ಬಿಗ್ ಬಾಸ್ ಘೋಷಸಿದರು. ಆ ಪ್ರಕಾರ, ಐದು ಸ್ಪರ್ಧಿಗಳು ಕೂಡ ಐದು ಅತಿಥಿಗಳನ್ನ ಮನವೊಲಿಸಲು ಪ್ರಯತ್ನಿಸಿದರು. ಕೊನೆಗೆ, ಧನುಷ್ ಜೊತೆಗೆ ತ್ರಿವಿಕ್ರಮ್, ಅಭಿಷೇಕ್ ಜೊತೆಗೆ ಚೈತ್ರಾ ಕುಂದಾಪುರ, ರಘು ಜೊತೆಗೆ ಮೋಕ್ಷಿತಾ ಪೈ, ಸ್ಪಂದನಾ ಜೊತೆಗೆ ರಜತ್, ಸೂರಜ್ ಜೊತೆಗೆ ಉಗ್ರಂ ಮಂಜು ಟಾಸ್ಕ್‌ನಲ್ಲಿ ಭಾಗವಹಿಸಿದ್ದರು. ತ್ರಿವಿಕ್ರಮ್ ಮತ್ತು ಧನುಷ್ ಜೋಡಿ ಬ್ಯಾಲೆನ್ಸಿಂಗ್ ಟಾಸ್ಕ್ ಗೆಲ್ಲುವಲ್ಲಿ ಯಶಸ್ವಿಯಾಯ್ತು. ಹೀಗಾಗಿ ಧನುಷ್ ಈ ಬಾರಿ ಕ್ಯಾಪ್ಟನ್ ಆಗಿ ಆಯ್ಕೆಯಾದರು.
ಹಿಂದೆ ಒಂದು ರೀತಿ, ಮುಂದೆ ಒಂದು ರೀತಿ ಧನುಷ್ ಮಾತನಾಡುತ್ತಾರೆ ಎಂಬ ಆರೋಪವಿದೆ. ವೀಕ್ಷಕರು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಈ ಬೇಸರ ಹೊರಹಾಕಿದ್ದಾರೆ. ಯಾವಾಗಲೂ ತನ್ನದೇ ಲೋಕದಲ್ಲಿ ಮುಳುಗಿಯೇ ಇರುತ್ತಿದ್ದ ಧನುಷ್ ಈ ವಾರ ಕ್ಯಾಪ್ಟನ್ಸಿ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ.

ನೋಡಿರಿ

