ಮದುವೆ ಆಗಿ, ಇಲ್ಲಾ ಅಂದ್ರೆ ಮನೆ ಖಾಲಿ ಮಾಡಿ – ಮನೆ ಮಾಲಕರದ್ದು ಇದೆಂತ ಕಂಡೀಷನ್?  

ಮದುವೆ ಆಗಿ, ಇಲ್ಲಾ ಅಂದ್ರೆ ಮನೆ ಖಾಲಿ ಮಾಡಿ – ಮನೆ ಮಾಲಕರದ್ದು ಇದೆಂತ ಕಂಡೀಷನ್?  

ಕೊಚ್ಚಿ: ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆ ಪಡೆಯುವ ವೇಳೆ ಮನೆ ಮಾಲೀಕರು ಕೆಲವೊಂದು ಷರತ್ತುಗಳನ್ನು ವಿಧಿಸಿರುತ್ತಾರೆ. ಆ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಮನೆ ಬಾಡಿಗೆಗೆ ನೀಡಲಾಗುತ್ತದೆ. ಆದರೆ ಕೇರಳದ ಕೊಚ್ಚಿಯಲ್ಲಿ ಮನೆ ಮಾಲೀಕರ ಸಂಘವೊಂದು ವಿಚಿತ್ರ ಷರತ್ತುಗಳನ್ನು ವಿಧಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೇರಳದ ಹೀರಾ ಟ್ವಿನ್ಸ್ ಓನರ್ಸ್ ಅಸೋಸಿಯೇಷನ್ ಬಾಡಿಗೆದಾರರಿಗೆ ಕೆಲವು ನಿಯಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮದುವೆ ಆಗದವರು ಮನೆ ಖಾಲಿ ಮಾಡಬೇಕು ಎಂಬ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: ಡ್ಯಾನ್ಸ್ ಮಾಡುತ್ತಾ ಮೈಮರೆತ ವರ- ಕಾದು ಕಾದು ಬೇರೊಬ್ಬನನ್ನು ಮದುವೆಯಾದ ವಧು

ಈ ರೀತಿ ನೋಟಿಸ್ ಜಾರಿ ಮಾಡಿರುವ ಕುರಿತು, ಬಾಡಿಗೆದಾರರು ಇದನ್ನು ನೈತಿಕ ಪೊಲೀಸ್‌ಗಿರಿ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ. ಮಾತ್ರವಲ್ಲ ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಮನೆ ಮಾಲೀಕರ ಸಂಘದ ಈ ನೋಟಿಸ್ ಟ್ವೀಟ್ ಮಾಡಿ ಕೇರಳ ಮುಖ್ಯಮಂತ್ರಿ, ಸಂಸದರು ಮತ್ತು ಕೇರಳ ಪೊಲೀಸರ ಟ್ಯಾಗ್ ಮಾಡಿ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

  • ಈ ಕಟ್ಟಡ ಕುಟುಂಬಸ್ಥರಿಗೆ ಮಾತ್ರ ಸೀಮಿತವಾದ್ದರಿಂದ, ಕುಟುಂಬ ಸಹಿತ ಇರದವರು ಅಂದರೆ ಅವಿವಾಹಿತರು ಎರಡು ತಿಂಗಳ ಒಳಗೆ ಫ್ಲ್ಯಾಟ್ ತೆರವುಗೊಳಿಸಬೇಕು.
  • ಫ್ಲ್ಯಾಟ್‌ನಲ್ಲಿ ಬರೀ ಪುರುಷರು ಅಥವಾ ಮಹಿಳೆಯರಷ್ಟೇ ನೆಲೆಸಿರುವವರಿಗೆ ಈ ಸೂಚನೆಗಳು ಅನ್ವಯವಾಗುವಂತೆ ನಿಯಮಗಳನ್ನು ಮಾಡಿದ್ದು, ಅವು ಈ ಕೆಳಗಿನಂತಿವೆ.
  • ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ರಕ್ತಸಂಬಂಧಿಕರು ಬಿಟ್ಟು, ವಿರುದ್ಧ ಲಿಂಗದವರು ಮನೆಗೆ ಬರುವಂತಿಲ್ಲ. ಬಾಡಿಗೆದಾರರು ಹೊರಗಿನಿಂದ ಬಂದವರನ್ನು ಬೇಸ್ ಮೆಂಟ್‌ನಲ್ಲಿರುವ ಕಚೇರಿಯ ರಿಜಿಸ್ಟರ್ಡ್‌ನಲ್ಲಿ ಎಂಟ್ರಿ ಮಾಡಿಸಿ ಅಲ್ಲಿ ಭೇಟಿ ಮಾಡಬಹುದು.
  • ಎಲ್ಲ ಬಾಡಿಗೆದಾರರು ಅವರ ಆಧಾರ್ ಮಾಹಿತಿ ನೀಡಿರಬೇಕು ಮತ್ತು ಪಾಲಕರು ಇಲ್ಲವೇ ಪೋಷಕರ ಮೊಬೈಲ್‌ಫೋನ್ ನಂಬರ್ ಕೊಟ್ಟಿರಬೇಕು.
  • ವಾಚ್‌ಮ್ಯಾನ್ ಜತೆ ಅನವಶ್ಯಕ ತಕರಾರು-ಜಗಳ ಮಾಡಿದರೆ ಪೊಲೀಸರಿಗೆ ಮಾತ್ರವಲ್ಲದೆ ಬಾಡಿಗೆದಾರರ ಮನೆಯವರಿಗೂ ಮಾಹಿತಿ ನೀಡಲಾಗುವುದು.

suddiyaana