ಕೆಂಪು ಸುಂದರಿ ಸಖತ್‌ ಕಾಸ್ಟ್ಲಿ! – ಶತಕದ ಅಂಚಿನತ್ತ ಟೊಮ್ಯಾಟೊ ಬೆಲೆ!

ಕೆಂಪು ಸುಂದರಿ ಸಖತ್‌ ಕಾಸ್ಟ್ಲಿ! – ಶತಕದ ಅಂಚಿನತ್ತ ಟೊಮ್ಯಾಟೊ ಬೆಲೆ!

ಮೊನ್ನೆ ಮೊನ್ನೆ 10 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಏಕಾಏಕಿ ಏರಿಕೆಯಾಗಿದೆ. ಇದೀಗ ಮಾರ್ಕೆಟ್‌ನಲ್ಲಿ ಕೆಂಪು ಸುಂದರಿ ಬೆಲೆ 80 ರಿಂದ 90 ರೂಪಾಯಿ ಇದೆ. ಟೊಮ್ಯಾಟೊ ಬೆಲೆ ಏರಿಕೆಯಿಂದಾಗಿ ರೈತರು ಖುಷಿ ಆಗಿದ್ರೆ, ಗ್ರಾಹಕರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಪವರ್‌ ಶೇರಿಂಗ್‌ ಫೈಟ್!‌ – ಸಿಎಂ-ಡಿಸಿಎಂ ಎಲ್ಲರನ್ನೂ ಕರೆಸಿ ಸೆಟಲ್‌ ಮಾಡ್ತೀವಿ ಎಂದ ಖರ್ಗೆ!

ಕಳೆದ ತಿಂಗಳು 10-20 ರೂ. ಗಳಷ್ಟಿದ್ದ ಕೆ.ಜಿ ಟೊಮ್ಯಾಟೊ ಬೆಲೆ ದಿಢೀರ್‌ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಕಳೆದ 8-10 ದಿನಗಳಿಂದ ಟೊಮ್ಯಾಟೊ ದರ ಏರಿಕೆ ಆಗಿದೆ. ಇದೀಗ ರಾಜ್ಯದಲ್ಲಿ ಒಂದು ಕೆಜಿ ಟೊಮ್ಯಾಟೊಗೆ 80 ರಿಂದ 90 ರೂ. ಇದೆ. ಹಾಪ್‌ ಕಾಮ್ಸ್‌ಗಳಲ್ಲಿ ಉತ್ತಮ ದರ್ಜೆಯ ಟೊಮ್ಯಾಟೊ ಪ್ರತಿ ಕೆಜಿಗೆ 80 ರೂ. ತಲುಪಿದ್ದರೆ, ತಳ್ಳು ಗಾಡಿ ವ್ಯಾಪಾರಿಗಳು 90 ರೂ.ಗೆ ಮಾರಾಟ ಮಾಡ್ತಿದ್ದಾರೆ. ಸದ್ಯದಲ್ಲೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ.

ಅಕಾಲಿಕ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಹಲವೆಡೆ ಬೆಳೆ ರೋಗದಿಂದ ಇಳುವರಿ ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಂತೆ ಟೊಮ್ಯಾಟೊ ಪೂರೈಕೆಯಾಗುತ್ತಿಲ್ಲ. ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇಲ್ಲದಿರುವುದರಿಂದಾಗಿ ಮಾರ್ಕೆಟ್‌ಗೆ ಸರಬರಾಜಾಗುತ್ತಿದ್ದ ಟೊಮ್ಯಾಟೊ ಪ್ರಮಾಣದಲ್ಲೂ ಇಳಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ನಾಸಿಕ್ ನಿಂದ ಪೂರೈಕೆ ಆಗುತ್ತಿದ್ದ ಟೊಮ್ಯಾಟೊ ಇಳಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಆಗಿದೆ.

Shwetha M