ಸ್ಮೃತಿ ಮದುವೆ ನಿಲ್ಲಿಸಿದ ಮೇರಿ ಯಾರು? ವೈರಲ್ ಆಗೋಕೆ ಪಲಾಶ್ ಚಾಟ್ ಬಿಟ್ಲಾ?
ಮದುವೆ ಹಿಂದಿನ ರಾತ್ರಿ ಗಲಾಟೆ ಆಗಿದ್ದೇಕೆ?

ನ್ಯಾಷನಲ್ ಕ್ರಶ್ ಸ್ಮೃತಿ ಮಂಧಾನ ಅವರ ಮದುವೆ ನಿಂತು ಹೋಗಿದ್ದಕ್ಕೆ ಇಡೀ ದೇಶವೇ ಬೇಸರದಲ್ಲಿದೆ. ನಮ್ಮ ಮನೆಯ ಮಗಳ ಮದುವೆನೇ ನಿಂತು ಹೋಯ್ತಾ ಅನ್ನುವಷ್ಟು ಬೇಸರ, ದುಃಖವಿದೆ. ಅದರಲ್ಲೂ ಮದುವೆ ಹಿಂದಿನ ದಿನ ಆ ಸಂಭ್ರಮ ಸಡಗರ ಬಹಳ ಚೆನ್ನಾಗಿತ್ತು. ಸ್ಮೃತಿ ಮಂಧಾನ ಯಾವುದೇ ಕಾಂಟ್ರವರ್ಸಿ ಇಲ್ಲದೆ ಬೆಳೆದವರು.. ನೇಮ್ ಅಂಡ್ ಫೇಮ್ ಬಂದ್ರೆ ಪ್ರೀತಿಸಿದವರನ್ನ ಬಿಟ್ಟು ಹಣ ಇದ್ದವರ ಜೊತೆ ಹೋಗುವ ಈ ಕಾಲದಲ್ಲಿ ಸ್ಮೃತಿ ಪ್ರೀತಿಸಿದವನ್ನ ಮದುವೆ ಆಗೋಕೆ ಹೊರಟವರು.. ಸ್ಮೃತಿ ಓಕೆ ಅಂದ್ರೆ ಸ್ಟಾರ್ ಕ್ರಿಕೆಟರ್, ದೊಡ್ಡ ದೊಡ್ಡ ಬ್ಯುಸನೆಸ್ ಮ್ಯಾನ್ಗಳು ಮದುವೆ ಆಗೋಕೆ ರೆಡಿ ಇರ್ತಾರೆ. ಆದ್ರೆ ನೇಮ್ ಅಂಡ್ ಫೇಮ್ ಬಂದ್ರೂ ಪ್ರೀತಿಸಿದವನ್ನೇ ಮದುವೆ ಆಗೋಕೆ ಹೊರಟ ಈ ಬಂಗಾರದ ಹುಡುಗಿಗೆ ಪ್ರೀತಿಸಿದವನೇ ಮೋಸ ಮಾಡಿದ್ದು ನಿಜಕ್ಕೂ ದುರಂತ.. ಬೇಜಾರ್ ವಿಷ್ಯ ಏನಪ್ಪ ಅಂದ್ರೆ ಸ್ಮೃತಿ ಮಂಧಾನ ತಂದೆೆಗೆ ಹೃದಯಘಾತ ಆಗಿದ್ದಕ್ಕೆ ಮದುವೆ ನಿಂತಿದ್ದು ಅಲ್ಲ, ಪಲಾಶ್ ಮುಚ್ಚಲ್ ಮಾಡಿದ ಮೋಸವೇ ಕಾರಣ ಅನ್ನೋದು ರಿವೀಲ್ ಆಗಿದೆ.. ಹಾಗಿದ್ರೆ ಪಲಾಶ್ ಮೋಸ ಗೊತ್ತಾಗಿದ್ದು ಹೇಗೆ? ವಾಟ್ಸಾಪ್ ಚಾಟ್ ಸ್ಕ್ರೀನ್ ಶಾಟ್ ಶೇರ್ ಮಾಡಿ ಮದುವೆ ನಿಲ್ಲಿಸಿದ ಮೇರಿ ಡಿಕೋಸ್ಟಾ ಯಾರು? ಅನ್ನೋದ್ದನ್ನ ನೋಡೋಣ.
ಇದನ್ನೂ ಓದಿ: ಟೆಸ್ಟ್ನಲ್ಲಿ ವೈಟ್ವಾಶ್ ಮುಖಭಂಗ – ಶಾಕಿಂಗ್ ಹೇಳಿಕೆ ಕೊಟ್ಟ ಗೌತಮ್ ಗಂಭೀರ್
ಸ್ಮೃತಿ ಮಂಧಾನ ಮದುವೆ ನಿಲ್ಲೋಕೆ ಅವರ ತಂದೆಗೆ ಹೃದಯಘಾತ ಆಗಿದ್ದು ಕಾರಣ ಅಲ್ಲ ಸ್ಮೃತಿನ ಪ್ರೀತಿಸುತ್ತಿದ್ದ ಪಲಾಶ್ ಮಾಡಿದ ಮೋಸವೇ ಕಾರಣ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಇದರ ಬಗ್ಗೆ ಸ್ಮೃತಿ ಕುಟುಂಬ ಆಗಲಿ, ಪಲಾಶ್ ಕುಟುಂಬ ಆಗಲಿ ಏನೂ ಹೇಳಿಲ್ಲ. ವೈರಲ್ ಆಗಿರೋ ಸ್ಕ್ರಿನ್ ಶಾಟ್ ನೋಡಿದ್ರೆ ನಿಜ ಇರಬಹುದು ಅಸ್ಸುತ್ತೆ. ಅಂದಹಾಗೇ ಕಳೆದ ಭಾನುವಾರ ಅಂದ್ರೆ 23 ರಂದು ಸ್ಮೃತಿ ಮತ್ತು ಪಲಾಶ್ ಮದುವೆ ಫಿಕ್ಸ್ ಆಗಿತ್ತು. ಮದುವೆ ಹಿಂದಿನ ಎಲ್ಲಾ ಶಾಸ್ತ್ರ ಖುಷಿ ಖುಷಿಯಿಂದ ಆಗಿತ್ತು. ಮದುವೆ ಹಿಂದಿನ ರಾತ್ರಿ ಎಲ್ಲರು ಕುಣಿದು ಕುಪ್ಪಳಿಸಿದ್ರು. ಆ ಖುಷಿಯ ಮಧ್ಯೆ, ಸ್ಮೃತಿ ಕುಟುಂಬಕ್ಕೆ ಒಂದು ಶಾಕಿಂಗ್ ಸುದ್ದಿ ಬಂದಿತ್ತು.. ಅದು ಪಲಾಶ್ ಬಗ್ಗೆ.. ಈ ಪಲಾಶ್ ಮುಚ್ಚಲ್ ಒಂದು ಹುಡುಗಿ ಜೋತೆ ಚಾಟಿಂಗ್ ನಡೆಸಿದ್ದು ಸ್ಮೃತಿ ಕುಟುಂಬಕ್ಕೆ ಹಿಂದಿನ ದಿನ ರಾತ್ರಿ ಗೊತ್ತಾಗಿದೆ.. ಮೇರಿ ಡಿ ಕೋಸ್ಟಾ ಜೊತೆ ಪಲಾಶ್ ಜೊತೆ ನಡೆಸಿದ ವಾಟ್ಸಪ್ ಚಾಟಿಂಗ್ಗಳ ಸ್ಕ್ರೀನ್ ಶಾಟ್ಗಳನ್ನ ಮದುವೆ ಹಿಂದಿನ ದಿನ ರಾತ್ರಿ ಸ್ಮೃತಿ ಕುಟುಂಬದ ಒಬ್ಬರು ಸದಸ್ಯರಿಗೆ ಕಳುಹಿಸಿದ್ದಾರೆ. ಆ ನಂತ್ರ ಇಡೀ ಕುಟುಂಬಕ್ಕೆ ಗೊತ್ತಾಗಿದೆ. ಇಲ್ಲಿ ಪಲಾಶ್ ಕೇವಲ ಫ್ರೆಂಡ್ ಆಗಿ ಮ್ಯಾಸೇಜ್ ಮಾಡಿರಲಿಲ್ಲ.. ಬಾ ಸಿಗೋಣ.. ಒಟ್ಟಿಗೆ ಈಜೋಕೆ ಹೋಗೋಣ ಅಂತ ಹೇಳಿದ್ದಾರೆ. ಹಾಗೇ ಮೇರಿ ನೀವು ಸ್ಮೃತಿ ಅವರನ್ನ ಭೇಟಿ ಆಗಲ್ವಾ ಕೇಳಿದ್ದಕ್ಕೆ.. 4-5 ತಿಂಗಳಿಗೊಮ್ಮೆ ಭೇಟಿ ಆಗುತ್ತೇವೆ.. ನಾನು ಕಾಲ್ ಮಾಡಿದ್ದಾಗ ಸ್ಮೃತಿ ಬ್ಯುಸಿ ಇದ್ದೇನೆ ಅಂತ ಹೇಳುತ್ತಾರೆ.. ಅವಳು ದೊಡ್ಡ ತಲೆನೋವು.. ಅವಳ ಜೊತೆ ಸಂಬಂಧ ದೂರ, ಅದು ಮುಖ್ಯ ಅಲ್ಲ ಅಂತ ಹೇಳಿದ್ದಾರೆ. ಈ ಚಾಟ್ ಹೊರ ಬೀಳುತ್ತಿದ್ದಂತೆ ಸ್ಮೃತಿ ಅವರ ತಂದೆಗೆ ಶಾಕ್ ಆಗಿದೆ. ಮಗಳ ಜೀವನ ಕೆಲವೇ ಕೆಲವು ಗಂಟೆಯಲ್ಲಿ ಹಾಳಾಗಿ ಹೋಗುತ್ತೆ ಅಂತ ಬೇಜಾರ್ ಆಗಿದ್ದಾರೆ. ಆಮೇಲೆ ಅದೇ ಒತ್ತಡದಲ್ಲಿ ಅವರು ಆಸ್ಪತ್ರೆ ಸೇರಿದ್ರೆ, ಕುಟುಂಬ ಸದಸ್ಯರು ಮಾದುವೆ ಮುಂದೂಡಿದ್ದಾರೆ. ಆಮೇಲೆ ಸ್ಮೃತಿ ಸೋಷಿಯಲ್ ಮೀಡಿಯಾದಲ್ಲಿ ಮದುವೆಗೆ ಸಂಬಂಧಪಟ್ಟಂತೆ ಹಾಕಿದ್ದ ಪೋಸ್ಟ್ಗಳನ್ನ, ವಿಡಿಯೋಗಳನ್ನ ಡಿಲೀಟ್ ಮಾಡಿದ್ದಾರೆ.
ಮೇರಿ ಡಿಕೋಸ್ಟಾ ಯಾರು?
ಇನ್ನೂ ಪಲಾಸ್ ನನ್ನ ಜೊತೆ ಹೀಗೆಲ್ಲಾ ಚಾಟ್ ಮಾಡಿದ್ದಾನೆ ಅಂತ ಸ್ಕ್ರೀನ್ ಶಾಟ್ಗಳನ್ನ ಶೇರ್ ಮಾಡಿರೋ ಮೇರಿ ಡಿಕೋಸ್ಟಾ ಯಾರು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಈಕೆ ಸ್ಮೃತಿಗಿಂತ ಚೆನ್ನಾಗಿ ಇದ್ದಾಳಾ ಅಂತ ಚರ್ಚೆ ಆಗ್ತಿದೆ. ಅಸಲಿಗೆ ಈಕೆ ಕೋರಿಯಾಗ್ರಾಫರ್.. ಮದುವೆಗಳಲ್ಲಿ ಡ್ಯಾನ್ಸ್ ಮಾಡ್ತಾರೆ ಅಲ್ವಾ ಅದ್ದಕ್ಕೆ ಈಕೆ ಕೋರಿಯಾಗ್ರಾಫರ್ ಮಾಡುತ್ತಿದ್ದಾರೆ. ಲೋ ಪ್ರೊಫೈಲ್ ಹುಡುಗಿ ಈಕೆ.. ಈಕೆ ಜೊತೆ ಈಗ ಪಲಾಶ್ ಚಾಟ್ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಕೇವಲ್ ಚಾಟ್ ಮಾಡಿದ್ದಕ್ಕೆ ಮದುವೆ ಮುರಿದು ಹೋಗಿದೆ ಎನ್ನಲಾಗ್ತಿದೆ. ಇವರ ನಡುವೆ ಯಾವುದೇ ಸಂಬಂಧ ಇಲ್ಲ.. ಒಬ್ಬರನ್ನ ಒಬ್ಬರೂ ನೋಡಿಲ್ಲ.. ಪಲಾಶ್ ಮುಚ್ಚಲ್ ಮಾಡಿರೋ ಫ್ಲರ್ಟ್ ಮ್ಯಾಸೇಜ್ಗಳನ್ನ ಇಟ್ಕೊಂಡ್ ಈ ಮೇರಿ ಡಿಕೋಸ್ಟಾ ಮದುವೆ ನಿಲ್ಲಿಸಿದ್ದಾಳೆ. ಇದು ನಿಜವಾಗಿಯೂ ಪಲಾಶ್ ಮಾಡಿರೋ ಮ್ಯಾಸೇಜ್ಗಳಾ ಅಥವಾ ಯಾರಾದ್ರೂ ಬೇಕು ಅಂತ ಇದ್ದನ್ನ ಕ್ರಿಯೇಟ್ ಮಾಡಿದ್ದಾರಾ ಅನ್ನೋದ್ದಕ್ಕೆ ಇನ್ನೂ ಕ್ಲಾರಿಯಿ ಸಿಕ್ಕಿಲ್ಲ. ಇದು ಮೇರಿ ಕೋಸ್ಟಾ ವೈರಲ್ ಆಗಬೇಕು ಅನ್ನೋ ಕಾರಣಕ್ಕೆ ಮಾಡಿದ್ರೂ ಮಾಡಿರಬಹುದು. ಒಂದು ವೇಳೆ ಪಲಾಶ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ರೆ ಇವರಿಬ್ಬರು ಜೊತೆಗೆ ಇರೋ ಪೋಟೋಗಳು ಕೂಡ ವೈರಲ್ ಆಗ್ತಾ ಇತ್ತು. ಏನ್ ಅಂತಾನೇ ಅರ್ಥ ಆಗ್ತಿಲ್ಲ. ಯಾಕೆ ಮದುವೆ ನಿಲ್ಲಿಸಿದ್ದಾರೆ? ಯಾವಾಗಾ ಮದುವೆ ಆಗ್ತಾರೆ? ಪಲಾಶ್ಗೆ ಬೇರೆ ಹುಡುಗಿ ಜೊತೆ ಸಂಬಂಧ ಇದ್ಯಾ ಅನ್ನೋ ಬಗ್ಗೆ ಸ್ಮೃತಿ ಕುಟಂಬ ಆಗಲಿ ಪಲಾಶ್ ಕುಟುಂಬ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನೋಡಿರಿ

