ಈತನಿಗೆ ಹೆಂಡ್ತಿ ಕಂಡ್ರೆ ಭಯ! – ಬೈಕ್ ಹಿಂದೆ ಬರೆದ ಸಾಲು ನೋಡಿದ್ರೆ ಶಾಕ್ ಆಗ್ತೀರಾ!

ಮದುವೆ ಆದ್ಮೇಲೆ ಹೆಂಡ್ತಿ ಹೇಳಿದ ಹಾಗೆ ಕೇಳ್ಬೇಕು. ಆಕೆ ಮಾತು ಕೇಳಿಲ್ಲ ಅಂದ್ರೆ ಕತೆ ಮುಗಿತು ಅಂತಾನೇ ಲೆಕ್ಕ. ಇನ್ನು ಗಂಡ ಬೇರೆ ಹುಡುಗಿಯನ್ನ ಬೈಕ್‌ನಲ್ಲಿ ಕೂರಿಸಿದ್ರೆ ಕೆಲವರಂತೂ ದೊಡ್ಡ ರಾದ್ಧಾಂತ ಮಾಡಿಬಿಡುತ್ತಾರೆ. ಇದೀಗ ಇಲ್ಲೊಬ್ಬನಿಗೂ ಹೆಂಡ್ತಿ ಭಯ ಶುರುವಾಗಿದೆ ಅನ್ನಿಸುತ್ತೆ. ಇದೀಗ ಈತ ಹುಡುಗಿಯರಿಗೆ ಕ್ಷಮೆ ಕೇಳಿದ್ದಾನೆ.
ಇದನ್ನೂ ಓದಿ: ಕುರ್ಚಿ ಕದನ ಬೆನ್ನಲ್ಲೇ ದೇವರ ಮೊರೆ ಹೋದ ಡಿಸಿಎಂ – ಡಿಕೆಶಿ ನಿವಾಸಕ್ಕೆ ಹಂದನ ಕೆರೆ ಅಜ್ಜಯ್ಯನ ಗದ್ದುಗೆ ಆಗಮನ!
ಈ ಗಂಡು ಮಕ್ಕಳು ಯಾರಿಗೆ ಹೆದರಿಲ್ಲ ಅಂದ್ರು ತಮ್ಮ ತಮ್ಮ ಹೆಂಡ್ತಿಯರಿಗೆ ಭಯ ಪಡುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ವೈರಲ್ ಆದ ವಿಡಿಯೋ.. ಇಲ್ಲೊಬ್ಬ ವ್ಯಕ್ತಿ ಹುಡುಗಿಯರಿಗೆ ಕ್ಷಮೆ ಕೇಳಿದ್ದಾನೆ, ತನ್ನ ಸ್ಕೂಟರ್ ಹಿಂಬದಿಯಲ್ಲಿ ತನ್ನ ಹೆಂಡ್ತಿ ಸಿಕ್ಕಾಪಟ್ಟೆ ಸ್ಟ್ರಿಕ್ಟು ಎಂದು ಬರೆಸಿದ್ದಾನೆ. ಇದ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ರೇನೋಲ್ಡ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸ್ಕೂಟಿಯಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದಾನೆ. ಸ್ಕೂಟರ್ ಹಿಂಬದಿಯಲ್ಲಿ ಗರ್ಲ್ಸ್ ಕ್ಷಮಿಸಿ, ನನ್ನ ಹೆಂಡ್ತಿ ಸಿಕ್ಕಾಪಟ್ಟೆ ಸ್ಟ್ರಿಕ್ಟು ಎಂದು ಬರೆಸಿದ್ದಾನೆ. ವಾಹನ ಸವಾರನೊಬ್ಬ ಈ ಸ್ಕೂಟರ್ ಹಿಂಭಾಗದಲ್ಲಿ ಬರೆಯಲಾದ ಸಾಲುಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಮೂವತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸೂಪರ್ ಲೈನ್ ಎಂದರೆ, ಇನ್ನೊಬ್ಬರು ಇಂತಹ ಹುಡುಗನೇ ನಮಗೆ ಬೇಕಾಗಿರೋದು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ನಿಮ್ಮ ಪರಿಸ್ಥಿತಿ ನನಗೆ ಅರ್ಥ ಆಗುತ್ತದೆ ಎಂದು ತಮಾಷೆ ಮಾಡಿದ್ದಾರೆ.

ನೋಡಿರಿ

