ದುಬಾರಿಯಾಯ್ತು ಕೋಳಿ ಮೊಟ್ಟೆ! – ಏಕಾಏಕಿ ದರ ಏರಿಕೆಯಾಗಿದ್ದು ಯಾಕೆ?

ದುಬಾರಿಯಾಯ್ತು ಕೋಳಿ ಮೊಟ್ಟೆ! – ಏಕಾಏಕಿ ದರ ಏರಿಕೆಯಾಗಿದ್ದು ಯಾಕೆ?

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮೀನು ಮಟನ್ ಚಿಕನ್ ಗಿಂತ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ವಸ್ತು ಎಂದರೆ ಅದು ಮೊಟ್ಟೆ. ಇದೀಗ ಕೋಳಿ ಮೊಟ್ಟೆಯೂ ದುಬಾರಿಯಾಗಿದ್ದು, ಬಡವರು ದುಬಾರಿ ಮೊಟ್ಟೆ ಖರೀದಿಸಿ ತಿನ್ನುವುದು ಕಷ್ಟವಾಗಿ ಬಿಟ್ಟಿದೆ.

ಇದನ್ನೂ ಓದಿ: ನಂದಿನಿ ತುಪ್ಪ ಕಲಬೆರಕೆ ಕೇಸ್‌! – CCB ಪೊಲೀಸರಿಂದ ದಂಪತಿ ಅರೆಸ್ಟ್!

ಮೊದಲೇ ತರಕಾರಿ ಬೆಲೆ ಹೆಚ್ಚಾಗಿದ್ದು, ಇದೀಗ ಕೋಳಿ ಮೊಟ್ಟೆ ಕೂಡ ದುಬಾರಿಯಾಗಿದೆ. ಚಿಲ್ಲಿರೆ ದರದಲ್ಲಿ 1 ಮೊಟ್ಟೆಗೆ 6.50 ರೂಪಾಯಿಯಿಂದ 7 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಇದೀಗ ಮೊಟ್ಟೆ ಬೆಲೆ ಹೆಚ್ಚಳ ಮಾಡಿದ್ದು, 7.50 ರೂಪಾಯಿಂದ 8 ರೂಪಾಯಿ ಮೊಟ್ಟೆ ಮಾರಾಟ ಮಾಡಲಾಗುತ್ತಿದೆ.

ಮೊಟ್ಟೆ ಉತ್ಪಾದನೆಯಲ್ಲಿ ಶೇ,10 ರಷ್ಟು ಕಡಿಮೆಯಾಗಿರುವ ಕಾರಣ ಮತ್ತು ದುಬೈ ಏಪ್ರಿಕ ಶ್ರೀಲಂಕಾ ಹಾಗೂ ಓಮನ್ ದೇಶಗಳಿಗೆ ದಿನಕ್ಕೆ ಅಂದಾಜು 50 60 ಲಕ್ಷ ಮೊಟ್ಟೆ ರಫ್ತುಗು ತ್ತಿದೆ. ಈ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಸದ್ಯ ತರಕಾರಿ ಬೆಲೆಯೂ ಹೆಚ್ಚಳವಾಗುತ್ತಿದ್ದು, ಇದರ ನಡುವೆ ಮೊಟ್ಟೆ ಬೆಲೆಯೂ ಹೆಚ್ಚಾಗುತ್ತಿರುವುದು ಸಾಮಾನ್ಯ ಜನರ ಮೇಲೆ ತೀವ್ರ ಪ್ರಭಾವವನ್ನು ಉಂಟು ಮಾಡುತ್ತಿದೆ.

ಇನ್ನು ಕೆಲವೇ ದಿನಗಳಲ್ಲು ಹೊಸವರ್ಷ, ಕ್ರಿಸ್ಮಸ್‌ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಕೇಕ್‌ಗಳನ್ನು ಹೆಚ್ಚು ಬಳಕೆಗೆ ಬರುವ ಹಿನ್ನೆಲೆ ಮೊಟ್ಟೆ ಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗ ಬಹುದು ಎನ್ನಲಾಗಿದೆ.

ಭಾರತದಲ್ಲಿ ಒಟ್ಟು ಮೊಟ್ಟೆ ಉತ್ಪಾದನೆಯಲ್ಲಿ ತಮಿಳುನಾದಿನಿಂದ ಶೇ.20% ರಷ್ಟು ಅಂದರೆ ದಿನಕ್ಕೆ 40 ಲಕ್ಷ ಮೊಟ್ಟೆ ಪೂರೈಕೆ ಮಾಡುತ್ತಿದ್ದು, ಪ್ರತಿದನ ಎರಡೂವರೆ ಕೋಟಿ ಗೂ ಹೆಚ್ಚು ಮೊಟ್ಟೆಗಳನ್ನು ಉತ್ಪಾದಿಸುತ್ತದೆ.ಕರ್ನಾಟಕದಲ್ಲಿ ಇದರಲ್ಲಿ 3 ಕೋಟಿ ಬೇಡಿಕೆ ಇದೆ ಎನ್ನಲಾಗಿದೆ. ಆಂಧ್ರಪ್ರದೇಶ, ಕೇರಳ ಮಹಾರಾಷ್ಟ್ರಕ್ಕೆ ದಿನಾಂಪ್ರತಿ 40 ಲಕ್ಷ ರವನೆಯಗುತ್ತದೆ ಎನ್ನುತ್ತಾರೆ ಸಗಟು ಮೊಟ್ಟೆ ಪೂರೈಕೆದಾರ ರೆಡ್ಡಿ. ಇನ್ನು ಮುಂಬರುವ ತಿಂಗಳುಗಳಲ್ಲಿ ಉತ್ಪಾದನಾ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆ ಬೆಲೆಯಲ್ಲಿ ಕುಸಿತವಾಗ ಬಹುದು ಎಂದು ತಜ್ಞರು ಹೇಳಿದ್ದಾರೆ.

Shwetha M