ನಂದಿನಿ ತುಪ್ಪ ಕಲಬೆರಕೆ ಕೇಸ್! – CCB ಪೊಲೀಸರಿಂದ ದಂಪತಿ ಅರೆಸ್ಟ್!

ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನ ಪತ್ತೆಹಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಈ ಪ್ರಕರಣದ ಕಿಂಗ್ ಪಿನ್ ದಂಪತಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಆದ್ರೆ ಡಿಕೆಶಿ ಅಲ್ಲ.. ಪರಮೇಶ್ವರ್ ಸಿಎಂ ಆಗಬೇಕು! – ಕೆಎನ್ ರಾಜಣ್ಣ
ಇತ್ತೀಚೆಗೆ ಕೆಎಂಎಫ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ನಂದಿನಿ ತುಪ್ಪ ಕಲಬೆರಕೆ ಮಾಡಿ, ಜಾಲವನ್ನ ಪತ್ತೆಹಚ್ಚಿದ್ದರು. ಸಿಸಿಬಿ ಪೊಲೀಸರ ದಾಳಿ ವೇಳೆ ತುಪ್ಪ ತಯಾರಿಸುವ ದೊಡ್ಡ ಅತ್ಯಾಧುನಿಕ ಮೆಷಿನ್‌ಗಳು ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಆತನ ಮಗ ದೀಪಕ್, ಮುನಿರಾಜು ಎಂಬುವರನ್ನ ಸಿಸಿಬಿ ಬಂಧಿಸಿತ್ತು. ಅಲ್ಲದೇ ಬರೋಬ್ಬರಿ 1.50 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪವನ್ನ ಜಪ್ತಿ ಮಾಡಿತ್ತು. ಇದೀಗ ಈ ಪ್ರಕರಣದ ಕಿಂಗ್‌ಪಿನ್ ದಂಪತಿಯನ್ನ ಅರೆಸ್ಟ್ ಮಾಡಲಾಗಿದೆ. ಶಿವಕುಮಾರ್ ಹಾಗೂ ರಮ್ಯಾ ಬಂಧಿತ ಆರೋಪಿ ದಂಪತಿ.
ತಮಿಳುನಾಡಿನಲ್ಲಿ ಘಟಕ ಹೊಂದಿದ್ದ ಕಿಂಗ್ ಪಿನ್ ದಂಪತಿ ರಾಜ್ಯದಲ್ಲಿ ಕಲಬೆರಕೆ ತುಪ್ಪ ತಯಾರಿಸಿ, ಪ್ಯಾಕೆಟ್ ಹಾಗೂ ಪ್ಲ್ಯಾಸ್ಟಿಕ್ ಬಾಟಲ್‌ನಲ್ಲಿ ಸಪ್ಲೈ ಮಾಡುತ್ತಿದ್ದರು. ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್‌ಗಳಿಗೆ ನಕಲಿ ತುಪ್ಪ ಸರಬರಾಜು ಮಾಡುತ್ತಿದ್ದರು.

ನೋಡಿರಿ

