ಸರಳ, ದಕ್ಷ IAS ಅಧಿಕಾರಿ ಮಹಾಂತೇಶ್ ಬೀಳಗಿ ನೆನಪು ಮಾತ್ರ – ಪ್ರಾಮಾಣಿಕ ಅಧಿಕಾರಿಗೆ ಭಾವುಕ ನಮನ

ಸರಳ, ದಕ್ಷ IAS ಅಧಿಕಾರಿ ಮಹಾಂತೇಶ್ ಬೀಳಗಿ ನೆನಪು ಮಾತ್ರ – ಪ್ರಾಮಾಣಿಕ ಅಧಿಕಾರಿಗೆ ಭಾವುಕ ನಮನ

ಕಷ್ಟದಲ್ಲೇ ಜಳಕ ಮಾಡಿ, ಕಷ್ಟದಲ್ಲೇ ಅರಿವೆ ಹಾಕಿ, ಅದನ್ನೇ ಹಾಕಿ ಅದನ್ನೇ ಹೊದ್ದು ಕೊಂಡು  ಕಷ್ಟದಲ್ಲೂ ಪ್ರಾಮಾಣಿಕತೆಯಲ್ಲೇ ನಮ್ಮವ್ವ ನನ್ನ ಬೆಳೆಸಿದ್ದಾಳೆ. ತಾಯಿಯೇ ನನ್ನ ಮೊದಲ ಗುರು, ನನ್ನ ಬದುಕಿನ ದಾರಿ ತೋರಿಸಿದ್ದೇ ನನ್ನ ಹೆತ್ತವ್ವ. ಹೀಗೆಂದು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಅವರ ಗುರಿ ತಲುಪಲು ಸ್ಪೂರ್ತಿ ತುಂಬಿದ ಮಾತುಗಳನ್ನು ಆಡಿದವರು IAS ಅಧಿಕಾರಿ ಮಹಾಂತೇಶ್ ಬೀಳಗಿ. ದಕ್ಷ, ಪ್ರಾಮಾಣಿಕ ಅಧಿಕಾರಿ ಈಗ ನಮ್ಮೊಂದಿಗಿಲ್ಲ. ಆದರೆ, ಅವರು ವಿದ್ಯಾರ್ಥಿಗಳಿಗೆ, ತನ್ನ ಸುತ್ತಲಿನ ಜನರಿಗೆ ನೀಡಿದ ಆದರ್ಶ, ಪ್ರಾಮಾಣಿಕತೆಯ ಪಾಠ ಎಂದಿಗೂ ಜೀವಂತ.

ಇದನ್ನೂ ಓದಿ:ಮದ್ದೂರಿನಿಂದ ಸುಮಲತಾ ಅಖಾಡಕ್ಕೆ!? – BJP + JDS ನಾಯಕರು ಕ್ಷೇತ್ರ ಬಿಡ್ತಾರಾ?

ಸರಳ ಹಾಗೂ ಸಜ್ಜನಿಕೆಯ ಐಎಎಸ್​ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ಅರಗಿಸಿಕೊಳ್ಳಲು ತುಂಬಾ ಕಷ್ಟ. ಕಲಬರುಗಿಯ ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಮೃತಪಟ್ಟಿದ್ದರು. ಬೆಳಗಾವಿಯ ರಾಮದುರ್ಗಕ್ಕೆ ಮೃತದೇಹ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂತಿಮ ದರ್ಶನದ ಬಳಿಕ ಬುಧವಾರ ಮಧ್ಯಾಹ್ನ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ ನಡೆಯಲಿದೆ.

ಮಹಾಂತೇಶ್ ಬೀಳಗಿಯವರು, ಕಷ್ಟದ ದಿನಗಳಲ್ಲೇ ಉತ್ತಮ ವಿದ್ಯಾಭ್ಯಾಸ ಪಡೆದು ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಎರಡು ಹೊತ್ತು ಊಟ ಮಾಡಲು ಸಾಧ್ಯವಾಗದಷ್ಟು ಕಡು ಬಡತನದಲ್ಲಿ ಮಹಾಂತೇಶ್ ಬೆಳೆದಿದ್ದರು. ಡಿಗ್ರಿವರೆಗೂ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಓದಿದ್ದ ಮಹಾಂತೇಶ್ ಬಳಿಕ ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು.

ತಂದೆ ಮೃತಪಟ್ಟ ಬಳಿಕ ತಾಯಿ ನಾಲ್ಕು ಜನ ಮಕ್ಕಳನ್ನ ತಾಯಿ ಸಾಕಿದ್ದರು. ಬೀಳಗಿ ಅವರ ತಾಯಿ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ ಐಎಸ್, ಕೆಎಎಸ್ ಪಾಸ್ ಮಾಡಿದ್ದ ಮಹಾಂತೇಶ ಬೀಳಗಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಷ್ಟ ಪಟ್ಟು ಓದಿ ಕೆಎಎಸ್ ನಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದರು. 2012ರ ಕರ್ನಾಟಕ ಕೇಡರ್​ನ IAS ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂ ಎಂಡಿ, ದಾವಣಗೆರೆ ಡಿಸಿ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದರು. ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದ ಬೀಳಗಿ, ದಾವಣಗೆರೆ ಡಿಸಿ ಆಗಿದ್ದ ವೇಳೆ ಹಲವು ಮಹತ್ವದ ಕೆಲಸ ಕಾರ್ಯಗಳನ್ನು ಮಾಡಿದ್ದರು. ಇಷ್ಟೇ ಅಲ್ಲ ಜನರ ನೆಚ್ಚಿನ ಡಿಸಿಯಾಗಿ ಖ್ಯಾತಿ ಪಡೆದಿದ್ದರು.

Sulekha