ಫೆ.15ಕ್ಕೆ ಇಂಡೋ-ಪಾಕ್ ವಾರ್ – T-20 ವಿಶ್ವಕಪ್ ಫೈಟ್ ಗೆ ಮುಹೂರ್ತ
20 ಟೀಂ.. ಚಾಲೆಂಜ್ ಗೆಲ್ಲುತ್ತಾ ಭಾರತ?

ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ಹೈವೋಲ್ಟೇಜ್ ಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.. 2026ರ ಟಿ-20 ವಿಶ್ವಕಪ್ಗೆ ಡೇಟ್ ಅನೌನ್ಸ್ ಆಗೋ ಟೈಂ ಬಂದಿದೆ. 20 ತಂಡಗಳ ನಡುವೆ ನಡೆಯೋ ಈ ಮಹಾಕದನಕ್ಕೆ ಭಾರತ ಹಾಗೇ ಶ್ರೀಲಂಕಾ ರಾಷ್ಟ್ರಗಳು ಆತಿಥ್ಯ ವಹಿಸಲಿವೆ.
ಮಾರ್ಡ್ರೆನ್ ಕ್ರಿಕೆಟ್ನ ಮೋಸ್ಟ್ ಫೇವರೆಟ್ ಟೂರ್ನಿಯಾಗಿರೋ ಐಸಿಸಿ ಟಿ-20 ವಿಶ್ವಕಪ್ ಮಹಾಕದನಕ್ಕೆ ಶೆಡ್ಯೂಲ್ ಫೈನಲ್ ಆಗಿದೆ. 2026ರ ಫೆಬ್ರವರಿ 7 ರಿಂದ ಮೆಗಾಟೂರ್ನಿ ಆರಂಭ ಆಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಒಂದೊಂದು ತಂಡದಲ್ಲಿ ಐದು ತಂಡಗಳನ್ನು ಒಳಗೊಂಡಂತೆ 4 ಗುಂಪುಗಳಾಗಿ ಡಿವೈಡ್ ಮಾಡಲಾಗಿದೆ. ಌಂಡ್ ಗ್ರೂಪ್ 1ನಲ್ಲಿ ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿವೆ.
ಇದನ್ನೂ ಓದಿ : CMS ಸಿಬ್ಬಂದಿಗೆ 7 ಕೋಟಿ ರೂಪಾಯಿಗಿಂತ ಊಟವೇ ಮುಖ್ಯ ಆಯ್ತಾ? – ಬಗೆದಷ್ಟು ಬಯಲಾಗುತ್ತಿದೆ ದರೋಡೆ ರಹಸ್ಯ!
ಗ್ರೂಪ್ 1 ತಂಡಗಳು!
ಭಾರತ
ಪಾಕಿಸ್ತಾನ್
ಯುಎಸ್ಎ
ನಮೀಬಿಯಾ
ನೆದರ್ಲೆಂಡ್ಸ್
ಗ್ರೂಪ್ 2 ತಂಡಗಳು!
ಆಸ್ಟ್ರೇಲಿಯಾ
ಶ್ರೀಲಂಕಾ
ಝಿಂಬಾಬ್ವೆ
ಐರ್ಲೆಂಡ್
ಒಮಾನ್
ಗ್ರೂಪ್ 3 ತಂಡಗಳು!
ಇಂಗ್ಲೆಂಡ್
ವೆಸ್ಟ್ ಇಂಡೀಸ್
ಇಟಲಿ
ಬಾಂಗ್ಲಾದೇಶ
ನೇಪಾಳ
ಗ್ರೂಪ್ 4 ತಂಡಗಳು!
ಸೌತ್ ಆಫ್ರಿಕಾ
ನ್ಯೂಝಿಲೆಂಡ್
ಅಫ್ಘಾನಿಸ್ತಾನ್
ಯುಎಇ
ಕೆನಡಾ
ಸೋ 20 ತಂಡಗಳು ಒಟ್ಟು ನಾಲ್ಕು ತಂಡಗಳಾಗಿ ಫೈಟ್ ನಡೆಸುತ್ವೆ. ಗುಂಪು ಹಂತದಲ್ಲಿ ಪ್ರತೀ ತಂಡಕ್ಕೂ ನಾಲ್ಕು ಪಂದ್ಯಗಳು ಇರುತ್ತೆ. ಗ್ರೂಪ್ 1ನಲ್ಲಿರೋ ಭಾರತದ ಪಂದ್ಯಗಳ ವೇಳಾಪಟ್ಟಿ ಹೇಗಿದೆ ಅನ್ನೋದನ್ನ ನೋಡೋಣ.
ಭಾರತದ ಪಂದ್ಯಗಳು!
ಫೆಬ್ರವರಿ 7 : ಭಾರತ Vs ಯುಎಸ್ಎ- (ಮುಂಬೈ)
ಫೆಬ್ರವರಿ 12 : ಭಾರತ Vs ನಮೀಬಿಯಾ- (ದೆಹಲಿ)
ಫೆಬ್ರವರಿ 15 : ಭಾರತ Vs ಪಾಕಿಸ್ತಾನ್- (ಕೊಲಂಬೊ)
ಫೆಬ್ರವರಿ 18 : ಭಾರತ Vs ನೆದರ್ ಲೆಂಡ್ಸ್- (ಅಹಮದಾಬಾದ್)
ಗುಂಪು ಹಂತದಲ್ಲಿ ನಾಲ್ಕು ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ 4 ಗ್ರೂಪ್ಗಳ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಳಿಕ ಸೂಪರ್-8 ಹಂತದ ಮುಖಾಮುಖಿ ಶುರುವಾಗಲಿದೆ. ಸೂಪರ್-8 ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಸದ್ಯಕ್ಕೆ ಸೆಮಿಫೈನಲ್ ಪಂದ್ಯಗಳಿಗೆ ಮುಂಬೈ ಮತ್ತು ಕೊಲ್ಕತ್ತಾ ನಗರಗಳನ್ನು ಆಯ್ಕೆ ಮಾಡಲಾಗಿದೆ. ಒಂದು ವೇಳೆ ಪಾಕಿಸ್ತಾನ್ ತಂಡವು ಸೆಮಿಫೈನಲ್ಗೆ ಪ್ರವೇಶ ಪಡೆದ್ರೆ ಆ ಪಂದ್ಯವನ್ನ ಕೊಲಂಬೊದಲ್ಲಿ ಆಡಲಾಗುತ್ತೆ. ಇಲ್ದಿದ್ರೆ ಕೊಲ್ಕತ್ತಾದಲ್ಲಿ ನಡೆಸಲಾಗುತ್ತೆ. ಹಾಗೇ ಫೈನಲ್ ಪಂದ್ಯವನ್ನ ಮಾರ್ಚ್ 8ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸೋಕೆ ಪ್ಲ್ಯಾನ್ ನಡೆದಿದೆ. ಹಾಗೇನಾದ್ರೂ ಪಾಕಿಸ್ತಾನ ಫೈನಲ್ಗೆ ಬಂದ್ರೆ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಸೋ ಅಲ್ಲಿಗೆ ಫೆಬ್ರವರಿ 7 ರಿಂದ ಮಾರ್ಚ್ 8ರವರೆಗೆ ಕ್ರಿಕೆಟ್ ಅಭಿಮಾನಿಗಳು ಫುಲ್ ಮೀಲ್ಸ್ ಪಕ್ಕಾ. ಇನ್ನು ಈ ಟೂರ್ನಿಗೆ ಹಾಲಿ ಚಾಂಪಿಯನ್ ಆಗಿ ಕಾಲಿಡ್ತಿರೋ ಭಾರತ ಟ್ರೋಫಿ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಎನಿಸಿಕೊಳ್ತಿದೆ. ಬಟ್ ಕೆಲವೊಂದು ಚಾಲೆಂಜ್ಗಳನ್ನ ಮೆಟ್ಟಿ ನಿಲ್ಬೇಕಿದೆ.
ಟೀಂ ಇಂಡಿಯಾ ಮುಂದಿರೋ ಸವಾಲು!
- 2024ರ ಬಳಿಕ ನೋ ಲಾಸ್ ಜರ್ನಿ ಜತೆ ಟ್ರೋಫಿ
- ಬ್ಯಾಟಿಂಗ್ ನಲ್ಲಿ ಅಭಿಷೇಕ್ ಮೇಲೆಯೇ ಡಿಪೆಂಡ್
- ಸೂರ್ಯ ಮತ್ತು ಗಿಲ್ ಫಾರ್ಮ್ ಗೆ ಕಮ್ ಬ್ಯಾಕ್
- ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸ್ಲಾಟ್ ಫಿಕ್ಸ್
- ವೇಗದ ಬೌಲಿಂಗ್ ನಲ್ಲಿ ಅನುಭವದ ಮೇಲೆ ಆಯ್ಕೆ
ಸದ್ಯಕ್ಕೆ ಭಾರತ ಟಿ-20ಐನಲ್ಲಿ ಬೆಸ್ಟ್ ರೆಕಾರ್ಡ್ಸ್ ಇದೆ. ವಿಶ್ವದ ನಂಬರ್ 1 ಟೀಂ ಎನಿಸಿಕೊಳ್ತಿದೆ. ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ 34 ಪಂದ್ಯಗಳನ್ನ ಆಡಿದ್ದು 25 ರಲ್ಲಿ ಗೆಲುವು ಸಾಧಿಸಿದ್ದಾರೆ. 5 ಪಂದ್ಯಗಳನ್ನ ಸೋತಿದ್ದಾರೆ. ಹಾಗೇ 4 ಪಂದ್ಯಗಳು ರಿಸಲ್ಟ್ ಬಂದಿಲ್ಲ. ಸದ್ಯ ಭಾರತದ ಪರ ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ ಹಾಗೇ ರೋಹಿತ್ ಶರ್ಮಾ ಮಾತ್ರವೇ ಐಸಿಸಿ ಮೆನ್ಸ್ ಟ್ರೋಫಿಯನ್ನ ಲಿಫ್ಟ್ ಮಾಡಿರೋದು, ಸೋ ಟಿ-20 ವಿಶ್ವಕಪ್ ಗೆದ್ದು ಮತ್ತೊಂದು ಟ್ರೋಫಿ ಎತ್ತಿ ಹಿಡಿಯೋ ನಾಯಕನಾಗೋಕೆ ಸೂರ್ಯನಿಗೆ ಒಂದೊಳ್ಳೆ ಅವಕಾಶ ಇದೆ. 9 ಆವೃತ್ತಿಗಳ ಟಿ-20 ವಿಶ್ವಕಪ್ನಲ್ಲಿ ಭಾರತ 2007ರಲ್ಲಿ ಚೊಚ್ಚಲ ವಿಶ್ವಕಪ್ ಹಾಗೇ 2024ರ ಹಾಲಿ ಚಾಂಪಿಯನ್ ಆಗಿದೆ. ಅಂದ್ರೆ 2 ಸಲ ಟ್ರೋಫಿ ಎತ್ತಿ ಹಿಡಿದಿದೆ. ಈಗ ಭಾರತಕ್ಕೆ ಮೂರನೇ ಟಿ-20ಐ ವಿಶ್ವಕಪ್ ಗೆಲ್ಲಿಸಿಕೊಡೋ ಅವಕಾಶ ಸೂರ್ಯನಿಗೆ ಸಿಕ್ಕಿದೆ.

ನೋಡಿರಿ

