ತೂಕ ಇಳಿಸಿಕೊಳ್ಳಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? – ಚಪಾತಿ ಜೊತೆ ಅನ್ನ ಸೇವಿಸಬಹುದಾ?

ತೂಕ ಇಳಿಸಿಕೊಳ್ಳಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? – ಚಪಾತಿ ಜೊತೆ ಅನ್ನ ಸೇವಿಸಬಹುದಾ?

ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ತೀರಾ ಹೆಚ್ಚಾಗಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಜಡ ಜೀವನಶೈಲಿಯೇ ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ದೇಹದಲ್ಲಿ ಬೊಜ್ಜು ಅಧಿಕವಾದರೆ, ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬೊಜ್ಜು ಕರಗಿಸಬೇಕು. ತೂಕ ಇಳಿಸಬೇಕು ಅಂತ ಅನೇಕರು ಬಯಸುತ್ತಾರೆ. ಅನೇಕರು ಆಹಾರ ಪದ್ದತಿ ಕೂಡ ಬದಲಾಯಿಸುತ್ತಾರೆ. ಕೆಲವರು ಅನ್ನದ ಬದಲು ಚಪಾತಿ ಸೇವಿಸುತ್ತಾರೆ. ಆದ್ರೆ ಚಪಾತಿ ಎಷ್ಟು ಸೇವನೆ ಮಾಡಬೇಕು ಅನ್ನೋ ಗೊಂದಲ ಅನೇಕರಲ್ಲಿದೆ.

ಇದನ್ನೂ ಓದಿ: ಸುಡು ಬಿಸಿಲಿಗೆ ನಿಮ್ಮ ಸ್ಕಿನ್‌ ಕಪ್ಪಾಗಿದ್ಯಾ? – ಈ ಟ್ರಿಕ್ಸ್‌ ಬಳಸಿ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿ!

ತೂಕ ಇಳಿಸಿಕೊಳ್ಳಬೇಕು ಎಂದು ಅನೇಕರು ಜೀವನ ಶೈಲಿಯನ್ನ ಬದಲಾಯಿಸಿಕೊಳ್ಳುತ್ತಿದ್ದಾರೆ. ತೂಕ ಇಳಿಸಿಕೊಳ್ಳಬೇಕು ಅಂದ್ರೆ ಆಹಾರದಲ್ಲಿ ಚಪಾತಿ ಮತ್ತು ಅನ್ನದ ಪ್ರಮಾಣವನ್ನ ಕಡಿಮೆ ಮಾಡಬೇಕು. ಚಪಾತಿ ಮತ್ತು ಅನ್ನ ಎರಡರಲ್ಲೂ ಸರಳ ಕಾರ್ಬೋಹೈಡ್ರೇಟ್‌ಗಳಿದ್ದು, ಇದು ಬೊಜ್ಜುತನಕ್ಕೆ ಕಾರಣವಾಗಬಹುದು. ಆಹಾರ ತಜ್ಞೆ ಸ್ವಾತಿ ಸಿಂಗ್ ಅವರ ಪ್ರಕಾರ, ತೂಕ ಇಳಿಸಿಕೊಳ್ಳಲು ನಿಮ್ಮ ದೈನಂದಿನ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳನ್ನ ಮೇಲ್ವಿಚಾರಣೆ ಮಾಡಬೇಕು.

ತೂಕ ಇಳಿಸಿಕೊಳ್ಳಲು ನೀವು ದಿನಕ್ಕೆ 1800-2000 ಕ್ಯಾಲೊರಿಗಳಷ್ಟು ಆಹಾರ ಸೇವಿಸಬೇಕು, ಈ ಪೈಕಿ 225 ರಿಂದ 325 ಕ್ಯಾಲೊರಿಗಳು ಕಾರ್ಬೋಹೈಡ್ರೇಟ್‌ಗಳಾಗಿವೆ. ಈಗ ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನ ನಿಯಂತ್ರಿಸಿ.

ಒಂದು ಚಪಾತಿ ತಿನ್ನುವುದರಿಂದ ಸರಿಸುಮಾರು 15 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಮತ್ತು 70 ಗ್ರಾಂ ಕ್ಯಾಲೋರಿಗಳು ದೊರೆಯುತ್ತವೆ. ತೂಕ ಇಳಿಸಿಕೊಳ್ಳಲು ನಿಮ್ಮ ಒಟ್ಟಾರೆ ಆಹಾರದಿಂದ 150 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನ ಕಡಿಮೆ ಮಾಡಬೇಕು.

ತೂಕ ಇಳಿಸಿಕೊಳ್ಳಲು, ಯಾವುದೇ ಒಬ್ಬ ಮಹಿಳೆ ದಿನಕ್ಕೆ 3-4 ಸಣ್ಣ ಚಪಾತಿಗಳನ್ನ ತಿನ್ನಬೇಕು. ಒಬ್ಬ ಪುರುಷ ದಿನಕ್ಕೆ 5-6 ಚಪಾತಿ ತಿನ್ನುವ ಮೂಲಕ ಸ್ವಲ್ಪ ತೂಕ ಇಳಿಸಿಕೊಳ್ಳಬಹುದು.

ನಿಮ್ಮ ಚಪಾತಿ ಸೇವನೆ ಕಡಿಮೆ ಮಾಡುವುದು ಎಂದರೆ ನೀವು ಹಸಿವಿನಿಂದ ಬಳಲುವುದು ಎಂದಲ್ಲ. ಚಪಾತಿ ಸೇವನೆ ಕಡಿಮೆ ಮಾಡುವಾಗ ನಿಮ್ಮ ಆಹಾರದಲ್ಲಿ ಹೆಚ್ಚು ಸಲಾಡ್, ತರಕಾರಿಗಳು ಮತ್ತು ದ್ರವ ಪದಾರ್ಥಗಳನ್ನ ಸೇರಿಸಬೇಕು. ಊಟದ ನಂತರ ಅರ್ಧ ಗಂಟೆ ನಡೆಯಿರಿ, ಇದು ನಿಮ್ಮ ತೂಕ ವೇಗವಾಗಿ ಕಡಿಮೆಯಾಗಲು ಸಹಾಯ ಮಾಡುತ್ತದೆ.

Shwetha M