ಮದ್ದೂರಿನಿಂದ ಸುಮಲತಾ ಅಖಾಡಕ್ಕೆ!? – BJP + JDS ನಾಯಕರು ಕ್ಷೇತ್ರ ಬಿಡ್ತಾರಾ?
ಗೌಡ್ತಿ ಎರಡು ಲೆಕ್ಕ!

ಮದ್ದೂರಿನಿಂದ ಸುಮಲತಾ ಅಖಾಡಕ್ಕೆ!? –  BJP + JDS ನಾಯಕರು ಕ್ಷೇತ್ರ ಬಿಡ್ತಾರಾ?ಗೌಡ್ತಿ ಎರಡು ಲೆಕ್ಕ!

 

ಮಂಡ್ಯ ರಾಜಕೀಯ ಅಂದ್ರೆ ಅದು ದೇಶ ಮಟ್ಟದಲ್ಲಿ ಸದ್ದು ಮಾಡುತ್ತೆ. ಸಿನಿ ನಟರ ರಾಜಕೀಯಕ್ಕೆ ಅಚ್ಚು ಮೆಚ್ಚಿನ ಕ್ಷೇತ್ರ. ಮಂಡ್ಯದ ಗಂಡು ಅಂಬರೀಶ್ , ಸುಮಲತಾ ಅಂಬರೀಶ್, ರಮ್ಯಾರನ್ನ ಈ ಜಿಲ್ಲೆ ಮನೆ ಮಕ್ಕಳಂತೆ ನೋಡಿದೆ. ಇವರು ಎಲೆಕ್ಷನ್ ನಿಂತಾಗ ವೋಟ್ ಹಾಕಿ ಗೆಲ್ಲಿಸಿದ್ದಾರೆ ಇಲ್ಲಿನ ಜನ.. ಅದರಲ್ಲೂ ಸುಮಲತಾ ವಿಷ್ಯದಲ್ಲಿ ಈ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಸುಮಲತಾ 2019ರಲ್ಲಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ  ಪಕ್ಷೇತರ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ರು, ಸಕ್ಕರೆ ನಾಡಿನ ಜನ ಸುಮಲತಾರನ್ನ ಗೆಲ್ಲಿಸಿದ್ರು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡ ಸುಮಲತಾ ಫುಲ್ ಸೈಲೆಂಟ್ ಆಗಿದ್ರು. 2024 ರ ಎಲೆಕ್ಷನ್‌ ನಲ್ಲಿ ಇವರು ಸ್ಪರ್ಧೆ ಮಾಡದೇ ಸೈಲೆಂಟ್ ಆಗಿದ್ರು. ರಾಜಕೀಯದಿಂದ ಬ್ರೇಕ್​ ತೆಗೆದುಕೊಂಡ್ರಾ ಎನ್ನುವ ಅನುಮಾನ ಕೂಡ ಅಭಿಮಾನಿಗಳಲ್ಲಿ ಮೂಡಿತ್ತು. ಆದ್ರೆ ಸಮಲತಾ ಎಲ್ಲದ್ದಕ್ಕೂ ಕ್ಲಾರಿಟಿ ಕೊಟ್ಟಿದ್ದು, ನಾನು ರಾಜಕೀಯದಿಂದ ಬ್ರೇಕ್ ತಗೊಂಡಿಲ್ಲ. ನಾನು ಮತ್ತು ನನ್ನ ಮಗ  ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡುತ್ತೇವೆ.  ಎಂದಿದ್ದಾರೆ. ಮದ್ದೂರು ಕ್ಷೇತ್ರ ನನ್ನ ಪ್ರಥಮ ಆಯ್ಕೆಯಾಗಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್  ಮೈತ್ರಿಯಲ್ಲ ಮದ್ದೂರು ಕ್ಷೇತ್ರದಲ್ಲಿ ನಿಲ್ಲೋಕೆ ಇವರಿಗೆ ಟಿಕೆಟ್ ಸಿಗುತ್ತಾ? ಇವರು ಬದಲು ಅಂಭಿಷೇಕ್‌ಗೆ ಟಿಕೆಟ್ ಕೊಡ್ಸುತ್ತಾರಾ? ಮದ್ದೂರಿನಲ್ಲಿರೋ ಬಿಜೆಪಿ ಮತ್ತು JDS ಲೀಡರ್ ಇವರಿಗೆ ಸಪೋರ್ಟ್ ಮಾಡ್ತಾರಾ ಅನ್ನೋದ್ದನ್ನ  ನೋಡೋಣ.

ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಡಿಕೆ ಶಿವಕುಮಾರ್ ಕಾರಣ – ಡಿಕೆಶಿ BJPಗೆ ಬಂದ್ರೆ ನಾನು ಒಪ್ಪಲ್ಲವೆಂದ ರಮೇಶ್ ಜಾರಕಿಹೊಳಿ

2019 ರಲ್ಲಿ ಲೋಕಸಭಾ ಎಲೆಕ್ಷನ್ ಗೆದ್ದಿದ್ದೇ ಗೆದಿದ್ದು.. ಸುಮಲತಾ ಅಂಬರೀಷ್ ಫುಲ್ ಸೈಲೆಂಟ್ ಆಗಿದ್ರು. ಕ್ಷೇತ್ರದಲ್ಲೂ ಅಷ್ಟಾಗಿ ಕಾಣಿಸಲ್ಲ ಅನ್ನೋ ಮಾತು ಕೇಳಿ ಬಂದಿದ್ವು.. ಅದರಲ್ಲೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂತಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಸುಮಲತಾ ಬೆನ್ನಿಗೆ ಬಿಜೆಪಿ ನಿಂತಿತ್ತು. ದರ್ಶನ್ ಹಾಗೂ ಯಶ್ ಜೋಡೆತ್ತುಗಳಂತೆ ನಿಂತು ಸುಮಲತಾರನ್ನ ಗೆಲ್ಲಿಸಿದ್ರು. ಪಕ್ಷೇತರವಾಗಿ ಗೆದ್ದ ಸುಮಲತಾ ಆಮೇಲೆ ಬಿಜೆಪಿ ಸೇರಿದ್ರು. ಆದ್ರೆ ಈಗ ಅಂಬರೀಷ್ ಪಣ್ಯ ತಿಥಿ ವೇಳೆ ಮಾತನಾಡಿದ ಸಮಲತಾ ನಾನು ರಾಜಕೀಯದಿಂದ ಬ್ರೇಕ್ ತಗೊಂಡಿಲ್ಲ.. ಮುಂದಿನ ಅಸೆಂಬ್ಲಿ ಎಲೆಕ್ಷನ್‌ಗೆ ನಿಲ್ಲುತ್ತೇನೆ ನಾನು ನಿಂತಿಲ್ಲ ಅಂದ್ರೆ ನನ್ನ ಮಗ ಅಭಿಷೇಕ್ ಆದ್ರೂ ನಿಲ್ಲುತ್ತಾರೆ ಅಂತ ಹೇಳಿದ್ದಾರೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ನಾನು ಮದ್ದೂರು ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡೋದು ಅಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುವಂತೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು.  ಮದ್ದೂರು ನನ್ನ ಪತಿ ದಿ.ಅಂಬರೀಶ್ ಅವರ ಕರ್ಮಭೂಮಿಯಾಗಿದೆ. ಹೀಗಾಗಿ ನಾನು ಅಥವಾ ಪುತ್ರ ಅಭಿಷೇಕ ಅಂಬರೀಶ್ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಂಬಿ ಅಭಿಮಾನಿಗಳ ಅಪೇಕ್ಷೆಯಾಗಿದೆ. ನಮ್ಮಿಬ್ಬರಲ್ಲಿ ಒಬ್ಬರು ಸ್ಪರ್ಧೆಗಿಳಿದರೆ ಅದು ಈ ಕ್ಷೇತ್ರದಿಂದಲೇ ಮಾತ್ರ ಎಂದಿದ್ದಾರೆ. ಆದ್ರೆ ಇಲ್ಲಿ ಸುಮಲತಾ ಅವರು ಹೇಳಿದ ತಕ್ಷಣ ಇವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ಸಿಗುವುದು ಕಷ್ಟ..  ಯಾಕಂದ್ರೆ ಈ ಹಾದಿ ಅಷ್ಟು ಸುಲಭ ಇಲ್ಲ. ಯಾಕಂದ್ರೆ 2028ರ ವಿಧಾನಸಭಾ ಎಲೆಕ್ಷನ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಸ್ಪರ್ಧೆ ಮಾಡೋದು ಖಚಿತವಾಗಿ. ಮದ್ದೂರಿನಲ್ಲಿ ಒಕ್ಕಲಿಗ ಸಮುದಾಯ ಪ್ರಭಲವಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಫೈಟ್  ಜೋರಾಗಿದೆ.. ಈಗ ಬಿಜೆಪಿ ಕೂಡ ರೇಸ್‌ನಲ್ಲಿದೆ. ಬಿಜೆಪಿಗೆ ಹೋಲಿಸಿದ್ರೆ ಜೆಡಿಎಸ್‌ ಮದ್ದೂರಿನಲ್ಲಿ ಸ್ಟ್ರಾಂಗ್ ಇದೆ. ಜೆಡಿಎಸ್ ಪಕ್ಷ ಸಂಘಟನೆಗೆ ಅಲ್ಲಿನ ನಾಯಕರು ಶ್ರಮಿಸಿದ್ದಾರೆ. ಮುಂದಿನ ಎಲೆಕ್ಷನ್‌ನಲ್ಲಿ ಜೆಡಿಎಸ್‌ಗೆ ಟಿಕೆಟ್ ಕೊಟ್ರೆ ಗೆಲ್ಲೋ ಭರವಸೆ ಇದೆ. ಹೀಗಿರುವಾಗ ಏಕಾಏಕಿ ಸುಮಲತಾ ಅಂಬರೀಷ್‌ ಬಂದು ನಾನು ಮದ್ದೂರಿನಿಂದ ನಿಲ್ಲುತ್ತೇನೆ ಅಂದ್ರೆ ಬಿಟ್ಟು ಕೊಡುವುದ್ದಕ್ಕೆ ಸಿದ್ದರಿಲ್ಲ.

2023 ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರವು ಕುತೂಹಲಕಾರಿ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಕ್ಷೇತ್ರದಲ್ಲಿ 86.1% ಮತದಾನ ದಾಖಲಾಗಿತ್ತು. ಜೆಡಿಎಸ್‌ನ ಪ್ರಭಲ ಅಭ್ಯರ್ಥಿ, ದೇವೇಗೌಡರ ಕುಟುಂಬ ಸದ್ಯರಾಗಿರೋ ಡಿಸಿ ತಮ್ಮಣ್ಣ 62.906 ಮತ ಪಡೆದಿದ್ರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಉದಯ್  87,019  ಮತ ಪಡೆದಿದ್ರು. ಇಲ್ಲಿ2013 ಗೆದಿದ್ದು ಕಾಂಗ್ರೆಸ್ ಆದ್ರೂ ಜೆಡಿಎಸ್‌ನ ತಮ್ಮಣ್ಣ ಸಖತ್ ಫೈಟ್ ಕೊಟ್ಟಿದ್ದಾರೆ. ಡಿಸಿ ತಮ್ಮಣ್ಣ 2018ರ ಎಲೆಕ್ಷನ್‌ನಲ್ಲಿ ಗೆದಿದ್ದರು, ಮದ್ದೂರು  ಕ್ಷೇತ್ರದಲ್ಲಿ ಹಗಲಿರುಳಿ ಕೆಲಸ ಮಾಡಿದ್ದಾರೆ. ಒಂದೂ ಬಾರಿ ಕೂಡ ಮದ್ದೂರಿನಲ್ಲಿ ಗೆಲ್ಲದ ಬಿಜೆಪಿ ಕಳೆದ ಭಾರಿ ಫೈಟ್ ಕೊಟ್ಟಿದೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಎಸ್‌ಪಿ ಸ್ವಾಮಿ ಸಖತ್ ಫೈಟ್ ಕೊಟ್ಟಿದ್ರು. ಗಣಪತಿ ಮೆರವಣಿಗೆ ವೇಳೆ ಆದ  ಕಲ್ಲು ತೂರಾಟದ ಘಟನೆಯಿಂದ ಬಿಜೆಪಿಗೆ ಮೈಲೇಜ್ ಸಿಕ್ಕಿದೆ. ಎಸ್‌ಪಿ ಸ್ವಾಮಿ 2028ರ ಎಲೆಕ್ಷನ್‌ಗೆ ತಯಾರಿ ಕೂಡ ನಡೆಸಿದ್ದಾರೆ. ಈಗ ಸುಮಲತಾ ಅಥವಾ ಅಭಿಷೇಕ್ ಅಂಬರೀಷ್ ನಿಂತ್ರೂ ಇಲ್ಲಿ ಮೈತ್ರಿಯ ಸೀಟ್ ಬಿಟ್ಟು ಕೊಡಬೇಕಾಗುತ್ತೆ.

ಡಿಸಿ ತಮ್ಮಣ್ಣ ಇಷ್ಟು ದಿನ ಮಾಡಿದ ಕೆಲಸವನ್ನ ತ್ಯಾಗ ಮಾಡಿ ಇವರಿಗೆ ಸೀಟ್ ಬಿಟ್ಟು ಕೊಡೋಕೆ ಚಾನ್ಸ್ ಇಲ್ಲ.. ಒಂದು ವೇಳೆ ಹೈಕಮಾಂಡ್ ಮಾತಿನಿಂದ ಬಿಟ್ಟು ಕೊಟ್ರೆ ಆ ಕ್ಷೇತ್ರದಲ್ಲಿ ಸುಮಲತಾ ಗೆಲ್ಲೋಕೆ ಜೆಡಿಎಸ್ ಅಭ್ಯರ್ಥಿ ಡಿಸಿ ತಮ್ಮಣ್ಣ ಹಾಗೂ ಬಿಜೆಪಿ ಅಭ್ಯರ್ಥಿ ಎಸ್‌ಪಿ ಸ್ವಾಮಿಯೇ ಬಿಡಲ್ಲ. ಪಕ್ಷೇತರವಾಗಿ ನಿಂತಾಗ ವೋಟ್ ಡಿವೈಡ್ ಆಗಿ, ಕಾಂಗ್ರೆಸ್‌ಗೆ ಮತ್ತೆ ಪ್ಲೆಸ್ ಆಗುತ್ತೆ.. ಈಗಾಗಲೇ ಸಮಲತಾರಿಂದ ಜೆಡಿಎಸ್‌ಗೆ ಮುಖಭಂಗ ಆಗಿದೆ. ನಿಖಿಲ್ ಕುಮಾರಸ್ವಾಮಿಯನ್ನೇ ಸೋಲಿಸಿದ್ದಾರೆ. ಹೀಗಾಗಿ ಮದ್ದೂರನ್ನ ಸುಮಲತಾಗೆ ಬಿಟ್ಟು ಕೊಡುವುದ್ದಕ್ಕೆ ಕುಮಾರಸ್ವಾಮಿ ಕೂಡ ಬಿಡಲ್ಲ. ಮೈತ್ರಿ ಸೀಟ್ ಹಂಚಿಕೆ ವೇಳೆ ಮದ್ದೂರು ನಮ್ಗೆ ಬೇಕು ಅಂತ ಕುಮಾರಸ್ವಾಮಿ ಕೇಳೇ ಕೇಳ್ತಾರೆ.  ಒಮ್ಮೆ ಬಿಟ್ಟು ಕೊಟ್ಟು ಕ್ಷೇತ್ರ ಕೈ ತಪ್ಪಿ ಹೋದ್ರೆ ಮತ್ತೆ ಸಿಗುವುದಿಲ್ಲ ಅನ್ನೋದು ಇವರಿಗೂ ಗೊತ್ತು. ಹೀಗಾಗಿ ಮದ್ದೂರಿನಲ್ಲಿ ನಿಲ್ಲಬೇಕು ಅಂತ ಇರೋ ಸುಮಲತಾ ಅವರ ಕನಸನ್ನ ಈಡೇರುವುದು ಬಹಳ ಕಷ್ಟ. ಇವರು ನಿಲ್ಲೋದಾದ್ರೆ ಬೇರೆ ಕ್ಷೇತ್ರವನ್ನ ಆಯ್ಕೆ ಮಾಡಿಕೊಳ್ಳಬೇಕು.. ಇನ್ನೂ ಅಭಿಷೇಕ್‌ ಅಂಬರೀಶ್ ನಿಂತ್ರೆ ಜನ ಹೇಗೆ ಸ್ವೀಕಾರ ಮಾಡ್ತಾರೆ ಅನ್ನೋದು ಗೊತ್ತಿಲ್ಲ.. ಅಂಬರೀಷ್‌ಗೆ ಜನ ಬೆಂಬಲ ಇತ್ತು ನೇಮ್ ಅಂಡ್ ಪೇಮ್ ಇತ್ತು ಗೆದ್ರು. ಸಮಲತಾ ಅವರು ಹೆಣ್ಣುಮಗಳು ಜೆಡಿಎಸ್‌ನ ಕೆಲ ಹೇಳಿಕೆಗಳು ಮುಳುವಾಗಿ ಗೆದ್ರು.. ಆದ್ರೆ ಅಭಿಷೇಕ್‌ ವಿಷ್ಯದಲ್ಲಿ ಇದು ಏನ್ ಆಗುತ್ತೆ ಅನ್ನೋದು ಕೂಡ ಗೊತ್ತಿಲ್ಲ. ಸಿನಿಮಾಗಳು ಕೈ ಹಿಡಿದಿಲ್ಲ. ಹೀಗಾಗಿ ರಾಜಕೀಯ ಅಭಿಷೇಕ್ ಕೈ ಹಿಡಿಯುತ್ತಾ ಅನ್ನೋದ್ದನ್ನ ಕಾದು ನೋಡಬೇಕಿದೆ. ಇ

Kishor KV