ಸ್ಮೃತಿ ಮಂದಾನಗೆ ಮೋಸ ಮಾಡಿದ್ರಾ ಪಲಾಶ್?‌  – ಮದುವೆ ದಿನವೇ ಸಿಕ್ರೇಟ್‌ ಲೀಕ್.. ಮುಂದೇನು ಕತೆ? ‌

ಸ್ಮೃತಿ ಮಂದಾನಗೆ ಮೋಸ ಮಾಡಿದ್ರಾ ಪಲಾಶ್?‌  – ಮದುವೆ ದಿನವೇ ಸಿಕ್ರೇಟ್‌ ಲೀಕ್.. ಮುಂದೇನು ಕತೆ? ‌

ಎಲ್ಲವೂ ಅಂದುಕೊಂಡಂತೆ ಆಗಿರ್ತಿದ್ರೆ, ಇಷ್ಟು ಹೊತ್ತಿಗೆ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರ್ತಿದ್ರು. ಆದ್ರೆ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಮಂದಾನ ತಂದೆಗೆ ಹೃದಯಾಘಾವಾಗಿದೆ. ತಂದೆ ಆಸ್ಪತ್ರೆ ಸೇರ್ತಿದ್ದಂತೆ ಭಾನುವಾರ ನಡೆಯಬೇಕಿದ್ದ ಮದುವೆಯನ್ನ ಕೂಡ ಮುಂದೂಡಲಾಗಿತ್ತು. ಇದ್ರ ಬೆನ್ನಲ್ಲೇ ಪಲಾಶ್‌ ಕೂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೀಗ ಹೊಸ ವಿಚಾರ ಬೆಳಕಿಗೆ ಬಂದಿದೆ. ಸ್ಮೃತಿ, ಪಲಾಶ್‌ ಬಾಳಲ್ಲಿ ಮತ್ತೊಬ್ಬಳ ಎಂಟ್ರಿಯಾಗಿದೆ ಅನ್ನೋ ಸುದ್ದಿ ಸುಂಟರಗಾಳಿಯಂತೆ ಹಬ್ಬುತ್ತಿದೆ.

ಇದನ್ನೂ ಓದಿ: CMS ಸಿಬ್ಬಂದಿಗೆ 7 ಕೋಟಿ ರೂಪಾಯಿಗಿಂತ ಊಟವೇ ಮುಖ್ಯ ಆಯ್ತಾ? – ಬಗೆದಷ್ಟು ಬಯಲಾಗುತ್ತಿದೆ ದರೋಡೆ ರಹಸ್ಯ!

ಕಳೆದ ಭಾನುವಾರ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹಾಗೂ ಫಿಲ್ಮ್‌ ಮೇಕರ್ ಹಾಗೂ ಖ್ಯಾತ ಸಿಂಗರ್ ಆಗಿರುವ ಪಲಾಶ್ ಮುಚ್ಚಲ್ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ನವೆಂಬರ್ 23ರಂದು ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತ-ಸ್ನೇಹಿತೆಯರ ಸಮ್ಮುಖದಲ್ಲಿ ಮದುವೆಯಾಗಲು ಎಲ್ಲಾ ಸಿದ್ದತೆ ನಡೆಸಿದ್ದರು. ಇವೆಲ್ಲದ್ರ ನಡುವೆ ಸ್ಮೃತಿ ಮಂದಾನ ಅವರ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾಗಿದ್ದರಿಂದ ಮದುವೆ ಮುಂದೂಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿತು. ತಮ್ಮ ತಂದೆ ಅನಾರೋಗ್ಯಕ್ಕೆ ಒಳಗಾದಾಗ ತಾವು ಸಂಭ್ರಮದಿಂದ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಸ್ಮೃತಿ ಮಂದಾನ ಮದುವೆ ಮುಂದೂಡಿದ್ದಾರೆ ಎಂದು ವರದಿಯಾಗಿತ್ತು. ಇದ್ರ ಬೆನ್ನಲ್ಲೇ ಮಂದಾನ ತಮ್ಮ ಎಂಗೇಜ್‌ಮೆಂಟ್‌ ಹಾಗೂ ಮದುವೆ ಸಂಭ್ರಮದ ಫೋಟೋ, ವಿಡಿಯೋ ಡಿಲೀಟ್‌ ಮಾಡಿದ್ದು ಸಾಕಷ್ಟು ಅನುಮಾನ ಹುಟ್ಟುಹಾಕಿತ್ತು. ಇದೀಗ ಮತ್ತೊಂದು ಸೋಷಿಯಲ್ ಮೀಡಿಯಾ ಚಾಟ್‌ ಲೀಕ್ ಆಗಿದೆ. ಇದ್ರ ಬೆನ್ನಲ್ಲೇ ಸ್ಮೃತಿಗೆ ಮೋಸ ಮಾಡಿದ್ರಾ ಪಲಾಶ್ ಮುಚ್ಚಲ್ ಎಂಬ ಅನುಮಾನಗಳನ್ನು ಶುರುವಾಗಿದೆ.

ಮೇರಿ ಡಿ’ಕೋಸ್ಟಾ ಎಂಬ  ಮಹಿಳೆಯೊಬ್ಬರು ಪಲಾಶ್ ಮುಚ್ಚಲ್ ಅವರೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಚಾಟ್ ಮಾಡಿರುವ ಸ್ಕ್ರೀನ್‌ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾರೆ. ಅದೂ ಕೂಡ ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ಮುಂದೂಡಿದ ಕೆಲವೇ ಗಂಟೆಗಳಲ್ಲಿ ಈ ಸ್ಕ್ರೀನ್‌ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ವೈರಲ್‌ ಆದ ಈ ಚಾಟ್‌ನಲ್ಲಿ ಪಲಾಶ್ ಮುಚ್ಚಲ್, ಸ್ಮೃತಿ ಮಂದಾನ ಜತೆಗಿನ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್ ಹಾಗೂ ಆಕೆಯ ಜತೆ ಟೂರ್ ಹೋಗುವುದರ ಬಗ್ಗೆ ಆಗುವ ಸವಾಲುಗಳ ಬಗ್ಗೆ ಪಲಾಶ್ ಮುಚ್ಚಲ್ ಚಾಟ್ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ, ಮೇರಿ ಡಿ’ಕೋಸ್ಟಾ ಅವರ ಜತೆ ಪಲಾಶ್ ಮುಚ್ಚಲ್ ಫ್ಲರ್ಟ್ ಮಾಡುವ ರೀತಿಯಲ್ಲಿಯೂ ಚಾಟ್ ಮಾಡಿದ್ದಾರೆ. ಇದರ ಜತೆಗೆ ಆಕೆಯನ್ನು ತಮ್ಮ ಜತೆ ಈಜಾಡಲೂ ಕರೆದಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಇದೆಲ್ಲವನ್ನು ಗಮನಿಸಿದ್ರೆ ಪಲಾಶ್ ಮುಚ್ಚಲ್, ಸ್ಮೃತಿ ಮಂದಾನ ಅವರ ಪ್ರೀತಿಗೆ ಮೋಸ ಮಾಡಿದ್ರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಮತ್ತೊಂದ್ಕಡೆ, ಪಲಾಶ್ ತಾಯಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಲಾಶ್‌ ಸ್ಮೃತಿಯ ತಂದೆಯೊಂದಿಗೆ ತುಂಬಾ ಬಾಂಧವ್ಯ ಹೊಂದಿದ್ದಾರೆ. ಸ್ಮೃತಿಗಿಂತಲೂ ಅವರು ಅವರೊಂದಿಗೆ ಹೆಚ್ಚು ಆತ್ಮೀಯ ಒಡನಾಟ ಹೊಂದಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾದ ಕೂಡಲೇ ಸ್ಮೃತಿಗಿಂತ ಮೊದಲೇ ಅವರು ಗುಣಮುಖರಾಗುವವರೆಗೂ ಮದುವೆಯ ಆಚರಣೆಗಳನ್ನು ಮುಂದುವರಿಸಬಾರದು ಎಂದು ಪಲಾಶ್ ನಿರ್ಧರಿದರು ಎಂದು ಅವರು ಹೇಳಿದರು. ಇದೀಗ ಸ್ಮೃತಿ ಹಾಗೂ ಪಲಾಶ್‌ ಈ ಬಗ್ಗೆ ಪ್ರತಿಕ್ರಿಯಿಸುತ್ತಾರಾ? ಹರಿದಾಡ್ತಿರೋ ಗಾಳಿ ಸುದ್ದಿಗೆ ಬ್ರೇಕ್‌ ಹಾಕ್ತಾರಾ ಅಂತ ಕಾದುನೋಡ್ಬೇಕು.

Shwetha M